Mangaluru: ಕೊಲೆಯತ್ನ ಪ್ರಕರಣ ವಿರುದ್ಧ ಸಾಕ್ಷಿ ನುಡಿದ ಸಾಕ್ಷಿದಾರರು; ಸಿಸಿ ಕ್ಯಾಮೆರಾ ದೃಶ್ಯಾವಳಿ, ಫೊರೆನ್ಸಿಕ್ ವರದಿ ಸಾಕ್ಷಿ ಆಧರಿಸಿ ಶಿಕ್ಷೆ ನೀಡಿದ ನ್ಯಾಯಾಲಯ
Mangaluru: ಸಾಕ್ಷಿದಾರರು ಕೊಲೆಯತ್ನ ಪ್ರಕರಣದಲ್ಲಿ ರಾಜಿಯಾಗಿದ್ದು, ಅನಂತರ ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ಹೇಳಿದರೂ ತನಿಖಾಧಿಕಾರಿ ಹಾಜರುಪಡಿಸಿದ ಸಿಸಿ ಕೆಮರಾ ದೃಶ್ಯಾವಳಿ ಮತ್ತು ಪೊರೆನ್ಸಿಕ್ ವರದಿಯನ್ನು ನ್ಯಾಯಾಲಯವು ಬಲವಾದ ಸಾಕ್ಷಿ ಎಂದು ಪರಿಗಣಿಸಿದ್ದು, ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆಯನ್ನು ನೀಡಿದೆ.
Bihar: ಹಾವು ತನಗೆ ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ; ಮುಂದೆ ನಡೆದದ್ದು ಪವಾಡ
ಸುರತ್ಕಲ್ ಇಡ್ಯಾ ಗ್ರಾಮದ ಕಾನಕಟ್ಲ ಜನತಾ ಕಾಲನಿ ನಿವಾಸಿಯಾದ ರಾಜೇಶ್ ದೇವಾಡಿಗ ಯಾನೆ ರಾಜಾ (42) ಮತ್ತು ಜೋಕಟ್ಟೆ 62 ನೇ ತೋಕೂರು ಶೇಡಿಗುರಿ ಗ್ರಾಮದ ಜಗದೀಶ್ ಯಾನೆ ಜಗ್ಗು (45) ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರಕರಣದ ವಿವರ: 2016 ರಲ್ಲಿ ನಡೆದ ಹಲ್ಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿರುವ ರಾಜೇಶ್ ಅವರು ಕೋರ್ಟ್‌ಗೆ ಹಾಜರಾಗದೇ ಇದ್ದಿದ್ದರಿಂದ ಪದೇ ಪದೇ ಪ್ರಕರಣದ ವಿಚಾರಣೆ ದಿನಾಂಕ ಮುಂದೂಡಲಾಗುತ್ತಿತ್ತು. ಇದು ದೂರುದಾರ ಇಡ್ಯಾ ಜನತಾ ಕಾಲನಿ ನಿವಾಸಿ ಜೀವನ್ ಮಸ್ಕರೇನಸ್ (28) ಎಂಬುವವರಿಗೆ ತುಂಬಾ ತೊಂದರೆಯಾಗಿ, ಇವರಿಬ್ಬರ ನಡುವೆ ಮಾತಿನ ವಾಗ್ವಾದ ನಡೆದಿದೆ.
2019 ರ ಡಿ.14 ರ ರಾತ್ರಿ 10.30 ರ ಸಮಯದಲ್ಲಿ ಇಡ್ಯಾ ಬಳಿಯ ಬಾರಿನಲ್ಲಿ ಜೀವನ್ ಹಾಗೂ ಆತನ ಗೆಳೆಯ ಪ್ರಶಾಂತ್ ಎಂಬುವವರು ಮದ್ಯ ಸೇವಿಸುತ್ತಿರುವ ಸಂದರ್ಭದಲ್ಲಿ ರಾಜೇಶ್ ಮತ್ತು ಜಗದೀಶ್ ಅಲ್ಲಿಗೆ ಬಂದಿದ್ದು, ಜೀವನ್‌ನನ್ನು ನೋಡಿದ್ದು, ಕೂಡಲೇ ಕತ್ತಿ ತಂದು ಭುಜಕ್ಕೆ, ಬಲಕೈ ಮತ್ತು ಮೊಣಗಂಟಿಗೆ ಹೊಡೆದು ಭೀಕರವಾಗಿ ಹಲ್ಲೆ ಮಾಡಿದ್ದ.
ಸುರತ್ಕಲ್‌ನ ಅಂದಿನ ಪಿಎಸ್‌ಐ ಸುಂದರಿ ದೋಷಾರೋಪಣೆ ಪಟ್ಟಿಯಲ್ಲಿ ಸಲ್ಲಿಸಿದ್ದು, ಜೊತೆಗೆ ಬಾರ್‌ನ ಸಿಸಿ ಕೆಮರಾ ದೃಶ್ಯಾವಳಿಯನ್ನು ಕೂಡಾ ಸಾಕ್ಷಿಯಾಗಿ ಸಂಗ್ರಹ ಮಾಡಿದ್ದರು.
ಈ ಪ್ರಕರಣದಲ್ಲಿ 31 ಸಾಕ್ಷಿದಾರರು, 58 ದಾಖಲೆಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಾಕ್ಷಿದಾರರು ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ನುಡಿದರೂ ನ್ಯಾಯಾಲಯವು ಸಿಸಿ ಕೆಮರಾ ದೃಶ್ಯಾವಳಿ ಮತ್ತು ಪೊರೆನ್ಸಿಕ್ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಿ, ರಾಜೇಶ್ ಗೆ 323 ದಿನಗಳ ಸಾದಾ ಸಜೆ, 2 ಸಾವಿರ ರೂ. ದಂಡ, ಜಗದೀಶನಿಗೆ 39 ದಿನಗಳ ಸಾದಾ ಸಜೆ, ಎರಡು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಇವರಿಬ್ಬರೂ ವಿಚಾರಣಾಧೀನ ಕೈದಿಗಳಾಗಿ ಅದಕ್ಕಿಂತಲೂ ಹೆಚ್ಚು ದಿನ ಜೈಲಿನಲ್ಲಿದ್ದ ಕಾರಣ ಜೈಲು ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ.