KOCHIMUL: ರೈತರಿಗೆ ಬಿಗ್ ಶಾಕ್ – ಹಾಲು ಖರೀದಿ ದರದಲ್ಲಿ 2 ರೂ ಕಡಿತ !!

Share the Article

KOCHIMUL: ಕೆಎಂಎಫ್ (KMF) ಹಾಲಿನ ದರ (Milk Price) ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಬೆನ್ನಲ್ಲೇ ಇದೀಗ ರೈತರಿಗೂ ಶಾಕ್ ಎದುರಾಗಿದೆ. ರೈತರಿಗೆ (Farmers) ನೀಡುವ ಹಾಲಿನ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (KOCHIMUL) ಆದೇಶ ಹೊರಡಿಸಿದೆ.

Udupi: ಬಸ್‌ನಲ್ಲೇ ಪ್ರಿಯತಮೆ ಜೊತೆ ಜಗಳ; ರಸ್ತೆಯಲ್ಲಿ ಬಸ್‌ ನಿಲ್ಲಿಸಿ ಹೋದ ಚಾಲಕ

ಹೌದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್‌) ಆಡಳಿತ ಮಂಡಳಿಯು ಶುಕ್ರವಾರದಿಂದಲೇ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಕಡಿತಗೊಳಿಸಿ ಆದೇಶಿಸಿದ್ದು, ಪ್ರತಿ ಲೀಟರ್‌ಗೆ ಇನ್ನು ಮುಂದೆ 33.4 ರೂ. ಬದಲಿಗೆ 31.4 ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಈಗಷ್ಟೇ ಮುಂಗಾರು ಆರಂಭವಾಗಿ ರೈತರು ನಿಟ್ಟುಸಿರು ಬಿಡುತ್ತಿದ್ದ ವೇಳೆ ಕೋಚಿಮುಲ್ ಆಡಳಿತ ಮಂಡಳಿ ದಿಢೀರ್‌ 2 ರೂ. ಕಡಿಮೆ ಮಾಡಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಯಾಕೆ ಈ ನಿರ್ಧಾರ?
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್‌)ಗೆ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್‌ಗೆ 9.65 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್‌ಗೆ 12.37 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಸಂಘಗಳಿಗೆ ನೀಡುವ ದರವನ್ನು ಪರಿಷ್ಕರಿಸಿದೆ. ಅದರಂತೆ, ಸಂಘಗಳು ರೈತರಿಗೆ ನೀಡುವ ದರವನ್ನು ಕಡಿತಗೊಳಿಸಿವೆ.

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌ಗೆ 40 ಲಕ್ಷ ಕೊಟ್ಟಿದ್ದ ಮಾಜಿ ಉಪಮೇಯರ್‌ಗೆ ನೋಟಿಸ್‌

 

Leave A Reply