Landslide at Mangalore: ಮಣ್ಣು ಕುಸಿತ ದುರಂತ; ಮಳೆಗಾಲ ಮುಗಿಯುವವರೆಗೆ ಕಟ್ಟಡ ಕಾಮಗಾರಿಗೆ ಬ್ರೇಕ್‌- ಮಾನಾಪ ಆಯುಕ್ತ ಆನಂದ್‌ ಸಿ.ಎಲ್‌.ಆದೇಶ

Share the Article

Landslide at Mangalore: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೆ ಯಾವುದೇ ಕಟ್ಟಡ ಕಾಮಗಾರಿ ನಡೆಸದಂತೆ ಮಂಗಳೂರು ಪಾಲಿಕೆ ಆಯುಕ್ತ ಸಿ.ಎಲ್‌.ಆನಂದ್‌ ಆದೇಶ ನೀಡಿದ್ದಾರೆ. ಇಂದು ನಗರದ ಬಲ್ಮಠ ರೋಡ್‌ ಸಮೀಪ ನಿರ್ಮಾಣ ಹಂತದ ಕಟ್ಟಡದ ಬಳಿ ಮಣ್ಣು ಕುಸಿದು ಓರ್ವ ಕಾಮಿಕ ಮೃತ್ಯು ಹೊಂದಿದ್ದ. ಈ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಹಾಗೂ ಈ ಮೂಲಕ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಪಾಲಿಕೆ ಆಯುಕ್ತರಿಂದ ಎಚ್ಚರಿಕೆ ನೀಡಿದ್ದಾರೆ.

Kangana Ranaut Slapped: ನಟಿ, ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಎಫ್‌ ಮಹಿಳಾ ಕಾನ್ಸ್‌ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ

ಭೂ ಅಗೆತವನ್ನು ಅವೈಜ್ಞಾನಿಕ ರೀತಿಯಲ್ಲಿ ಮಾಡುವುದು, ಇದರಿಂದ ಜೀವ ಹಾನಿ, ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಈ ಕಾರಣದಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಬಾರದು.

ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಬೇಕು. ಇದನ್ನು ಉಲ್ಲಂಘನೆ ಮಾಡಿದ್ದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಹವಾಮಾನ ಇಲಾಖೆ ರೆಡ್‌, ಆರೆಂಜ್‌, ಎಲ್ಲೋ ಅಲರ್ಟ್‌ ಬಗ್ಗೆ ನಿರಂತರವಾಗಿ ಮುನ್ಸೂಚನೆ ನೀಡುತ್ತಿದ್ದರೂ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಗಿಯುವವರೆಗೆ ನಡೆಸದಂತೆ ತಿಳಿಸಲಾಗಿದೆ.

Mangaluru: ನಿರ್ಮಾಣ ಹಂತದ ಕಟ್ಟಡ ಭೂಕುಸಿತ ಪ್ರಕರಣ; ಓರ್ವ ಕಾರ್ಮಿಕ ಮೃತ್ಯು

Leave A Reply