Home News Football: ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಅಂತ್ಯಕ್ರಿಯೆಯನ್ನು ನಿಲ್ಲಿಸಿದ ಕುಟುಂಬ; ವಿಡಿಯೋ ವೈರಲ್

Football: ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಅಂತ್ಯಕ್ರಿಯೆಯನ್ನು ನಿಲ್ಲಿಸಿದ ಕುಟುಂಬ; ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Football: ಮನೆಯಲ್ಲಿ ಒಬ್ಬರ ಸಾವಾಗಿದೆ ಎಂದರೆ ಎಂತವರಿಗೂ ಯಾವುದೂ ಬೇಡ ಎಂಬ ಭಾವ ಬರುತ್ತದೆ. ಅಂತಹ ಪರಿಸ್ಥಿತಿ ಇಲ್ಲೊಂದು ಫ್ಯಾಮಿಲಿ ಶವಪೆಟ್ಟಿಗೆಯಲ್ಲಿ ತಮ್ಮ ಕುಟುಂಬದವರೊಬ್ಬರ ಶವವನ್ನು ಇಟ್ಟು ಪಂದ್ಯ ವೀಕ್ಷಣೆ ಮಾಡಿದ್ದಾರೆ.

Dakshina Kannada: ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಭೂ ಕುಸಿತ; ಮಣ್ಣಿನಡಿಯಲ್ಲಿ ಕಾರ್ಮಿಕರು

ದಕ್ಷಿಣ ಅಮೇರಿಕಾದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಪಂದ್ಯ ನಡೆಯುತ್ತಿದೆ ಎಂಬ ಕಾರಣಕ್ಕೆ ಕುಟುಂಬವೊಂದು ತಮ್ಮ ಕುಟುಂಬ ಸದಸ್ಯರ ಅಂತಿಮ ಸಂಸ್ಕಾರವನ್ನು ನಿಲ್ಲಿಸಿರುವ ಘಟನೆಯೊಂದು ನಡೆದಿದೆ. ವಿಡಿಯೋ ನೋಡಿ ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.

ದಕ್ಷಿಣ ಅಮೆರಿಕದ ಚಿಲಿಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಒಂದು ಕುಟುಂಬವು ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಅಂತ್ಯಕ್ರಿಯೆಯನ್ನು ನಿಲ್ಲಿಸಿದ್ದು, ಇದರ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ.

ಶವಪೆಟ್ಟಿಗೆಯನ್ನು ಹೂವುಗಳು ಮತ್ತು ಫುಟ್ಬಾಲ್ ಆಟಗಾರರ ಜೆರ್ಸಿಗಳಿಂದ ಅಲಂಕರಿಸಲಾಗಿದ್ದು, ದೊಡ್ಡ ಪರದೆಯ ಪ್ರೊಜೆಕ್ಟರ್‌ನಲ್ಲಿ ಚಿಲಿ ಮತ್ತು ಪೆರು ನಡುವಿನ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಿದೆ.

ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಫುಟ್ಬಾಲ್‌ ರೋಚಕ ಪಂದ್ಯ ಆರಂಭಗೊಂಡಿದೆ. ಕೂಡಲೇ ಮನೆಮಂದಿ ಫುಟ್ವಾಲ್‌ ವೀಕ್ಷಿಸಲು ಅಂತ್ಯಸಂಸ್ಕಾರ ಸ್ಥಗಿತಗೊಳಿಸಿದ್ದು, ಮೃತದೇಹದ ಮುಂದೆ ಕುಳಿತು ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಎಲ್ಲಾ ಕುಳಿತು ಸಂಪೂರ್ಣ ಪಂದ್ಯ ವೀಕ್ಷಿಸಿ ನಂತರ ಅಂತ್ಯಸಂಸ್ಕಾರ ವೀಕ್ಷಿಸಿದ್ದಾರೆ. ನಂತರ ಮೃತದೇಹದ ವಿಧಿವಿಧಾನಗಳನ್ನು ಪೂರೈಸಲು ಸಮುದಾಯದ ಹಿರಿಯರು ಪಾದ್ರಿಗಳು ಬಂದಿದ್ದು, ಎಲ್ಲಾ ಕಾರ್ಯ ಮುಗಿಸಿದ್ದಾರೆ.

ಚಿಲಿ ಹಾಗೂ ಪೆರು ನಡುವಿನ ರೋಚಕ ಫುಟ್ಬಾಲ್‌ ಪಂದ್ಯ ವೀಕ್ಷಿಸಿದ್ದು, ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಕುಟುಂಬದವರು ನಿರಾಸೆಗೊಂಡಿದ್ದಾರೆ ಎಂದು ಹೇಳಿದ್ದಾರೆ. ಅಂತೂ ಮನೆಯಲ್ಲಿ ಒಂದು ಸಾವಾಗಿದೆ ಎನ್ನುವುದರ ನೋವಿಗಿಂತ ಪಂದ್ಯದ ಕುರಿತು ಮರುಕಪಟ್ಟಿದ್ದು ನಿಜಕ್ಕೂ ವಿಶೇಷ.

Traffic Rules: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ತಪ್ಪಿಸಿಕೊಳ್ತೀರಾ? ಇನ್ಮೇಲೆ ದಂಡ ಕಟ್ಟಿಸಲು ಸರ್ಕಾರದಿಂದ ಹೊಸ ಪ್ಲಾನ್!