Man Ki Bhat: 3ನೇ ಬಾರಿ ಪ್ರಧಾನಿ ಆದ ಬಳಿಕ ಮೊದಲ ‘ಮನ್ ಕಿ ಬಾತ್’ ಪ್ರಸಾರ – ಏನೆಲ್ಲಾ ವಿಚಾರ ತೆರೆದಿಟ್ಟರು ಮೋದಿ ?!
Man Ki Bhat: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಪಟ್ಟ ಅಲಂಕರಿಸಿದ ಬಳಿಕ ಅವರ ಜನಪ್ರಿಯ ಕಾರ್ಯಕ್ರಮ ಮೊದಲ ‘ಮನ್ ಕಿ ಬಾತ್ ಕಾರ್ಯಕ್ರಮ'(Man ki Bhat) ಪ್ರಸಾರವಾಗಿದ್ದು ಮೋದಿಯವರು(PM Modi) ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.
Rohit Sharma: ಟಿ20ಗೆ ವಿದಾಯ ಹೇಳಿದ ರೋಹಿತ್ ಶರ್ಮಾ, ಹೃದಯ ಗೆಲ್ಲುವ ಹೇಳಿಕೆ ನೀಡಿದ್ದೇನು?
ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಪ್ರಧಾನಿ ಮೋದಿಯವರ ಮಾಸಿಕ ‘ಮನ್ ಕಿ ಬಾತ್’ ಪ್ರಸಾರವನ್ನು ಫೆಬ್ರವರಿ 25 ರಂದು ಕೊನೆಯ ಬಾರಿಗೆ ಪ್ರಸಾರ ಮಾಡಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮುಂದಿನ ಮೂರು ತಿಂಗಳ ಕಾಲ ಮನ್ ಕಿ ಬಾತ್ ಅನ್ನು ಪ್ರಸಾರ ಮಾಡುವುದಿಲ್ಲ” ಎಂದು ಪ್ರಧಾನಿ ಮೋದಿ ತಮ್ಮ 110 ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಹೀಗಾಗಿ 3 ತಿಂಗಳ ಕಾಲ ಅದನ್ನು ನಿಲ್ಲಿಸಲಾಗಿತ್ತು. ಇದೀಗ ಅವರ ಮೂರನೇ ಅವಧಿಯಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಲಾಗಿದೆ. ಹಾಗಿದ್ರೆ ಮೋದಿ ಏನೆಲ್ಲಾ ಹೇಳಿದ್ದಾರೆ ಎಂದು ತಿಳಿಯೋಣ.
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಹಂಚಿಕೊಂಡ ವಿಚಾರಗಳು:
ಇದೀಗ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮವು 111ನೇ ಸಂಚಿಕೆಯಾಗಿದೆ. ಇದರಲ್ಲಿ ಮಾತನಾಡಿದ ಮೋದಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (NDA) ಅಧಿಕಾರಕ್ಕೆ ಮರು ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಲೋಕಸಭಾ ಚುನಾವಣೆಯನ್ನು ಶಾಂತಯುತವಾಗಿ ನಡೆಸಿಕೊಟ್ಟ ಎಲ್ಲಾ ಭಾರತೀಯರಿಗೂ ಧನ್ಯವಾದಗಳನ್ನು ತಿಳಿಸಿದರು. 65 ಕೋಟಿ ಜನರು ಮತ ಚಲಾಯಿಸಿದ ಜಗತ್ತಿನ ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ನಾನು ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಎಂದರು.
ಪ್ಯಾರಿಸ್ ಒಲಿಂಪಿಕ್ಸ್(Paris Olympic)ಬಗ್ಗೆ ಮಾತನಾಡಿದ ಅವರು, ಈ ಹೊತ್ತಿಗೆ ಮುಂದಿನ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಅದರಲ್ಲಿ ಭಾರತೀಯ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಟೋಕಿಯೊ ಒಲಿಂಪಿಕ್ಸ್‌ನ ನೆನಪುಗಳು ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಟೋಕಿಯೊದಲ್ಲಿ ನಮ್ಮ ಆಟಗಾರರ ಪ್ರದರ್ಶನವು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆದ್ದಿದೆ ಎಂದು ಹೇಳಿದರು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲು ‘Cheer4India’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಬೇಕೆಂದು ಮನವಿ ಮಾಡಿದರು.
ಅಲ್ಲದೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇರಳದ ಪಾಲಕಾಡ್‌ನಲ್ಲಿ ಆದಿವಾಸಿ ಮಹಿಳೆಯರು ತಯಾರಿಸುವ ಛತ್ರಿಗಳ ಬಗ್ಗೆಯೂ ಮಾತನಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಬೇಕು ಎಂದು ಭಾರತೀಯ ಆಟಗಾರರಿರಗೆ ಪ್ರಧಾನಿಗಳು ಶುಭಾಶಯಗಳನ್ನು ತಿಳಿಸಿದರು.
ಏನಿದು ಮನ್ ಕಿ ಬಾತ್ ಕಾರ್ಯಕ್ರಮ?
ಮನ್ ಕಿ ಬಾತ್ ಪ್ರಧಾನಿ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾಗಿದ್ದು, ಅಲ್ಲಿ ಅವರು ಭಾರತದ ಪ್ರಜೆಗಳ ಜತೆ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳನ್ನು ಹೊರತುಪಡಿಸಿ, ಮನ್ ಕಿ ಬಾತ್ ಅನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
3ನೇ ಅಕ್ಟೋಬರ್ 2014ರದು ಪ್ರಧಾನಿಗಳ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಿತ್ತು. ಇದುವರೆಗೂ 110 ಸಂಚಿಕೆಗಳು ಪ್ರಸಾರಗೊಂಡಿದ್ದು, ಇಂದು 111ನೇ ಎಪಿಸೋಡ್ ಟೆಲಿಕಾಸ್ಟ್ ಆಗಿದೆ. ಪ್ರತಿ ಸಂಚಿಕೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪರಿಚಯ ಮಾಡಿಸುತ್ತಾರೆ ರಾಜಕೀಯ ಸೇರಿ ದೇಶದ ವಿದ್ಯಾಮಾನಗಳ ಬಗ್ಗೆ ಚರ್ಚಿಸುತ್ತಾರೆ.
Vijayalakshmi Darshan: ಬೆಂಗಳೂರು ತೊರೆದ ದರ್ಶನ್ ಪತ್ನಿ ವಿಜಯಲಕ್ಷ್ಮೀ? ಮಗನನ್ನು ಕರೆದುಕೊಂಡು ಹೋಗಿದ್ದೆಲ್ಲಿಗೆ ?!