Belthangady: ವಿದ್ಯುತ್‌ ಸ್ಪರ್ಶಿಸಿ ಮೃತ ಪಟ್ಟ ಯುವತಿ ಪ್ರಕರಣ; ಪ್ರತೀಕ್ಷಾ ಕುಟುಂಬಕ್ಕೆ ಐದು ಲಕ್ಷ ನೀಡಲು ಮೆಸ್ಕಾಂಗೆ ಸೂಚನೆ

Share the Article

Belthangady: ಇಂದು ಸಂಜೆ (ಜೂ.27) ರಂದು ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟ ಪ್ರತೀಕ್ಷಾ ಶೆಟ್ಟಿ ಅವರ ಮನೆಯವರಿಗೆ ಐದು ಲಕ್ಷ ರೂ ಪರಿಹಾರ ನೀಡಲು ಮೆಸ್ಕಾಂಗೆ ವಿಧಾನಸಭಾ ಸ್ಪೀಕರ್‌ ಯು ಟಿ ಖಾದರ್‌ ಸೂಚನೆ ನೀಡಿದ್ದಾರೆ.

ಶಿಬಾಜೆ ಗ್ರಾಮದ ಬರ್ಗುಳ ನಿವಾಸಿ ಗಣೇಶ್‌ ಶೆಟ್ಟಿ ಮತ್ತು ರೋಹಿಣಿ ದಂಪತಿ ಅವರ ಪುತ್ರಿ ಪ್ರತೀಕ್ಷಾ ಶೆಟ್ಟಿ (21) ಮೃತ ಯುವತಿ.

ಸ್ಟೇ ವಯರ್‌ಗೆ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಅದು ನೀರಿಗೆ ಪ್ರವಹಿಸಿದ್ದು, ಪರಿಣಾಮ ವಿದ್ಯುತ್‌ ಶಾಕ್‌ ಹೊಡೆದಿದು, ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರತೀಕ್ಷಾ ಶೆಟ್ಟಿ ಅದಾಗಲೇ ಮೃತ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದರು.

ಈ ದುರ್ಘಟನೆಗೆ ಮೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದ ಕಾರಣ ಇಲಾಖೆಯ ವಿರುದ್ಧ ಐಪಿಸಿ 304 ಅಡಿಯಲ್ಲಿ ಕೇಸು ದಾಖಲು ಮಾಡಲು ಯು ಟಿ ಖಾದರ್‌ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಹರೀಶ್‌ ಪೂಂಜ ಅವರು ತಕ್ಷಣ ಸ್ಪಂದಿಸಿದ್ದು, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮೆಸ್ಕಾಂ ಇಲಾಖೆಗೆ ಸೂಚಿಸಿ, ರೂ.25 ಲಕ್ಷ ಪರಿಹಾರ ನೀಡುವಂತೆ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.

ಈಗಾಗಲೇ ಇಲಾಖೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಹೆಚ್ಚಿನ ಪರಿಹಾರಕ್ಕೆ ಶಿಫಾರಸು ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿರುವ ಕುರಿತು ವರದಿಯಾಗಿದೆ.

ಶಿಬಾಜೆ ಗ್ರಾಮದ ಬರ್ಗುಳ ಎಂಬಲ್ಲಿ ಗಣೇಶ್‌ ಶೆಟ್ಟಿ ಅವರ ಮಗಳಾದ ಕು.ಪ್ರತೀಕ್ಷಾ ಅವರು ಇಂದು ಸಂಜೆ (ಜೂ.27)  ಸುಮಾರು ನಾಲ್ಕರ ಹೊತ್ತಿಗೆ ತನ್ನ ಮನೆಯ ಎದುರು ಇದ್ದ ವಿದ್ಯುತ್‌ ಕಂಬದಿಂದ ವಿದ್ಯುತ್‌ ಪ್ರವಾಹವಾಗಿ ಅನಿರೀಕ್ಷಿತವಾಗಿ ಮರಣ ಹೊಂದಿದ್ದಾರೆ. ಈ ಕಂಬದಲ್ಲಿ ಇದು ಸತತವಾಗಿ ಮೂರನೇ ಬಾರಿ ವಿದ್ಯುತ್‌ ತೊಂದರೆಯಾಗುತ್ತಿರುವುದು ಎಂದು ಹೇಳಲಾಗಿದೆ.

ಈ ರೀತಿಯ ವಿದ್ಯುತ್‌ ಅವಘಡದ ಕುರಿತು ಈ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ, ಇಲಾಖೆ ನಿರ್ಲಕ್ಷ್ಯ ತೋರಿದರ ಪರಿಣಾಮ ಈ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇಲಾಖೆಯ ಈ ಬೇಜವಾಬ್ದಾರಿಯಿಂದ ಈ ಅವಘಡ ಸಂಬಂಧಿಸಿದ್ದು, ಇದರ ಜವಾಬ್ದಾರಿ ಹೊತ್ತು ಗಣೇಶ್‌ ಶೆಟ್ಟಿ ಅವರ ಕುಟುಂಬದ ಒಬ್ಬ ಸದಸ್ಯರಿಗೆ ವಿದ್ಯುತ್‌ ಇಲಾಖೆಯಲ್ಲಿ ಉದ್ಯೋಗ ಹಾಗೂ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.

Belthangady: ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿಗೆ ವಿದ್ಯುತ್‌ ಪ್ರವಹಿಸಿ ಸಾವು; ರಕ್ಷಣೆಗೆ ತೆರಳಿದ ತಂದೆಗೂ ವಿದ್ಯುತ್‌ ಆಘಾತ

Leave A Reply