C M Siddaramaiah: ಸಿಎಂ ಸ್ಥಾನ ತೊರೆಯುವ ಸುಳಿವು ನೀಡಿದ್ರಾ ಸಿದ್ದರಾಮಯ್ಯ?! ಏನು ಈ ಹೇಳಿಕೆಯ ಮರ್ಮ ?!

C M Siddaramaiah: ರಾಜ್ಯದಲ್ಲಿ ಸಿಎಂ(CM) ಬದಲಾವಣೆ ವಿಚಾರ ಆಗಾಗ ಚರ್ಚೆಗೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗಿನಿಂದ ಈ ವಿಚಾರ ಜೀವಂತವಾಗಿದೆ. ಸಿದ್ದರಾಮಯ್ಯನವರು ಎರಡೂವರೆ ವರ್ಷ ಮಾತ್ರ, ಮುಂದೆ ಡಿ ಕೆ ಶಿವಕುಮಾರ್ ಈ ಪಟ್ಟ ಅಲಂಕರಿಸುತ್ತಾರೆ ಎಂಬುದು ಇದರ ತರ್ಕ. ಆದರೀಗ ಅಚ್ಚರಿ ಎಂಬಂತೆ ಸಿದ್ದರಾಮಯ್ಯನವರು ನೀಡಿದ ಆ ಒಂದು ಹೇಳಿಕೆ ಸಿಎಂ ಪಟ್ಟ ತೊರೆಯುತ್ತಾರಾ? ಎಂಬ ಗುಮಾನಿ ಮೂಡಿದೆ.

ಹೌದು, ಸರ್ಕಾರ ರಚನೆ ಆದಾಗಿಂದಲೂ ಮುಖ್ಯಮಂತ್ರಿ ಬದಲಾವಣೆ ಕುರಿತು ಸಿದ್ದರಾಮಯ್ಯ(CM Siddaramaiah) ಹಾಗೂ ಡಿ ಕೆ ಶಿವಕುಮಾರ್‌(D K Shivkumar) ಬಣದ ನಾಯಕರು ಹೇಳಿಕೆ ನೀಡುತ್ತಿದ್ದು, ಈ ಬಣಗಳ ಕಿತ್ತಾಟಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌ ಹಾಕಿತ್ತು. ಆದರೆ, ಇದೀಗ ಮತ್ತೆ ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್‌ ಪಾಳಪಯದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಸಿದ್ದರಾಮಯ್ಯ ಹೇಳಿಕೆಯಂತೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಸಿದ್ದರಾಮಯ್ಯ ಹೇಳಿದ್ದೇನು?
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ(Hosapete) ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನಾನು ಬದಲಾವಣೆಯಾದರೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ಯಾರೇ ಮುಖ್ಯಮಂತ್ರಿ ಆದರೆ ಯೋಜನೆಗಳು ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಹಲವು ಗೊಂದಲಗಳು ಹುಟ್ಟುವಂತೆ ಮಾಡಿದೆ. ತಾನು ಬದಲಾಗುತ್ತೇನೆ ಎಂಬುದನ್ನು ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಹೇಳಿದ್ದಾರಾ? ಎನ್ನುವ ಪ್ರಶ್ನೆಗಳು ಹುಟ್ಟಿದೆ.

ಲೋಕಸಭಾ ಚುಣಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್‌ ಸರ್ಕಾರದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ವಿಪಕ್ಷಗಳ ಟೀಕೆಗೆ ಸಿದ್ದರಾಮಯ್ಯ ಅವರ ಹೇಳಿಕೆ ಪುಷ್ಟಿ ನೀಡಿದಂತಾಗಿದೆ.

Ayodhya Rama Mandir: ಅಯೋಧ್ಯೆಯ ಗರ್ಭಗುಡಿಯಲ್ಲಿ ಎದುರಾಯ್ತು ದೊಡ್ಡ ಸಮಸ್ಯೆ- ಇಂಜಿನಿಯರ್ ಗಳೇ ಕಕ್ಕಾಬಿಕ್ಕಿ !!

Leave A Reply

Your email address will not be published.