Paris: ಮಹಿಳೆ ಒಬ್ಬಳಿಗೆ ಕೆಲಸ ಕಾರ್ಯ ಏನು ಇಲ್ವಂತೆ! ಖ್ಯಾತ ಕಂಪನಿ ಮಾತ್ರ 20 ವರ್ಷ ಭರ್ಜರಿ ಸಂಬಳ ಕೊಟ್ಟಿದೆ!
ಆದ್ರೆ ಮಹಿಳೆ ಮಾಡಿದ್ದೇನು ಗೊತ್ತಾ?
Paris: ಕೆಲಸಕ್ಕೆ ತಕ್ಕ ಪ್ರತಿಫಲ ಬಯಸೋದು ನೌಕರರ ಹಕ್ಕು. ಆದ್ರೆ ಏನಿದು ವಿಚಿತ್ರ ಅಂದ್ರೆ, ಒಬ್ಬ ಯುವತಿಗೆ ಬರೋಬ್ಬರಿ 20 ವರ್ಷಗಳ ಕಾಲ ಕೆಲಸ ಕೊಡದೆ ಕಂಪನಿ ಸಂಬಳ ಬೇರೆ ನೀಡಿದೆಯಂತೆ. ಹೌದು, ಇದೀಗ ಯಾವುದೇ ಕೆಲಸ ಕೊಡದೆ 20 ವರ್ಷಗಳ ಕಾಲ ತನಗೆ ಸಂಬಳ ನೀಡಿದ ಕಂಪೆನಿ ವಿರುದ್ಧ ಮಹಿಳೆಯೊಬ್ಬರು (Women) ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ.
Health Risk: ಪ್ರತಿ ವರ್ಷ 44 ಲಕ್ಷ ಜನರು ಈ ಕಾಯಿಲೆಯಿಂದ ಸಾಯುತ್ತಿದ್ದಾರೆ, ಈ ತಪ್ಪಿನಿಂದ ಅಪಾಯ ಹೆಚ್ಚು
ಲಾರೆನ್ಸ್ ವ್ಯಾನ್ ವಾಸ್ಸೆನ್‌ಹೋವ್ ಎಂಬ ಮಹಿಳೆ ಆರೇಂಜ್ ಟೆಲಿಕಾಂ ಸಂಸ್ಥೆಯಲ್ಲಿ 1993ರಲ್ಲಿ ಕೆಲಸಕ್ಕೆ ಸೇರಿದ್ದರು. ಆದ್ರೆ ಆಕೆ ಪಾರ್ಶ್ವವಾಯು, ಮೂರ್ಛೆ ರೋಗದಿಂದ ಬಳಲುತ್ತಿದ್ದ ಲಾರೆನ್ಸ್ 2002ರಲ್ಲಿ ವರ್ಗಾವಣೆಗೆ ಕೋರಿದ್ದರು. ಆದರೆ ಕಂಪೆನಿ ವರ್ಗಾವಣೆ ಮಾಡಿದ್ದರೂ, ಅವರಿಗೆ ಯಾವುದೇ ನಿರ್ದಿಷ್ಟ ಕೆಲಸ ನೀಡಿರಲಿಲ್ಲ.
ವರ್ಗಾವಣೆ ನಂತರ ಇಪ್ಪತ್ತು ವರ್ಷದ
ವೇತನ ಕಂಪೆನಿ ನೀಡಿದೆ. ಈ ಪರಿಸ್ಥಿತಿಯಿಂದ ನಾನು ಒಂಟಿತನ ಹಾಗೂ ಅವಮಾನ ಅನುಭವಿಸಿದ್ದೇನೆ. ನನ್ನ ವೃತ್ತಿ ಬದುಕಿಗೆ ಧಕ್ಕೆಯಾಗಿದೆ ಎಂದು ಲಾರೆನ್ಸ್ ಕಂಪೆನಿ ವಿರುದ್ಧ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿ ಉತ್ತರವಾಗಿ ಆರೇಂಜ್ ಕಂಪೆನಿ, ಲಾರೆನ್ಸ್ ಅವರ ಅರೋಗ್ಯ ಸ್ಥಿತಿ ಪರಿಗಣಿಸಿ, ಅನುಕೂಲ ವಾತಾವರಣದಲ್ಲಿ ಕೆಲಸ ಮಾಡಲು ತಿಳಿಸಿದ್ದೆವು. ಅವರ ನಿರಂತರ ಅನಾರೋಗ್ಯ ರಜೆಯಿಂದ ಕಂಪನಿಗೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ತಿಳಿಸಿದೆ.
NASA: ಇನ್ನು 14 ವರ್ಷಗಳಲ್ಲಿ ಜಗತ್ತು ಅಂತ್ಯವಾಗುವುದೇ? ನಾಸಾದಿಂದ ಭಯಾನಕ ಮಾಹಿತಿ