Crime News: ಬ್ಯಾಂಕ್‌ ಸಿಇಓಗೆ ತನ್ನ ಮೈ ಮಾಟ ತೋರಿಸಿ ಮಹಿಳೆ ಲೂಟಿ ಮಾಡಿದ್ದು 4 ಕೋಟಿಗೂ ಅಧಿಕ

Share the Article

Crime News: ಬ್ಯಾಂಕ್‌ ಲೋನ್‌ಗೆಂದು ಬ್ಯಾಂಕ್‌ಗೆ ಹೋದ ಮಹಿಳೆಯೊಬ್ಬರು ನಂತರ ಬ್ಯಾಂಕ್‌ ಸಿಬ್ಬಂದಿ ದಾಖಲೆಗಳು ಸರಿ ಇಲ್ಲ ಎಂದು ಹೇಳಿ ಲೋನ್‌ ನೀಡಲು ನಿರಾಕರಣೆ ಮಾಡಿದ್ದಾರೆ. ಆದರೆ ನಂತರ ದಾಖಲೆಗಳ ಪರಿಶೀಲನೆಗೆಂದು ಮನೆಗೆ ಬಂದ ಬ್ಯಾಂಕ್‌ ಅಧಿಕಾರಿಗೆ ತನ್ನ ಮೈ ಮಾಟ ತೋರಿಸಿ ಬಲೆಗೆ ಬೀಳುವಂತೆ ಮಾಡಿದ ಈ ಮಹಿಳೆ ನಂತರ ಬ್ಯಾಂಕ್‌ ಅಧಿಕಾರಿ ಸಂಪೂರ್ಣ ದಿವಾಳಿಯಾಗುವಂತೆ ಮಾಡಿದ್ದಾಳೆ.

 

45 ವರ್ಷದ ಥಾಣೆ ಮೂಲದ ಮಹಿಳೆಯೊಬ್ಬಳು ಬ್ಯಾಂಕ್‌ ಅಧಕಾರಿಗೆ ಬ್ಲಾಕ್‌ಮೇಲ್‌ ಮಾಡಿ ಇದಕ್ಕೆ ಬೆದರಿದ ಬ್ಯಾಂಕ್‌ ಸಿಇಓ ತನ್ನ ಮನೆ, ಫ್ಲ್ಯಾಟ್‌ ಸೇರಿ ಎಲ್ಲಾ ಮಾರಿ ಹಣ ಕಳೆದು, ಕೈ ತುಂಬಾ ಸಾಲ ಮಾಡಿದರೂ ಈ ಧನದಾಹಿ ಹೆಣ್ಣಿನ ಆಸೆ ಈಡೇರಿಸಲು ಸಾಧ್ಯವಾಗದೇ ನಂತರ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ.

Hijab Ban: ಹಿಜಾಬ್ ಬ್ಯಾನ್ ಮಾಡಿದ ಮುಸ್ಲಿಂ ರಾಷ್ಟ್ರ ಕಜಕಿಸ್ತಾನ – ಪಬ್ಲಿಕ್ ಪ್ಲೇಸ್ ಗಳಲ್ಲಿ ಧರಿಸಿದ್ರೆ 5 ಲಕ್ಷ ದಂಡ !!

ಈ ಕುರಿತು ಇದೀಗ ಪೊಲೀಸರು ವ್ಯಕ್ತಿ ನೀಡಿದ ದೂರಿನನ್ವಯ ಮಹಿಳೆಯನ್ನು ಬಂಧನ ಮಾಡಿದ್ದಾರೆ. ನಿಮಗೆ ಆಶ್ಚರ್ಯ ಆಗಬಹುದು ಈ ನಿವೃತ್ತ ಬ್ಯಾಂಕ್‌ ಸಿಇಒ ಈಕೆಯ ಜೊತೆ ಕಳೆದ ಕೆಲ ಕ್ಷಣಗಳಿಗಾಗಿ ಕಳೆದಿರುವುದು ಭರ್ಜರಿ 4 ಕೋಟಿ ರೂ ಗೂ ಅಧಿಕ.

ಮಹಿಳೆ 2016 ರಲ್ಲಿ ಮೊದಲ ಬಾರಿ ಮಹಿಳೆಯನ್ನು ಭೇಟಿಯಾಗಿದ್ದು, ತನ್ನ ಬ್ಯಾಂಕ್‌ನ ವಡಾಲಾ ಬ್ರಾಂಚ್‌ನಲ್ಲಿ ಪರಿಚಿತರೊಬ್ಬರ ಮೂಲಕ ಈಕೆಯೊಂದಿಗೆ ಬ್ಯಾಂಕ್‌ ಸಿಇಒ ಭೇಟಿಯಾಗಿದ್ದು, ನಂತರ ಮಹಿಳೆ ತನ್ನ ಆರ್ಥಿಕ ಸಂಕಷ್ಟ ಹೇಳಿದ್ದು, ತನಗೆ ಲೋನ್‌ ಬೇಕೆಂದು ಹೇಳಿದ್ದಾಳೆ. ಆದರೆ ಲೋನ್‌ ಪ್ರಕ್ರಿಯೆಯ ವೇಳೆ ಆಕೆ ನೀಡಿದ ಡಾಕ್ಯುಮೆಂಟ್‌ಗಳು ಸರಿ ಇಲ್ಲ ಎಂದು ವ್ಯಕ್ತಿಗೆ ಅರಿವಾಗಿದ್ದು, ಆಕೆ ಮನೆಯನ್ನು ಸರ್ವೆ ಮಾಡಲು ಮುಂದಾಗಿದ್ದು, ಅದರಂತೆ ಥಾಣೆಯ ಕೊಪ್ರಿ ಬಳಿ ಇರುವ ಆನಂದ್‌ ನಗರ ಪ್ರದೇಶದಲ್ಲಿರುವ ಮನೆಗೆ ಸಮೀಕ್ಷೆಗೆಂದು ಸಿಇಒ ಒಬ್ಬರೇ ಹೋಗಿದ್ದಾರೆ.

ಅಲ್ಲಿ 2017 ರಲ್ಲಿ ಫೆಬ್ರವರಿಯಲ್ಲಿ ಈಕೆಯ ಮನೆಗೆ ಹೋಗಿದ್ದು, ಅಲ್ಲಿ ಮಹಿಳೆ ತನ್ನ ಮೈಮಾಟ ತೋರಿಸಿದ್ದು, ಮಂಚಕ್ಕೆ ಕರೆದಿದ್ದಾಳೆ. ನಂತರ ಪ್ರತಿ ತಿಂಗಳು 7300 ರೂ. ಇಎಂಐ ಕಟ್ಟುವಂತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. ಒಂದು ತಿಂಗಳ ಬಳಿಕ ಮಹಿಳೆ ಸಿಇಓ ನನ್ನು ಬ್ಲಾಕ್‌ಮೇಲ್‌ ಮಾಡಲು ಶುರು ಮಾಡಿದ್ದು, ಆತನ ಕುಟುಂಬದವರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸುವುದಾಗಿ ತನಗೆ 8 ಕೋಟಿ ಹಣ ನೀಡಲು ಹೇಳಿದ್ದಾಳೆ.

ಇದಕ್ಕೆ ಹೆದರಿದ ಸಿಇಒ 5ಲಕ್ಷ ರೂಪಾಯಿ ಮೊದಲಿಗೆ ನೀಡಿದ್ದು, ನಂತರ ಬ್ಲಾಕ್‌ಮೇಲ್‌ ಹೆಚ್ಚಾದ ಹಾಗೆ 108 ಇನ್ಸ್ಟಾಲ್‌ಮೆಂಟ್‌ನಲ್ಲಿ ಒಟ್ಟು 4 ಕೋಟಿ 39 ಲಕ್ಷ ರೂಪಾಯಿ ಆಕೆಗೆ ನೀಡಿದ್ದಾರೆ.

ಇಷ್ಟಾದರೂ ನಿಲ್ಲದ ಬ್ಲಾಕ್‌ಮೇಲ್‌ನಿಂದ ಬೇಸತ್ತ ಬ್ಯಾಂಕ್‌ ಸಿಇಒ ಪೊಲೀಸರನ್ನು ಸಂಪರ್ಕ ಮಾಡಿದ್ದು, ಕೂಡಲೇ ಪೊಲೀಸರು ಮಹಿಳೆಯನ್ನು ಬಂಧನ ಮಾಡಿದ್ದು, ಕಂಬಿ ಹಿಂದೆ ಕಳುಹಿಸಿದ್ದಾರೆ.

ಮಹಿಳೆಯ ಮೋಹದ ಜಾಲಕ್ಕೆ ಬಿದ್ದು, ಬ್ಯಾಂಕ್‌ ಸಿಬ್ಬಂದಿ ಭಾರೀ ಬೆಲೆ ತೆರಬೇಕಾಗಿ ಬಂದಿದ್ದು ದುರದೃಷ್ಟಕರ.

Kodi Mutt Shri: ದೇಶದಲ್ಲಿ ಸಂಭವಿಸಲಿದೆ ‘ಪಂಚಘಾತಕಗಳು’ – ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ !!

Leave A Reply