Renukaswamy Murder Case: ‘ಸತ್ಯಮೇವ ಜಯತೆ’ – ಮೌನ ಮುರಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಿಷ್ಟು !!

Share the Article

Renukaswamy Murder Case ಅಲ್ಲಿ ಆರೋಪಿಯಾಗಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಅಂಧರ್ ಆಗಿದ್ದಾರೆ. ಇದೀಗ ಮೊದಲ ಬಾರಿಗೆ ಈ ಪ್ರಕರಣದ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.

 

View this post on Instagram

 

A post shared by Vijayalakshmi darshan (@viji.darshan)


ಹೌದು, ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಪತ್ನಿ(Darshan Wife) ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ರೇಣುಕಾಸ್ವಾಮಿ ನಿಧನಕ್ಕೆ ವಿಜಯಲಕ್ಷ್ಮಿ (Vijayalakshmi) ಸಂತಾಪ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ‘ಮೃತ ರೇಣುಕಾಸ್ವಾಮಿಗೆ ಸಂತಾಪವನ್ನು ಸೂಚಿಸುತ್ತೇನೆ. ನನ್ನ ಹದಿಹರೆಯದ ಮಗ ಹಾಗೂ ಕುಟುಂಬಕ್ಕೆ ದುಃಖ ತಂದಿದೆ’ ಎಂದು ಹೇಳಿದ್ದಾರೆ.

ಪೋಸ್ಟ್ ಅಲ್ಲಿ ಏನಿದೆ?
ಇನ್ಸ್ಟಾಗ್ರಾಮ್(Instagram)ನಲ್ಲಿ ಪೋಸ್ಟ್ ಹಾಕಿರುವ ವಿಜಯಲಕ್ಷ್ಮೀ ಅವರು “ಮೊದಲಿಗೆ, ಶ್ರೀ ರೇಣುಕಾ ಸ್ವಾಮಿ ಅವರ ಕುಟುಂಬಸ್ಥರಿಗೆ ನಾನು ಹೃದಯಪೂರ್ವಕ ಸಾಂತ್ವನವನ್ನು ತಿಳಿಸಲು ಬಯಸುತ್ತೇನೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ವಿಜಯಲಕ್ಷ್ಮೀ ದರ್ಶನ್ ತಿಳಿಸಿದ್ದಾರೆ.

ಅಪರೇಷನ್‌ ಥಿಯೇಟರ್‌ನಲ್ಲಿ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

ಅಲ್ಲದೆ ‘ನನ್ನ ಹಾಗೂ ನನ್ನ ಮಗನ ವಿರುದ್ಧ ಸುಳ್ಳು ಮಾಹಿತಿ ಹಾಗೂ ಅಸತ್ಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದನ್ನು ತಡೆಯಬೇಕಾಗಿದೆ. ಅಧಿಕೃತ ಪ್ರಕಟಣೆಯನ್ನು ಮಾತ್ರ ಪ್ರಕಟಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ತಾಯಿ ಚಾಮುಂಡೇಶ್ವರಿ ಹಾಗೂ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಮೇಲುಗೈ ಸಾಧಿಸಲಿ. ‘ಸತ್ಯಮೇವ ಜಯತೆ’ ಎಂದು ದರ್ಶನ್ ಪತ್ನಿ ಬರೆದುಕೊಂಡಿದ್ದಾರೆ.

ಅಂದಹಾಗೆ ದರ್ಶನ್ ಅರೆಸ್ಟ್ ಆದ ಬಳಿಕ ವಿಜಯಲಕ್ಷ್ಮಿ ಸೈಲೆಂಟ್ ಆಗಿದ್ರೂ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಹೇಳಿಕೆ ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ಇದರ ಬಳಿಕ ವಿಜಯಲಕ್ಷ್ಮೀ ಅವರು ಈ ಪೋಸ್ಟ್ ಮಾಡಿದ್ದಾರೆ.

Actor Darshan: ದರ್ಶನ್‌, ಪವಿತ್ರಾ ಗೌಡಗೆ ಡಿಎನ್‌ಎ ಟೆಸ್ಟ್‌

Leave A Reply