Home Breaking Entertainment News Kannada Sudeep: ದರ್ಶನ್ ಚಿತ್ರರಂಗದಿಂದ ಬ್ಯಾನ್ ವಿಚಾರ – ನಟ ಸುದೀಪ್ ಹೇಳಿದ್ದಿಷ್ಟು!!

Sudeep: ದರ್ಶನ್ ಚಿತ್ರರಂಗದಿಂದ ಬ್ಯಾನ್ ವಿಚಾರ – ನಟ ಸುದೀಪ್ ಹೇಳಿದ್ದಿಷ್ಟು!!

Hindu neighbor gifts plot of land

Hindu neighbour gifts land to Muslim journalist

Sudeep: ರಾಜ್ಯದಲ್ಲಿ ಕೆಲವು ದಿನಗಳಿಂದ ಸಂಚಲನ ಸೃಷ್ಟಿಸುತ್ತಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ(Renukaswamy Murder Case)ಬಗ್ಗೆ ಇದೀಗ ಕಿಚ್ಚ ಸುದೀಪ್(Sudeep) ಅವರು ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದು, ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಇದರೊಂದಿಗೆ ಅವರು ಚಿತ್ರರಂಗದಿಂದ ದರ್ಶನ್(Darsha) ನನ್ನ ಬ್ಯಾನ್(Ban) ಮಾಡೋ ವಿಚಾರವಾಗಿಯೂ ಮಾತನಾಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾನ್‌ ಮಾಡಲು ನಾವ್ಯಾರು ಕಾನೂನು ಅಲ್ಲ. ಕೇಸ್‌ನಿಂದ ಹೊರಗೆ ಬಂದ್ರೆ ಬ್ಯಾನ್‌ ಅನ್ನೋದು ಬರೋದೆ ಇಲ್ಲ. ಇಲ್ಲಿ ಬ್ಯಾನ್‌ ಅನ್ನೋದಕ್ಕಿಂತ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಮುಖ್ಯ. ಮಾಧ್ಯಮಗಳು, ಪೋಲೀಸರು ಈ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಅದು ಆಗುತ್ತದೆ. ನ್ಯಾಯ ಮುಖ್ಯವೇ ಹೊರತು ಬ್ಯಾನ್ ಅಲ್ಲ ಎಂದಿದ್ದಾರೆ.

ಅಲ್ಲದೆ ಕೆಲ ವಾರಗಳ ಹಿಂದೆಯಷ್ಟೇ ನನ್ನ ಮೇಲೂ ಬ್ಯಾನ್‌ ಎಂಬ ಕೂಗು ಕೇಳಿಬಂದಿತ್ತು. ಹಾಗಾಗಿ ಬ್ಯಾನ್‌ ಮಾಡೋದು ಮುಖ್ಯ ಅಲ್ಲ ನ್ಯಾಯ ಅನ್ನೋದು ಮುಖ್ಯ. ಬ್ಯಾನ್ ಮಾಡಬೇಕು ಅನ್ನೋದು ಮುಖ್ಯ ಅಲ್ಲ. ಬ್ಯಾನ್ ಅಂದ್ರೆ ಏನು? ಚೇಂಬರ್ ಇರೋದು ನ್ಯಾಯ ಕೊಡಿಸೋಕೆ. ರೇಣುಕಾಸ್ವಾಮಿ ಕುಟುಂಬಕ್ಕೆ, ಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾಸ್ವಾಮಿ ಅವರಿಗೆ, ಮುಂದೆ ಹುಟ್ಟುವ ಅವರ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ಈ ಪ್ರಕರಣದಲ್ಲಿ ಒಳ್ಳೆ ನ್ಯಾಯ ಸಿಗಬೇಕು ಎಂದು ಸುದೀಪ್‌ ನೊಂದ ಕುಟುಂಬಕ್ಕೆ ದನಿಯಾಗಿದ್ದಾರೆ.