Pavitra Gowda: ಠಾಣೆಯಲ್ಲಿ ಪವಿತ್ರ ಗೌಡಳ ಧರ್ಪ, ಧಿಮಾಕು – ಕ್ಷಣದಲ್ಲೇ ಗಪ್ ಚಿಪ್ ಮಾಡಿದ ಪೋಲೀಸ್ ಸಿಬ್ಬಂದಿ !!

Share the Article

Pavitra Gowda: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ (Police Custody) ಆರೋಪಿ ಪವಿತ್ರಾ ಗೌಡ (Pavithra Gowda) ಪೋಲೀಸರೊಂದಿಗೆ ಧರ್ಮ ತೋರಿ, ಧಿಮಾಕು ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಹೌದು, ಮನೆಯಲ್ಲಿದ್ದಾಗ ಹೈಫೈ ಜೀವನ ನಡೆಸುತ್ತಿದ್ದ ಮಾಯಾಂಗನೆ ಪವಿತ್ರಾ ಈಗ ಕಸ್ಟಡಿಯಲ್ಲಿ ಕೊಟ್ಟಿದನ್ನು ತಿನ್ನುತ್ತಾ, ತೋರಿದಲ್ಲಿ ಮಲಗಬೇಕಿದೆ. ಈ ಸಮಯದಲ್ಲಿ ಯಾವುದಕ್ಕೂ ಅಡ್ಜಸ್ಟ್ ಆಗದ ಆಕೆ ಸುಚಿರುಚಿಯ ಬಗ್ಗೆ ಪೊಲೀಸರಿಗೇ ಪ್ರಶ್ನೆ ಕೇಳಿ ಕೊನೆಗೆ ಅವರು ಹಾಕಿದ ಅವಾಜ್ ಗೆ ತೆಪ್ಪಗಾಗಿದ್ದಾಳೆ.

ಅಷ್ಟಕ್ಕೂ ನಡೆದದ್ದೇನು?
ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ(Cured Rice)ನೀಡಲಾಗಿತ್ತು. ಅಂತೆಯೇ ಪವಿತ್ರಳಿಗೂ ಅದನ್ನೇ ಉಣಬಡಿಸಲಾಗಿತ್ತು. ಆದರೆ ಎರಡು ತುತ್ತು ಸೇವಿಸಿದ ಪವಿತ್ರಾ ತಾನು ಪೊಲೀಸ್‌ ಕಸ್ಟಡಿಯಲ್ಲಿ ನಾನು ಇದ್ದೇನೆ ಎನ್ನುವುದನ್ನೇ ಮರೆತು ಇದು ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು ಎಂದು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಪೋಲೀಸ್ ಸಿಬ್ಬಂದಿ ನಾನು ಊಟ ಮಾಡ್ತಿರೋದು ಕೂಡ ಅದೇ ಮೊಸರನ್ನ. ಬೇಕಾದ್ರೆ ಊಟ ಮಾಡು. ಇಷ್ಟ ಇಲ್ಲದೇ ಇದ್ರೆ ಬಿಟ್ಟು ಬಿಡು ಎಂದು ಅಷ್ಟೇ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಕೊನೆಗೆ ಮೊಸರನ್ನ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.