Karnataka Govt Jobs 2024: ಚಾಲಕ, ಟೈಪಿಸ್ಟ್‌ ಹುದ್ದೆಗಳಿಗೆ ಭರ್ಜರಿ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

Karnataka Govt Jobs 2024: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು ಅದರಂತೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿನ ಗ್ರೂಪ್‌ ಡಿ ಹಾಗೂ ಗ್ರೂಪ್‌ ಸಿ ವೃಂದದ ಕೆಲವು ಸಮನಾಂತರ ಹುದ್ದೆಗಳನ್ನು (Karnataka Govt Jobs 2024) ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ.

ನಟ ದರ್ಶನ್‌ಗೆ ಕಾಡ್ತಿದೆಯಾ ಪಶ್ಚಾತ್ತಾಪ? ದುಃಖದಲ್ಲಿ ನಟ ಹೇಳಿದ್ದೇನು?

ಸ್ವಾಯತ್ತ ಸಂಸ್ಥೆಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಗ್ರೂಪ್‌ ಡಿ ಮತ್ತು ಸಮನಾಂತರ ಹುದ್ದೆ, ಗ್ರೂಪ್‌ ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾತ್ರ ಭರ್ತಿ ಮಾಡಲು ತಿಳಿಸಲಾಗಿದೆ.

ಗ್ರೂಪ್‌ ಡಿ ಮತ್ತು ಸಮನಾಂತರ ಹುದ್ದೆ, ಗ್ರೂಪ್‌ ಸಿ ಹುದ್ದೆಗಳಲ್ಲಿ ಬ್ಯಾಕ್‌ಲಾಗ್‌ ಸೇರಿದಂತೆ ಯಾವುದೇ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಇಲ್ಲ ಎನ್ನುವುದು ಗಮನರ್ಹ ಅಂಶವಾಗಿದ್ದು, ಹೊರಗುತ್ತಿಗೆ ನೇಮಕಾತಿಯಲ್ಲಿ ಆಯಾ ವರ್ಗಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಮುಖ್ಯವಾಗಿ ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ಯಾವುದೇ ಖಾಲಿ ಹುದ್ದೆ ಭರ್ತಿಗೆ ಅವಕಾಶ ಇರುವುದಿಲ್ಲ. ಇನ್ನು ಆರ್ಥಿಕ ಇಲಾಖೆ ಮಂಜೂರು ಮಾಡದೇ ವಿವಿಗಳು, ಸ್ವಾಯತ್ತ ಸಂಸ್ಥೆಗಳಲ್ಲಿ ಸೃಜಿಸಲಾದ ಹುದ್ದೆಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

5 ರೂ ನೋಟು ಇಟ್ಟುಕೊಂಡವರಿಗೆ ದೊಡ್ಡ ಸಿಹಿ ಸುದ್ದಿ; ಒಮ್ಮೆಲೇ ನೀವು ಆಗಬಹುದು ಲಕ್ಷಾದಿಪತಿ

 

Leave A Reply

Your email address will not be published.