Gruhalakshmi Scheme: ಇನ್ಮುಂದೆ ಇವರಿಗೂ ಸಿಗಲಿದೆ ಗೃಹಲಕ್ಷ್ಮೀ ಯೋಜನೆಯ 2000 ರೂ!

Gruhalakshmi Scheme: ತೃತೀಯ ಲಿಂಗಿಗಳನ್ನು ಸಾಮಾಜಿಕವಾಗಿ ಕೆಲವೊಮ್ಮೆ ಸಮಾನರೆಂದು ಪರಿಗಣಿಸದೇ ಇದ್ದರೂ ಸಹ ಇದೀಗ ಸರ್ಕಾರ ತೃತೀಯ ಲಿಂಗಿಗಳಿಗೆ ಸರ್ಕಾರವು ಗೌರವ ನೀಡಿ ಮಹತ್ವ ನಿರ್ಧಾರ ಕೈಗೊಂಡಿದೆ. ಹೌದು, ಮನೆ ಯಜಮಾನಿಯರಿಗೆ ಮಾತ್ರ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂಪಾಯಿ ಹಣ ಇನ್ಮುಂದೆ ತೃತೀಯ ಲಿಂಗಿಗಳಿಗೂ ಸಿಗಲಿದೆ. ಪ್ರಸ್ತುತ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಜೀವನೋಪಾಯಕ್ಕೆ ಗೃಹಲಕ್ಷ್ಮೀ ಹಣ ಸಹಕಾರಿಯಾಗಲಿದೆ.

ಲೋಕ ಸಮರದಲ್ಲಿ ಗರ್ವಭಂಗ; ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ಕೊಟ್ಟ RSS ಸಂಚಾಲಕ ಮೋಹನ್ ಭಾಗವತ್ !!

ಮುಖ್ಯವಾಗಿ ಜುಲೈ ತಿಂಗಳಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸದ್ಯ ತೃತೀಯ ಲಿಂಗಿಗಳು ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣಕ್ಕಾಗಿ ಜೂನ್ ತಿಂಗಳ ಅಂತ್ಯದೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ತಿಂಗಳಾಂತ್ಯದೊಳಗೆ ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಜಿಲ್ಲಾಧಿಕಾರಿಗಳು ವಿತರಣೆ ಮಾಡಿದ ಐಡಿ ಕಾರ್ಡ್ ನೀಡಿ ಗೃಹಲಕ್ಷ್ಮಿ ಹಣಕ್ಕೆ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಬೆಂಗಳೂರು ಒನ್, ಗ್ರಾಮ ಒನ್, ಸೈಬ‌ರ್ ಸೆಂಟರ್ ಗಳಲ್ಲಿ ತೃತೀಯ ಲಿಂಗಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Tomato Price Hike: ದಿಢೀರ್ ಏರಿಕೆ ಕಂಡ ಟೊಮೆಟೋ ಬೆಲೆ – 1 ಕೆಜಿಗೆ 80 ರೂ !!

Leave A Reply

Your email address will not be published.