Home News Govt Employees: ವಾರದ ಈ ದಿನ ಅಧಿಕಾರಿ, ನೌಕರರು ತಮ್ಮ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು...

Govt Employees: ವಾರದ ಈ ದಿನ ಅಧಿಕಾರಿ, ನೌಕರರು ತಮ್ಮ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ!

Govt Employees

Hindu neighbor gifts plot of land

Hindu neighbour gifts land to Muslim journalist

Govt Employees: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಅವರು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಅಧಿಕಾರಿ, ನೌಕರರು ಪ್ರತಿ ಸೋಮವಾರದಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

Shimoga: ಸಾಗರದಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಅಪಘಾತ

ಹೌದು, ರೈತರಿಗೆ ಅನುಕೂಲವಾಗಲು ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು (Govt Employees) ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಚೇರಿಗಳಿಗೆ ಆಗಮಿಸುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಅವರು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶ ಹೊರಡಿಸಿದ್ದಾರೆ.

ಕರ್ನಾಟಕವು ಕೃಷಿ ಪ್ರಧಾನವಾದ ರಾಜ್ಯವಾಗಿದ್ದು, ಹೆಚ್ಚಾಗಿ ಕೃಷಿಕರು ಸೋಮವಾರದ ದಿನದಂದು ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಿ, ಸಂತೆ, ಪೇಟೆ ಕೆಲಸಗಳು ಹಾಗೂ ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಹೋಗುತ್ತಾರೆ ಆದ್ದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸದ್ಯ ಪ್ರತಿ ಸೋಮವಾರಗಳಂದು ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕು ಎಂಬ ರಾಜ್ಯ ಸರ್ಕಾರ ಸೂಚನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಕ್ಕೂ ಅನ್ವಯವಾಗಲಿದೆ ಈ ಕುರಿತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಸುತ್ತೋಲೆ ಹೊರಡಿಸಿದ್ದಾರೆ.

Missing women: ನಾಲ್ಕು ಮಕ್ಕಳ ತಾಯಿ ಕಾಣೆಯಾದಾಳೆಂದು ಹುಡುಕಾಟ! ಸಿಕ್ಕಿದ್ದು ಹೆಬ್ಬಾವಿನ ಉದರದಲ್ಲಿ!