Bus Fare Hike: ಸರಕಾರಿ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ;
Bus Fare Hike: ಶಕ್ತಿ ಯೋಜನೆ ಬಳಿಕ ನಿಗಮ ನಿರ್ವಹಣೆಗೆ ಸಂಸ್ಥೆಗಳು ಹೊಸ ಹೊಸ ಪ್ಲ್ಯಾನ್ ಮಾಡುತ್ತಿದ್ದು, ಇದೀಗ ಶೀಘ್ರದಲ್ಲಿ 10 ರಿಂದ 15 ರಷ್ಟು ದರ ಏರಿಕೆಯ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಸಂಭವವಿದೆ.
Mangaluru: ರಸ್ತೆಯಲ್ಲಿ ನಮಾಜ್ ಪ್ರಕರಣ; ಶರಣ್ ಪಂಪ್ವೆಲ್ ವಿರುದ್ಧ ದಾಖಲಾದ ಕೇಸಿಗೆ ಹೈಕೋರ್ಟಿನಲ್ಲಿ ತಡೆ
ನಾಲ್ಕೂ ನಿಗಮ ಸೇರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದಕ್ಕೆ ಒಪ್ಪಿಗೆ ದೊರೆತರೆ ಸಾರಿಗೆ ಬಸ್ಗಳ ಪ್ರಯಾಣ ದರ ಏರಿಕೆ ಸಂಭವವಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಡೀಸೆಲ್ ಸೇರಿ ಬಸ್ಗಳ ಬಿಡಿಭಾಗಗಳ ದರ ಏರಿಕೆಯಗಿದ್ದು, ಜೊತೆಗೆ 2020 ರ ನಂತರ ರಾಜ್ಯದಲ್ಲಿ ಸಾರಿಗೆ ಬಸ್ ದರ ಏರಿಕೆ ಮಾಡಿಲ್ಲ. ಸದ್ಯಕ್ಕೆ ನಿಗಮಗಳಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ, ಪ್ರಸ್ತಾವನೆಯನ್ನು ನಿಗಮಗಳು ಕೊಟ್ಟರೆ ಸಿಎಂ ಗಮನಕ್ಕೆ ತರಲಾಗುವುದು, ಹಾಗೂ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಸಚಿವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Karnataka Rain: ದ.ಕ, ಉಡುಪಿ ಜಿಲ್ಲೆಗೆ ಅಬ್ಬರಿಸಲಿದ್ದಾನೆ ವರುಣ; ಮೀನುಗಾರರಿಗೆ ಎಚ್ಚರಿಕೆ- ಹವಾಮಾನ ಇಲಾಖೆ