Dakshina Kannada Crime News: ಕಾಯರ್ತಡ್ಕದಲ್ಲಿ ಬಿಜೆಪಿ ನಾಯಕನ ಮೇಲೆ ಹಲ್ಲೆ

ವಿದೇಶಕ್ಕೆ ಹಾರುವ ಪ್ಲಾನ್‌ ಮಾಡಿದ್ದ ಪ್ರವೀಣ್‌ ನಟ್ಟಾರು ಹತ್ಯೆ ಪ್ರಕರಣದ ಆರೋಪಿ ಸೆರೆ ಹಿಡಿದ ಎನ್‌ಐಎ

Share the Article

Dakshina Kannada Crime News: ಯುವ ಉದ್ಯಮಿ, ಬೆಳ್ತಂಗಡಿ ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜೇಶ್‌ ನಿಡ್ಡಾಜೆ (33) ಮೇಲೆ ನಿನ್ನೆ (ಜೂ.4) ರಂದು ಸಂಜೆ ಮಾರಕಾಯುಧಗಳಿಂದ ಹಲ್ಲೆ ನಡೆದಿರುವ ಘಟನೆಯೊಂದು ನಡೆದಿದೆ. ದಾಳಿ ನಡೆಸಿದವರು ಕಳೆಂಜ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಕುಶಾಲಪ್ಪ ಗೌಡ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:  ರಾಜ್ಯದ ಈ 4 ಕ್ಷೇತ್ರಗಳಿಗೆ ಉಪ ಚುನಾವಣೆ !!ಕಾರಣ ಹೀಗಿದೆ

ನಿನ್ನೆ ಸಂಜೆ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ. ಕೂಡಲೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.

ಪ್ರವೀಣ್‌ ನೆಟ್ಟಾರು ಆರೋಪಿ ಸೆರೆ;
ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆಯ ಆರೋಪಿಯನ್ನು ಎನ್‌ಐಎ ಬಂಧಿಸಿದ್ದಾರೆ. ಆರೋಪಿ ರಿಯಾಜ್‌ ಯೂಸಫ್‌ ಹಾರಳ್ಳಿ ಅಲಿಯಾಸ್‌ ರಿಯಾಜ್‌ ವಿದೇಶಕ್ಕೆ ಪರಾರಿಯಾಗಲು ಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ ಎಂದು ಎನ್‌ಐಎ ಹೇಳಿಕೆ ತಿಳಿಸಿದೆ.

ಒಟ್ಟು ಆರೋಪಿಗಳ ಬಂಧನ ಸಂಖ್ಯೆ ಇಲ್ಲಿಯರವರೆಗೆ 19 ಕ್ಕೆ ಏರಿದೆ.

ಇದನ್ನೂ ಓದಿ: Pradeep Eshwar: ಸುಧಾಕರ್‌ ಗೆಲುವು ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ಮನೆಗೆ ಕಲ್ಲು ತೂರಾಟ

Leave A Reply