Chikkodi: ಸಂಭ್ರಮಾಚರಣೆ ವೇಳೆ ʼಮೋದಿ ಹಮಾರಾ ಕುತ್ತʼ ಎಂದ ಕಾಂಗ್ರೆಸ್‌ ಕಾರ್ಯಕರ್ತ, ಪಾಕಿಸ್ತಾನ ಪರ ಘೋಷಣೆ

Share the Article

Chikkodi: ಬೆಳಗಾವಿ ತಾಲೂಕು ಕೇಂದ್ರದ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ ವಿರುದ್ಧ ಭಾರೀ ಮತಗಳಿಂದ ಮುನ್ನಡೆ ಸಾಧಿಸಿದ್ದು, ಗೆಲುವು ಸುಳಿವು ಸಿಗುತ್ತಿದ್ದಂತೆ ಆರ್‌ಡಿ ಕಾಲೇಜು ಎದುರು ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದು, ಫಲಿತಾಂಶಕ್ಕೆ ಮೊದಲೇ ಗುಲಾಲು ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಾರೆ ಕಾರ್ಯಕರ್ತರು.

ಈ ಸಂಭ್ರಮಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೋರ್ವ ದೇಶ ವಿರೋಧಿ ಘೋಷಣೆ ಕೂಗಿದ್ದು, ಅಲ್ಲದೇ ಮೋದಿಗೆ ಅವಾಚ್ಯ ಶಬ್ದದ ನಿಂದನೆ ಮಾಡಿದ್ದಾನೆ. ʼಮೋದಿ ಹಮಾರಾ ಕುತ್ತಾʼ ಎಂದು ಕಾಂಗ್ರೆಸ್‌ ಕಾರ್ಯಕರ್ತ ಹೇಳಿದ್ದಾರೆ. ಈ ವೇಳೆ ಇನ್ನೋರ್ವ ಕಾರ್ಯಕರ್ತ ಆತನ ಬಾಯಿ ಮುಚ್ಚಿಸಿದ್ದಾನೆ.

Leave A Reply