Raghupati Bhat: ರಘುಪತಿ ಭಟ್‌ ಪರ ಪೋಸ್ಟ್‌ ಹಾಕಿದ ಪ್ರತಾಪ್‌ ಸಿಂಹ; ತಕ್ಷಣ ಡಿಲೀಟ್‌, ಕಾರಣವೇನು?

Raghupati Bhat: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ ಪರ ಪೋಸ್ಟ್ ಹಾಕಿದ ಕೆಲವೇ ಕ್ಷಣದಲ್ಲಿ ಡಿಲೀಟ್ ಮಾಡಿದ್ದು ಇದೀಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಹೌದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್‌ ಅವರ ಪರವಾಗಿ ಮೈಸೂರು- ಕೊಡುಗು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ (Pratap Simha) ಧ್ವನಿ ಎತ್ತಿದ್ದಾರೆ.

ಈಗಾಗಲೇ ರಘುಪತಿ ಭಟ್‌ ಅವರು ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿದ್ದಾರೆ. ಪ್ರಸ್ತುತದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಪ್ರತಾಪ್ ಸಿಂಹ, ಸಮಾನದುಃಖಿಯ ಪರ ಬೆಂಬಲಕ್ಕೆ ನಿಂತಿರುವುದು ಕುತೂಹಲ ಮೂಡಿಸಿದೆ.

ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಪೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ ಎಂದು ಪತಾಪ್ ಸಿಂಹ ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಘುಪತಿ ಭಟ್, ನಿಜವಾದ ನಾಯಕರು, ಕಾರ್ಯಕರ್ತರಿಗೆ ತಮ್ಮ ನಿಲುವು ಗೊತ್ತಿದೆ. ನಿಷ್ಠಾವಂತ ಕಾರ್ಯಕರ್ತರು ಎಂದೆಂದಿಗೂ ತಮ್ಮ ಜತೆಗೆ ಇರುತ್ತಾರೆ ಎಂದಿದ್ದಾರೆ. ಆದರೆ ಪೋಸ್ಟ್ ಹಾಕಿದ ಕೆಲವೇ ಕ್ಷಣದಲ್ಲಿ ಪ್ರತಾಪ್ ಸಿಂಹರ ಪೋಸ್ಟ್ ಡಿಲೀಟ್ ಆಗಿದೆ.

Leave A Reply

Your email address will not be published.