CET Result: KEA ಯಿಂದ ನಿನ್ನೆ ದಿಢೀರ್​ CET ರಿಸಲ್ಟ್ ಪ್ರಕಟ! ಸುದ್ದಿಗೋಷ್ಠಿಯಲ್ಲಿ KEA ಸ್ಪಷ್ಟನೆ

CET Result: KEA ಯಿಂದ ನಿನ್ನೆ ದಿಢೀರ್​ CET ರಿಸಲ್ಟ್ ಪ್ರಕಟ ಮಾಡಿದ್ದು, ಇದೀಗ ಸುದ್ದಿಗೋಷ್ಠಿಯಲ್ಲಿ KEA ಸ್ಪಷ್ಟನೆ ನೀಡಿದೆ. ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿನ್ನೆ ಯುಜಿಸಿಇಟಿ -2024 ಫಲಿತಾಂಶವನ್ನು ಸುದ್ದಿಗೋಷ್ಠಿ ಕರೆಯದೇ ಪತ್ರಿಕಾ ಪ್ರಕಟಣೆ ಹೊರಡಿಸಿ ಯಡವಟ್ಟು ಮಾಡಿತ್ತು. ಆದ್ದರಿಂದ ಕೆಇಎ ಕಾರ್ಯವೈಖರಿ ವಿರುದ್ಧ ಸಾಕಷ್ಟು ಆಕ್ರೋಶ ಹೆಚ್ಚಾದ ಹಿನ್ನೆಲೆ, ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಲೇಶ್ವರಂ ಕೆಇಎ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದೆ.

ಇದನ್ನೂ ಓದಿ: ಒಕ್ಕಲಿಗರ ದೊಡ್ಡ ಮಟ್ಟದ ನಾಯಕನಾಗಲು ಡಿಸಿಎಂ ಹಲ್ಕಾ ಕೆಲಸ ಮಾಡಿದ್ದಾರೆ ; ಬಸನಗೌಡ ಪಾಟೀಲ್ ಯತ್ನಾಳ್

ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶದ (CET Result) ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಈ ಬಾರಿ ಯಜಿಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿಗೆ ಹೆಚ್ಚು ರ್ಯಾಂಕ್ ಬಂದಿದೆ ಎಂದರು. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಪಿಂಯಾರ್ಡ್ ಶಾಲೆ ಹರ್ಷಾ ಕಾರ್ತಿಕೇಯ ಮೊದಲ ರ್ಯಾಂಕ್ ಪಡೆದಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಿನ್ನೆ ಫಲಿತಾಂಶ ಪ್ರಕಟ ಮಾಡಿದ್ದೆವು. ಪತ್ರಿಕಾಗೋಷ್ಠಿ ಮಾಡದೇ ರಿಸಲ್ಟ್ ಅನೌನ್ಸ್ ಮಾಡಿರುವುದು ತಪ್ಪು. ಫಲಿತಾಂಶ ವಿಚಾರವಾಗಿ ಸಾಕಷ್ಟು ಒತ್ತಡವಿತ್ತು. ಹೀಗಾಗಿ ನಿನ್ನೆ ಫಲಿತಾಂಶ ಪ್ರಕಟ ಮಾಡಲಾಗಿತ್ತು. ನಂತರದಲ್ಲಿ ನಮಗೆ ಅರಿವಾಯ್ತು, ಇನ್ಮುಂದೆ ಸರಿಯಾಗಿ ನಿಯಮಗಳನ್ನು ಫಾಲೋ ಮಾಡ್ತಿವಿ ಎಂದು ಪ್ರಸನ್ನ ಹೇಳಿದರು.

ಒಂದುವೇಳೆ ಸಾಫ್ಟ್‌ವೇರ್ ನಲ್ಲಿ ಎರಡು ಅಂಕಗಳನ್ನ ಮ್ಯಾಚ್ ಮಾಡುವ ಸಂದರ್ಭದಲ್ಲಿ ಅಂಕಗಳು ಮ್ಯಾಚ್ ಆಗದೇ ಇದ್ದಲ್ಲಿ, ಯಾರಿಗೆಲ್ಲಾ ಸಮ್ಯಸೆ ಆಗಿದೆಯೋ ಅವರು ಗಾಬರಿಪಡುವ ಅವಶ್ಯಕತೆ ಇಲ್ಲ. ನಾಳೆ ಮಾರ್ಕ್ಸ್ ಸೇರಿಸಲು ಅವಕಾಶ ನೀಡಲಾಗುತ್ತೆ. ನಂತರದಲ್ಲಿ ನಾವು ಅವರಿಗೆ ರ್ಯಾಂಕ್ ನೀಡಲಾಗುತ್ತೆ ಎಂದರು.

ಮೆಡಿಕಲ್ ಇಂಜಿನಿಯರ್ ಸೀಟುಗಳಿಗೆ ಕಂಬೈನ್ಡ್ ಆಗಿ ಸೀಟ್ ಅಲಾಟ್ಮೆಂಟ್ ಆಗುತ್ತೆ. ನೀಟ್ ಪರೀಕ್ಷೆ ಫಲಿತಾಂಶ ಇನ್ನೂ ಬಂದಿಲ್ಲ. ಸೀಟ್ ಮ್ಯಾಟ್ರಿಕ್ಸ್ ಕುರಿತು ಶಿಕ್ಷಣ ಇಲಾಖೆ ಅದನ್ನು ಪಬ್ಲಿಷ್ ಮಾಡುತ್ತೆ. ನೀಟ್ ರಿಸಲ್ಟ್​ ಬಂದ ಬಳಿಕ ನಾವು ಸೀಟು ಹಂಚಿಕೆ ಮಾಡುತ್ತೇವೆ. ಪೋಷಕರು ಆತುರದಲ್ಲಿ ಗಾಬರಿ ಪಡುವ ಅವಶ್ಯಕತೆ ಇಲ್ಲ. ಸರ್ಕಾರದಿಂದ ನಿಗದಿಯಾಗುವ ಸೀಟುಗಳಿಗೆ ಯಾವುದೇ ಕಾಲೇಜು ಫೀಜ್ ಪಡೆಯುವಂತಿಲ್ಲ. ರ್ಯಾಂಕ್ ಆಧಾರದ ಮೇಲೆ ನಿಮಗೆ ಸೀಟು ಸಿಕ್ಕೇ ಸಿಗುತ್ತೆ. ರ್ಯಾಂಕ್ ವಿಚಾರವಾಗಿ ಕೂಡ ಗೊಂದಲ ಪಡಬೇಕಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Bhavani Revanna: ಭವಾನಿ ರೇವಣ್ಣ ಸಿಕ್ಕ ತಕ್ಷಣ ಅರೆಸ್ಟ್‌: ಜಿ. ಪರಮೇಶ್ವರ್ ಸ್ಪಷ್ಟನೆ

Leave A Reply

Your email address will not be published.