Parliment Election: ಕರ್ನಾಟಕ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್ ಅಚ್ಚರಿ ಭವಿಷ್ಯ !!
Parliment Election : ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್ ನಲ್ಲಿ ಬೆಟ್ಟಿಂಗ್ ಭಾರೀ ಜೋರಾಗಿದೆ. ದೇಶದ ಚಿತ್ತವೇ ಇದೀಗ ಸಟ್ಟಾ ಬಜಾರ್ ಸುತ್ತ ಸುತ್ತುತ್ತಿದೆ. ನಿನ್ನೆ ತಾನೇ ಬಿಜೆಪಿ ಗೆಲುವಿನ ಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಭವಿಷ್ಯ ನುಡಿದಿದ್ದ ಈ ಬಜಾರ್ ಇದೀಗ ಕರ್ನಾಟಕದ ಫಲಿತಾಂಶದ ಬಗೆಗೂ ಮಾಹಿತಿ ನೀಡಿದೆ.
ಇದನ್ನೂ ಓದಿ: Bantwala: ಗ್ಯಾಸ್ ಟ್ಯಾಂಕರ್ ಪಲ್ಟಿ; ತಪ್ಪಿದ ಭಾರೀ ದೊಡ್ಡ ಅನಾಹುತ
ಹೌದು, ಲೋಕಸಭಾ ಚುನಾವಣೆ ಫಲಿತಾಂಶಕ್ಕೆ (Lok Sabha Poll Results) ದಿನಗಣನೆ ಶುರುವಾಗಿದೆ. ಚುನಾವಣೆ ಅಂತಿಮ ಘಟ್ಟಕ್ಕೆ ತಲುಪುತ್ತಿರುವಂತೆಯೇ ಸಟ್ಟಾ ಬಜಾರ್(Satta bazar)ನಲ್ಲಿ ಬೆಟ್ಟಿಂಗ್ ಶುರುವಾಗಿದೆ. ವಿವಿಧ ರಾಜ್ಯಗಳ ರಾಜಕೀಯ ಸನ್ನಿವೇಶ, ಮತದಾನ ಪರಿಸ್ಥಿತಿಯನ್ನು ಆಧರಿಸಿ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಅಂತೆಯೇ ಕರ್ನಾಟಕದಲ್ಲಿ ಬಿಜೆಪಿ(BJP) ಮೈತ್ರಿಕೂಟ 18 ರಿಂದ 20 ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ ಎಂಬುದು ಸದ್ಯ ಸಟ್ಟಾ ಬಜಾರ್ ನಿಂದ ಕೇಳಿಬರುತ್ತಿರುವ ಮಾತು.
ಇದನ್ನೂ ಓದಿ: Kannuru: ಭರ್ಜರಿ 1ಕೆಜಿ ಚಿನ್ನ ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಬಂದ ಗಗನಸಖಿ; ಇದು ದೇಶದಲ್ಲೇ ಮೊದಲ ಪ್ರಕರಣ
ಇನ್ನು ಜೂನ್ 1 ಕ್ಕೆ ಕೊನೆಯ ಹಂತದ ಮತದಾನ ನಡೆಯಲಿದೆ. ಅಂದೇ ಎಕ್ಸಿಟ್ ಪೋಲ್ ಕೂಡ ಪ್ರಕಟವಾಗಲಿದೆ. ಈಗಾಗಲೇ ದೇಶದ ಪ್ರಮುಖ ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಬೆಟ್ಟಿಂಗ್ ದಂಧೆ ದಿನ ಕಳೆದಂತೆ ಮತ್ತಷ್ಟು ಚುರುಕಾಗುತ್ತಿದೆ.
ಬದಲಾದ ಚಿತ್ರಣ
ದೇಶದಲ್ಲಿ ಮೂರು ಹಂತಗಳ ಮತದಾನದ ನಂತರ ಬಿಜೆಪಿಗೆ 270ರಿಂದ 280 ಮತ್ತು ಕಾಂಗ್ರೆಸ್‌ಗೆ 70ರಿಂದ 80 ಸೀಟು ಸಿಗಬಹುದು ಎಂದು ಭವಿಷ್ಯವಾಣಿಯಲ್ಲಿ ಅಂದಾಜಿಸಲಾಗಿತ್ತು. ಆರು ಹಂತಗಳ ಮತದಾನ ಮುಗಿದ ಬಳಿಕ ಚಿತ್ರಣ ಬದಲಾಗಿದ್ದು, ಬಿಜೆಪಿಗೆ 295ರಿಂದ 305 ಮತ್ತು ಕಾಂಗ್ರೆಸ್‌ಗೆ 55ರಿಂದ 65 ಸೀಟು ಲಭಿಸಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ.