MadhyaPradesh: ಮದುವೆಯಾದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ಮಹಿಳೆ; ವರ ಶಾಕ್‌

Share the Article

MadhyaPradesh: ಮದುವೆಯಾದ ಎರಡೇ ದಿನದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ನವವಿವಾಹಿತ ಮಹಿಳೆ ತನ್ನ ಮದುವೆಯಾದ ಎರಡು ದಿನಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: Astro Tips: ಒಂದು ವೀಳ್ಯದೆಲೆಯಿಂದ ನೂರಾರು ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಇದೆಯಂತೆ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಈ ಕುರಿತು ಮನೆ ಮಂದಿ ಪ್ರಶ್ನೆ ಮಾಡಿದಾಗ, ಈಕೆ ತನ್ನ ಮೇಲೆ ಪದೇ ಪದೇ ಅತ್ಯಾಚಾರವಾಗಿರುವ ಕುರಿತು ಹೇಳಿದ್ದಾಳೆ. ಅಷ್ಟು ಮಾತ್ರವಲ್ಲದೇ ಆ ವ್ಯಕ್ತಿ ತಾನು ಈಗಾಗಲೇ ಮದುವೆಯಾಗಿದ್ದು, ಕುಟುಂಬವನ್ನು ಹೊಂದಿದ್ದೇನೆ ಎಂದು ಹೇಳಿ ಮದುವೆಯಾಗಲು ನಿರಾಕರಿಸಿ ತನಗೆ ಮೋಸ ಮಾಡಿರುವುದಾಗಿ ತಿಳಿಸಿದ್ದಾಳೆ.

ಇದನ್ನೂ ಓದಿ: Silver Price: 1 ಲಕ್ಷ ರೂ ಗಡಿ ದಾಟಿದ ಕೆಜಿ ಬೆಳ್ಳಿ !!

ಈ ವಿಷಯದ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಸರಾಯ್‌ ಗ್ರಾಮದ ಸುನಿಲ್‌ ಬಾಘೇಲ್‌ ಎಂಬಾತನನ್ನು ಬಂಧನ ಮಾಡಿದ್ದಾರೆ.

ಮೇ.20 ರಂದು ಮದುವೆಯಾಗಿದ್ದ ಹುಡುಗಿ ಕೇವಲ ಎರಡೇ ದಿನದಲ್ಲಿ ಅಂದರೆ ಮೇ.22 ರ ಮುಂಜಾನೆ ತೀವ್ರ ಹೊಟ್ಟೆ ನೋವೆಂದು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆ ಗರ್ಭಿಣಿ ಎಂದು ಹೇಳಿದ್ದು, ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದ ಬೆಚ್ಚಿಬಿದ್ದ ವರನ ಕಡೆಯವರು ತಕ್ಷಣ ಮಹಿಳೆಯನ್ನು ಪ್ರಶ್ನೆ ಮಾಡಿದಾಗ, ಆಕೆ ತಾನು ಮುಚ್ಚಿಟ್ಟಿದ ವಿಷಯವನ್ನು ಹೇಳಿದ್ದಾಳೆ.

ಎರಡು ವರ್ಷಗಳ ಹಿಂದೆ ಸಿಮ್ರಾಲಿ ಗ್ರಾಮದ ಮದುವೆಯೊಂದರಲ್ಲಿ ಸುನೀಲ್‌ ಎಂಬಾತನನ್ನು ಭೇಟಿಯಾಗಿದ್ದು, ನಂತರ ಇಬ್ಬರು ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದು, ಕರೆ ಮಾಡಿ ಮಾತನಾಡಿಕೊಳ್ಳುತ್ತಿದ್ದರು. ಸುಬೀಲ್‌ ಕಚ್ವಾನಿಯಾದಲ್ಲಿ ಇರುವ ಆಕೆಯನ್ನು ಅನೇಕ ಬಾರಿ ಭೇಟಿ ಮಾಡಿದ್ದು, ಸುಮಾರು ಒಂಬತ್ತು ತಿಂಗಳ ಹಿಂದೆ ಮದುವೆಯ ಭರವಸೆ ನೀಡಿ ಹೊಲವೊಂದರಲ್ಲಿ ಅತ್ಯಾಚಾರ ಮಾಡಿದ್ದಾನೆ. ನಂತರ ಸಂತ್ರಸ್ತೆ ಹೆದರಿ ಈ ಘಟನೆಯನ್ನು ತನ್ನ ಕುಟುಂಬದಿಂದ ಮುಚ್ಚಿಟ್ಟಿದ್ದಾಳೆ.

ಅನಂತರ ಯುವತಿಗೆ ತಾನು ಗರ್ಭಿಣಿಯಾಗಿರುವುದು ಗೊತ್ತಾಗಿ, ಸುನಿಲ್‌ ಗೆ ಹೇಳಿದ್ದಾಳೆ. ಆದರೆ ಸುನಿಲ್‌ ನಾನು ಈಗಾಗಲೇ ಮದುವೆಯಾಗಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸ ಮಾಡಿದ್ದಾನೆ. ಹೆದರಿಕೆಯಿಂದ ಯುವತಿ ಮೌನವಾಗಿದ್ದು, ಅನಂತರ ಆಕೆಯ ಕುಟುಂಬ ಆಕೆಯ ಮದುವೆಯನ್ನು ಮೇ.20 ರಂದು ನಿಶ್ಚಯ ಮಾಡಿತ್ತು.

ಇದೀಗ ಜನ್ಮ ನೀಡಿದ ಯುವತಿ ಧಮ್ನೋದ್‌ ಪೊಲೀಸ್‌ ಠಾಣೆಗೆ ಬಂದು ಸುನೀಲ್‌ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಸುನೀಲ್‌ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆತನನ್ನು ಬಂಧನ ಮಾಡಿದ್ದಾರೆ.

Leave A Reply