Gruhajyothi: ಇನ್ಮೇಲೆ ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಇನ್ನೂ ಸುಲಭ!

Gruha Jyothi scheme: ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ನಿಂದ ಆಧಾರ್ ಅನ್ನು ಡೀಲಿಂಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಹೌದು, ಬಾಡಿಗೆದಾರರು ಮನೆ ಬದಲಾಯಿಸಿ ಬೇರೆ ಮನೆಗೆ ಬಾಡಿಗೆಗೆ ಹೋದಾಗ ಹಿಂದಿನ ಮನೆಯ ವಿದ್ಯುತ್ ಬಿಲ್ಗೆ ಆಧಾರ್ ಲಿಂಕ್ ಆಗಿರುವುದರಿಂದ ಬದಲಾಯಿಸಲಾದ ಮನೆಯ ವಿದ್ಯುತ್ ಬಿಲ್ಗೆ ಅದೇ ಆಧಾರ್ ಜೋಡಿಸಲು ಆಗುವುದಿಲ್ಲ. ಅದಕ್ಕಾಗಿ ಈ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Home Loan ತೆಗೆದುಕೊಳ್ಳಬೇಕಾದ್ರೆ ಈ ಅಂಶಗಳು ನೆನಪಿರಲಿ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಜ್ಯೋತಿ ಯೋಜನೆಯ(Gruha Jyothi scheme) ಪ್ರಕಾರ, ಪ್ರತೀ ಮನೆಗೂ 200 ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ಸರಬರಾಜು (free electricity) ಮಾಡಲಾಗುತ್ತದೆ. ಅಂತೆಯೇ ಪ್ರತೀ ಬೆಸ್ಕಾಂ ಖಾತೆಗೂ (ESCOM electricity connection) ಒಂದು ಆಧಾರ್ ನಂಬರ್ ಅನ್ನು ಲಿಂಕ್ ಮಾಡಿದರೂ ಸಾಕು ಗೃಹಜ್ಯೋತಿ ಸ್ಕೀಮ್ ಚಾಲೂ ಆಗುತ್ತದೆ. ಮುಖ್ಯವಾಗಿ ಬಾಡಿಗೆ ಮನೆಯಲ್ಲಿರುವವರು ವಿದ್ಯುತ್ ಬಿಲ್ಗೆ ತಮ್ಮ ಆಧಾರ್ ನಂಬರ್ ಜೋಡಿಸಿರುತ್ತಾರೆ. ಇಂಥ ಬಾಡಿಗೆದಾರರು ಮನೆ ಬದಲಾಯಿಸಿ ಬೇರೆ ಮನೆಗೆ ಬಾಡಿಗೆಗೆ ಹೋದಾಗ ಹಿಂದಿನ ಮನೆಯ ವಿದ್ಯುತ್ ಬಿಲ್ಗೆ ಆಧಾರ್ ಲಿಂಕ್ ಆಗಿರುವುದರಿಂದ ಬದಲಾಯಿಸಲಾದ ಮನೆಯ ವಿದ್ಯುತ್ ಬಿಲ್ಗೆ ಅದೇ ಆಧಾರ್ ಜೋಡಿಸಲು ಆಗುವುದಿಲ್ಲ. ಈ ಸಮಸ್ಯೆಯು ಸರ್ಕಾರ ಮತ್ತು ಎಸ್ಕಾಂಗಳ ಅರಿವಿಗೆ ಬಂದಿದೆ. ಇದಕ್ಕಾಗಿ ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ನಿಂದ ಆಧಾರ್ ಅನ್ನು ಡೀಲಿಂಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆಫ್ಲೈನ್ನಲ್ಲಿ ಇದನ್ನು ಮಾಡಬಹುದು. ಅದಕ್ಕಾಗಿ ನಿಮ್ಮ ಎಸ್ಕಾಂ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಡೀಲಿಂಕ್ ಮಾಡಬಹುದು.

ಇದನ್ನೂ ಓದಿ: Viral News: ಟ್ರೆಕ್ಕಿಂಗ್‌ಗೆಂದು ಹೋದ ಯುವಕನ ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಇನ್ನು ಇದು ಪ್ರಯೋಜನವಿಲ್ಲ, ಅದನ್ನು ಕಿತ್ತು ಹಾಕಿ ಎಂದ ನೆಟ್ಟಿಗರು

ಆಧಾರ್ ಡೀಲಿಂಕ್ ಮಾಡಲು ನಿಮ್ಮ ಮನೆಗೆ ಸಮೀಪದ ಎಸ್ಕಾಂ ಕಚೇರಿಗೆ ಹೋಗಿ ಆಧಾರ್ ಡೀಲಿಂಕ್ ಮಾಡಿಸಬಹುದು. ಮನೆಯ ವಿದ್ಯುತ್ ಬಿಲ್, ಲಿಂಕ್ ಆಗಿರುವ ಆಧಾರ್ ಕಾರ್ಡ್ ಪ್ರತಿ, ನಿಮ್ಮ ಭಾವಚಿತ್ರ, ಬಾಡಿಗೆ ಕರಾರು ಪತ್ರ ಈ ದಾಖಲಾತಿಗಳನ್ನು ಮತ್ತು ಗೃಹಜ್ಯೋತಿ ಸ್ಕೀಮ್ಗೆ ಅರ್ಜಿ ಸಲ್ಲಿಸಲಾಗಿದ್ದ ಅಪ್ಲಿಕೇಶನ್ ನಂಬರ್ ಮತ್ತು ಮೊಬೈಲ್ ನಂಬರ್ನ ಮಾಹಿತಿಯನ್ನು ಕಚೇರಿಯಲ್ಲಿ ನೀಡಬೇಕಾಗುತ್ತದೆ.

ಆನ್ಲೈನ್ನಲ್ಲಿ ಗೃಹಜ್ಯೋತಿ ಯೋಜನೆ ರದ್ದು ಮಾಡುವ ಕ್ರಮ: 

ಆನ್ಲೈನ್ನಲ್ಲಿ ಗೃಹ ಜ್ಯೋತಿ ಸ್ಕೀಮ್ ಅಡಿಯಲ್ಲಿ ಆಧಾರ್ ಡೀಲಿಂಕ್ ಮಾಡುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ. ಆಗ ನೀವು ಸೇವಾ ಸಿಂಧು ವೆಬ್ಸೈಟ್ಗೆ ಹೋಗಿ ಸ್ಕೀಮ್ ಕ್ಯಾನ್ಸಲ್ ಮಾಡಬಹುದು.

ಪೋರ್ಟಲ್ನ ವಿಳಾಸ ಇಂತಿದೆ: sevasindhugs1.karnataka.gov.in/gruhajyothi

ಇಲ್ಲಿ ಮುಖ್ಯಪುಟದಲ್ಲಿ ‘ಗೃಹಜ್ಯೋತಿ ಅರ್ಜಿ ರದ್ದುಗೊಳಿಸಿ’ ಎನ್ನುವ ಲಿಂಕ್ ಇರುತ್ತದೆ. ರದ್ದುಗೊಳಿಸಲು ಇರುವ ಕಾರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ

ಅಲ್ಲಿ ಕೇಳಲಾದ ದಾಖಲೆಗಳ ಫೋಟೋಕಾಪಿಯನ್ನು ಅಪ್ಲೋಡ್ ಮಾಡಿ ಸಲ್ಲಿಸಬೇಕು. ಅಲ್ಲಿಗೆ ವಿದ್ಯುತ್ ಬಿಲ್ನಿಂದ ಆಧಾರ್ ಅನ್ನು ಡೀಲಿಂಕ್ ಮಾಡಲಾಗುತ್ತದೆ.

Leave A Reply

Your email address will not be published.