Home Entertainment Janhvi Kapoor: “ನನಗಾಗಿ ಕದ್ದು ಮುಚ್ಚಿ ಕೊನೆಗೆ ಬಂದು ಫ್ಲಾಟ್ ಹಾರಿ ಹೋಗಿದ್ದ ಆತ” :...

Janhvi Kapoor: “ನನಗಾಗಿ ಕದ್ದು ಮುಚ್ಚಿ ಕೊನೆಗೆ ಬಂದು ಫ್ಲಾಟ್ ಹಾರಿ ಹೋಗಿದ್ದ ಆತ” : ಜಾಹ್ನವಿ ಕಪೂ‌ರ್

Janhvi kapoor

Hindu neighbor gifts plot of land

Hindu neighbour gifts land to Muslim journalist

Janhvi Kapoor: ದಿವಂಗತ ನಟಿ ಶ್ರೀದೇವಿ ಮತ್ತು ಖ್ಯಾತ ನಿರ್ಮಾಪಕ ಬೋನಿ ಕಪೂ‌ರ್ ಅವರ ಪುತ್ರಿ ಬಾಲಿವುಡ್‌ ಬ್ಯೂಟಿ ಜಾಹ್ನವಿ ಕಪೂ‌ರ್ ಕೇವಲ ಹಿಂದಿ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಜಾಹ್ನವಿ ಕಪೂ‌ರ್ (Janhvi Kapoor) ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಈಕೆ ಒಂದೇ ಒಂದು ಪೋಸ್ಟ್ ಹಾಕಿದರೆ ಸಾಕು ತಕ್ಷಣ ನೆಟ್ಟಿಗರ ಗಮನ ಸೆಳೆದು, ವೈರಲ್ ಆಗಿ ಬಿಡುತ್ತವೆ.

ಇದನ್ನೂ ಓದಿ: 1000rps Note: 1000ರೂ ನೋಟು ಮತ್ತೆ ಚಲಾವಣೆ ?! RBI ಬಿಗ್ ಅಪ್ಡೇಟ್!!

ಇದೀಗ ಹೊಸ ಸುದ್ದಿ ಒಂದು ಬಂದಿದೆ ನೋಡಿ. ಹೌದು, ಇತ್ತೀಚೆಗೆ ಜಾಹ್ನವಿ ಕಪೂರ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸಕ್ತಿಕರ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಅದೇನೆಂದರೆ, ಜಾಹ್ನವಿ ಅವರು ಒಮ್ಮೆ ಮನೆಯವರಿಗೆ ಗೊತ್ತಾಗದಂತೆ ಒಬ್ಬ ಹುಡುಗನನ್ನು ತನ್ನ ರೂಮಿಗೆ ಕರೆದೊಯ್ದಿದ್ದರಂತೆ. ಆದರೆ, ಆಕೆಯ ತಂದೆ ಬೋನಿ ಕಪೂರ್ ಅದನ್ನು ಕಂಡುಹಿಡಿದರು ಎಂದು ಜಾಹ್ನವಿ ಹೇಳಿದ್ದಾರೆ. Mashable India ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಸಂದರ್ಶನವನ್ನು ಜಾಹ್ನವಿ ಅವರಿದ್ದ ಮುಂಬೈನ ಹಳೆಯ ಫ್ಲಾಟ್ ಮುಂದೆ ಮಾಡಲಾಗಿದೆ.

ಇದನ್ನೂ ಓದಿ: Spiritual: ತೆಂಗಿನಕಾಯಿಯನ್ನು ಮಾಟ ಮಂತ್ರದಲ್ಲಿ ಬಳಸುತ್ತಾರೆ ಯಾಕೆ ಗೊತ್ತಾ!

ಒಮ್ಮೆ ನಾನು ಒಬ್ಬ ಹುಡುಗನನ್ನು ನನ್ನ ಕೋಣೆಗೆ ಕರೆದುಕೊಂಡು ಹೋದೆ. ಆತನನ್ನು ಮುಂಬಾಗಿಲಿನಿಂದ ಕಳುಹಿಸಿದರೆ ತೊಂದರೆಯಾಗುತ್ತದೆ ಅಂತ ಕಿಟಕಿ ಮೂಲಕ ಹೊರಗೆ ಜಿಗಿಯುವಂತೆ ಹೇಳಿದ್ದೆ. ಆತ ಕಾರಿನ ಮೇಲೆ

ಜಿಗಿದು ಆತ ಅಲ್ಲಿಂದ ಹೊರಟು

ಹೋದ. ಆದರೆ, ನನ್ನ ತಂದೆ ಇದನ್ನೆಲ್ಲ

ಸಿಸಿಟಿವಿ ಕ್ಯಾಮೆರಾ ಮೂಲಕ

ನೋಡುತ್ತಿದ್ದರು. ನೀವು ಏನು ಮಾಡುತ್ತಿದ್ದೀರಿ? ಎಂಬ ಪ್ರಶ್ನೆ

ಕೇಳಿಬಂತು.

ಈ ಘಟನೆ ನಂತರ ಯಾರೂ ಒಳಗೆ

ಬರದಂತೆ ನನ್ನ ತಂದೆ ನನ್ನ ಕೋಣೆಯ ಹೊರಗೆ ಗ್ರಿಲ್ ಹಾಕಿಸಿದರು ಎಂದು ಜಾಹ್ನವಿ ಹೇಳಿದ್ದಾರೆ. ಇದು ತಮಾಷೆಯ ಅನುಭವ ಎಂದು ಹೇಳುತ್ತಲೇ ಜಾಹ್ನವಿ ನಕ್ಕರು. ಆದರೆ ಹುಡುಗನ ಹೆಸರನ್ನು ನಟಿ ಬಹಿರಂಗಪಡಿಸಿಲ್ಲ. ಯಾರಿರಬಹುದು ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಬಹುಶಃ ಬಾಯ್‌ಫ್ರೆಂಡ್‌ ಶಿಖ‌ರ್ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ತನ್ನ ತಂದೆ ಬೋನಿ ಕಪೂರ್ ಕೂಡ ಒಮ್ಮೆ ಹೋಟೆಲ್ ಕಿಟಕಿಯಿಂದ ಜಿಗಿದಿದ್ದರು ಎಂದು ಜಾನ್ವಿ ಸಂದರ್ಶನದಲ್ಲಿ ಹೇಳಿದ್ದಾರೆ. ಮದುವೆಗೂ ಮುನ್ನ ಶ್ರೀದೇವಿಯನ್ನು ನೋಡಲು ಹೋದಾಗ ಹೋಟೆಲ್ ಕಿಟಕಿಯಿಂದ ಜಿಗಿದಿದ್ದರು ಎಂದು ಜಾಹ್ನವಿ ಹೇಳಿದ್ದಾರೆ.