Nithin Ghadkari: ನಿತಿನ್ ಗಡ್ಕರಿ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದಲೇ ಸಂಚು ?!
Nithin Ghadkari: ದೇಶಾದ್ಯಂತ ಸಾವಿರಾರು ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸಿ, ರಾಷ್ಟ್ರೀಯ ಹೆದ್ದಾರಿಗಳ ಹರಿಕಾರ, ಹೈವೇ ಮ್ಯಾನ್ ಆಫ್ ಇಂಡಿಯಾ ಎಂದೆಲ್ಲಾ ಖ್ಯಾತಿ ಗಳಿಸಿದ ಕೇಂದ್ರ ಹೆದ್ದಾರಿಗಳ ಸಚಿವ, ಬಿಜೆಪಿಯ ಪ್ರಬಲ ನಾಯಕ ನಿತಿನ್ ಗಡ್ಕರಿ(Nithin Ghadkari) ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದಲೇ ಸಂಚು ನಡೆಯುತ್ತಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: iPhone Offer: ಐ ಫೋನ್ ಪರ್ಚೇಸ್ ಮಾಡುವವರಿಗೆ ಗುಡ್ ನ್ಯೂಸ್! ಈ ಆಫರ್ ಬಿಟ್ರೆ, ನಿಮ್ಮಂತ ಮೂರ್ಖರು ಇನ್ನೊಬ್ಬರಿಲ್ಲ
ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವುತ್(Sanjay Raut) ಭಾನುವಾರ ಹೇಳಿದ ಆ ಒಂದು ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹೌದು, ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೆಲಸ ಮಾಡಿದ್ದಾರೆ ಎಂದು ಸಂಜಯ್ ರಾವುತ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: Health Tips: ನಿಮಗಿದು ತಿಳಿದಿರಲಿ! ನೀರಿನ ಬಾಟಲಿಯಲ್ಲಿ ಈ ಬಣ್ಣದ ಮುಚ್ಚಳ ಇದ್ರೆ ನೀರಿನ ಗುಣಮಟ್ಟ ಉತ್ತಮವಾಗಿರುತ್ತಂತೆ!
ಈ ಕುರಿತು ಅವರು ‘ನಾಗ್ಪುರ(Nagpura) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಡ್ಕರಿ ಅವರ ಪ್ರಚಾರ ಮಾಡಲು ಫಡ್ನವೀಸ್ ಗೆ ಇಚ್ಚೆ ಇರಲಿಲ್ಲ. ಆದರೆ, ಕೇಂದ್ರ ಸಚಿವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಫಡ್ನವೀಸ್ ಇಚ್ಛೆಯಿಲ್ಲದೆ ಪ್ರಚಾರ ಮಾಡಿದ್ದರು. ಒಟ್ಟಿನಲ್ಲಿ ನಿತಿನ್ ಗಡ್ಕರಿಯನ್ನು ಸೋಲಿಸಲು, ಪ್ರಧಾನಿ ಮೋದಿ(PM Modi), ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Padnavis) ಪ್ರಯತ್ನಿಸಿದ್ದರು ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆಯ(Shivasena) ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಬರೆದಿರುವ ರಾವತ್, ಗಡ್ಕರಿಯವರ ಸೈದ್ದಾಂತಿಕ ವಿರೋಧಿಗಳ ಜೊತೆ ಮೋದಿ, ಶಾ ಮತ್ತು ಫಡ್ನವೀಸ್ ಕೈಜೋಡಿಸಿದ್ದರು. ಗಡ್ಕರಿಯವರನ್ನು ಸೋಲಿಸಲು ಅಸಾಧ್ಯ ಎಂದಾದ ಮೇಲೆ, ಫಡ್ನವೀಸ್ ಅವರು ಗಡ್ಕರಿ ಪರ ಪ್ರಚಾರ ನಡೆಸಿದರು ಎಂದು ರಾವತ್ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.