Ban on Indian spices: ಸಿಂಗಾಪುರ ಮತ್ತು ಹಾಂಗ್ ಕಾಂಗ್ ಬಳಿಕ ಭಾರತೀಯ ಮಸಾಲಗಳಿಗೆ ನಿಷೇಧ ಹೇರಿದ ನೇಪಾಳ : ಅಸಲಿಗೆ ಈ ನಿಷೇಧಕ್ಕೆ ಕಾರಣವೇನು ಗೊತ್ತಾ

Ban on Indian spices: ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಂತರ, ಇದೀಗ ನೇಪಾಳವು MDH ಮತ್ತು ಎವರೆಸ್ಟ್‌ನ ಕೆಲವು ಮಸಾಲೆಗಳನ್ನು(Evarest Masala) ನಿಷೇಧಿಸಿದೆ. ಈ ಎರಡೂ ಭಾರತೀಯ ಬ್ರಾಂಡ್‌ಗಳು(Indian Brand) ಕೀಟನಾಶಕ ಬಳಕೆಯ ವಿವಾದದ ಎದುರಿಸುತ್ತಿವೆ. ಈ ಕಾರಣದಿಂದಾಗಿ, MDH ಮತ್ತು ಎವರೆಸ್ಟ್‌ನ ಈ ವಿವಾದದಿಂದ ಭಾರತದ ಮಸಾಲೆ ರಫ್ತುಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೆಲವು ವಾರಗಳ ಹಿಂದೆ, ಅವುಗಳ ಕೆಲವು ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೆಡ್ ಎಂಬ ಕೀಟನಾಶಕವಿದ್ದು, ಇದು ಕ್ಯಾನ್ಸರ್ಗೆ(Cancer) ಕಾರಣವಾಗಬಹುದು ಎಂಬ ವರದಿಗಳು ಬಂದಿವೆ. ಇದಾದ ನಂತರ ಸಿಂಗಾಪುರ ಮತ್ತು ಹಾಂಗ್ ಕಾಂಗ್(singapore & Han kong) ಈ ಮಸಾಲೆಗಳನ್ನು ನಿಷೇಧಿಸಿದವು. ಕೀಟನಾಶಕವಾಗಿ ಬಳಸುವುದರ ಹೊರತಾಗಿ, ಎಥಿಲೀನ್ ಆಕ್ಷೆ ಆಕ್ಸೆಡ್ ಅನ್ನು ವೈದ್ಯಕೀಯ ಉಪಕರಣಗಳನ್ನು ಕ್ರಿಮಿಗಳನ್ನು ನಾಶಕಗೊಳಿಸಲು ಸಹ ಬಳಸಲಾಗುತ್ತಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: Madhu bangarappa: ಮೋದಿಗೆ ಕನ್ನಡ ಬರುತ್ತಾ? ಎಂದ ಮಧು ಬಂಗಾರಪ್ಪ, ಕನ್ನಡಿಗನಾದ ನಿಮಗೇ ಗೊತ್ತಿಲ್ಲ ಕನ್ನಡ, ಇನ್ನು ಗುಜರಾತಿನ ಮೋದಿಗೇಕೆ? ಎಂದ ನೆಟಿಜನ್ಸ್

ಸಾಲ್ಮನೆಲ್ಲಾ ಮತ್ತು ಇ.ಕೋಲಿ ಬ್ಯಾಕ್ಟಿರಿಯಾದಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು ಇದನ್ನು
ಮಸಾಲೆಗಳಲ್ಲಿ ಕ್ರಿಮಿನಾಶಕ ಏಜೆಂಟ್ ಆಗಿ ಬಳಸಲಾಗುತ್ತದೆ. ಆದರೆ US ಎನ್ವಿರಾನ್ಮಂಟಲ್ ಪ್ರೊಟೆಕ್ಷನ್ ಏಜೆನ್ಸಿಯು ಈ ಬಣ್ಣರಹಿತ ಮತ್ತು ವಾಸನೆಯಿಲ್ಲದ ಸಂಯುಕ್ತ ಮನುಷ್ಯನ ದೇಹದಲ್ಲಿ “ಬಿಳಿ ರಕ್ತ ಕಣಗಳ ಕ್ಯಾನ್ಸರ್(Cancer) ಅಪಾಯವನ್ನು” ಹೆಚ್ಚಿಸುತ್ತದೆ ಎಂದು ಹೇಳುತ್ತದೆ.

ಈ ಕಾರಣದಿಂದಾಗಿ ಒಟ್ಟು ನಾಲ್ಕು ಭಾರತೀಯ ಸಾಂಬಾರ ಪದಾರ್ಥಗಳನ್ನು
ನಿಷೇಧಿಸಲಾಗಿದೆ ಎಂದು ನೇಪಾಳದ(Nepal) ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ವಿಭಾಗದ ಮುಖ್ಯಸ್ಥ ಮಾತಿನಾ ಜೋಶಿ ವೈದ್ಯ ಈ ವಿಷಯ ತಿಳಿಸಿದ್ದಾರೆ. ಇದು ಜನರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಗುರುವಾರದಿಂದ ಆಮದು ಮತ್ತು ಮಾರಾಟವನ್ನು ನಿಷೇಧಿಸಿದ್ದೇವೆ, ಮೂರು ಎಂಡಿಹೆಚ್(MDH) ಮತ್ತು ಒಂದು ಎವರೆಸ್ಟ್‌ನಿಂದ ಉತ್ತನಗಳನ್ನು ನಿಷೇಧಿಸಲಾಗಿದೆ.

“ನಮ್ಮ ದೇಶದಲ್ಲಿ ಲ್ಯಾಬ್‌ ಪರೀಕ್ಷೆಗಳನ್ನು ಮಾಡಲು ನಮಗೆ ಸಾಕಷ್ಟು ಸಂಪನ್ಮೂಲಗಳಿಲ್ಲ. ಭಾರತೀಯ ಅಧಿಕಾರಿಗಳು ಅವುಗಳನ್ನು ಸುರಕ್ಷಿತವೆಂದು ಘೋಷಿಸಿದ ನಂತರ,ನಿಷೇಧವನ್ನು ತೆಗೆದುಹಾಕಲಾಗುತ್ತದೆ ಎಂದು ವೈದ್ಯ ತಿಳಿಸಿದ್ದಾರೆ.

ಮತ್ತೊಂದೆಡೆ, ಈ ವಿವಾದದಿಂದಾಗಿ ರಫ್ತುಗಳಲ್ಲಿ 40 ಪ್ರತಿಶತದಷ್ಟು ಕುಸಿತದ ಭೀತಿಯನ್ನು ಭಾರತೀಯ ಮಸಾಲೆಗಳ(Indian spices) ವ್ಯಾಪಾರ ಗುಂಪು ವ್ಯಕ್ತಪಡಿಸಿದೆ. ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು ಮಸಾಲೆ ಪದಾರ್ಥಗಳ ರಫ್ತುದಾರ, ಉತ್ಪಾದಕ ಮತ್ತು ಗ್ರಾಹಕ, ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ, ಇದು ಪ್ರಪಂಚದಾದ್ಯಂತ $ 4 ಬಿಲಿಯನ್ ಮೌಲ್ಯದ ಮಸಾಲೆಗಳನ್ನು ರಫ್ತು ಮಾಡಿದೆ. ಆದರೆ MDH ಮತ್ತು ಎವರೆಸ್ಟ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಕೆಲವು ಖರೀದಿದಾರರು ಸದ್ಯಕ್ಕೆ ತಮ್ಮ ಆರ್ಡ‌್ರಗಳನ್ನು ನಿಲ್ಲಿಸಿದ್ದಾರೆ ಎಂದು ಫೆಡರೇಶನ್ ಆಫ್ ಇಂಡಿಯನ್ ಸ್ಪೇಸ್ ಸ್ಟೇಕ್ ಹೋಲ್ಡರ್ಸ್ (FICC) ಹೇಳಿದೆ.

ಬ್ರಿಟನ್ನಿನ(Britan) ಆಹಾರ ನಿಯಂತ್ರಕರು ಈಗಾಗಲೇ ಭಾರತದಿಂದ ಬರುವ ಮಸಾಲೆಗಳ ಮೇಲೆ ಹೆಚ್ಚುವರಿ ತಪಾಸಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕ ಮತ್ತು ನ್ಯೂಜಿಲೆಂಡ್ ಕೂಡ ಈ ವಿಷಯದ ಮೇಲೆ ಕಣ್ಣಿಟ್ಟಿವೆ. FICC ಕಾರ್ಯದರ್ಶಿ ತೇಜಸ್ ಗಾಂಧಿ, “ಇತರ ದೇಶಗಳು ಸಹ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಮ್ಮ ಮಸಾಲೆ ರಫ್ತು(Spices Export) ಶೇಕಡಾ 40 ರಷ್ಟು ಕುಸಿಯಬಹುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Nuclear Bomb: ಭಾರತದ ಮೊದಲ ಪರಮಾಣು ಪರೀಕ್ಷೆಗೆ ‘ಸ್ಟೈಲಿಂಗ್ ಬುದ್ಧ’ ಎಂದು ಏಕೆ ಹೆಸರಿಡಲಾಯಿತು ಗೊತ್ತಾ? : 50 ವರ್ಷಗಳಾದರೂ ಕಾರ್ಯಾಚರಣೆ ನಿಗೂಢ

Leave A Reply

Your email address will not be published.