Miyazaki Mango: ಉಡುಪಿಯಲ್ಲಿ ಟೆರೇಸ್ ಮೇಲೆ ಬೆಳೆದ ಮಾವು – ಕೆಜಿಗೆ 2.7 ಲಕ್ಷ !!
Miyazaki Mango: ಮಾವುಪ್ರಿಯರಿಗೆ ಇದು ಸುಗ್ಗಿಯ ಕಾಲ. ಯಾವ ಮಾರುಕಟ್ಟೆಯಲ್ಲಿ ನೋಡಿದರೂ ಮಾವು(Mango) ಗಳದ್ದೇ ದರ್ಬಾರು. ತೋತಾಪುರಿ, ಸರಪುರಿ, ಮಲಗೂಬ, ಕಸಿ, ನಾಟಿ ಎನ್ನುತ್ತಾ ವಿವಿಧ ನಮೂನೆಯ ಮಾವುಗಳ ಘಮಘಮ. ಬೆಲೆ ಎಷ್ಟಾದರೂ ಪರವಾಗಿಲ್ಲ ಕೊಂಡು ತಿನ್ನುವ ಎಂಬ ಆಸೆ. ಅಂದಹಾಗೆ ಈ ಮಾವಿನ ಬೆಲೆ ಹೆಚ್ಚೆಂದರೆ ಎಷ್ಟಿರಬಹುದು ಹೇಳಿ? ಕೆಜಿಗೆ 100, 200, 500 ಹೋಗಲಿ ಒಳ್ಳೆಯ ರಸಭರಿತವಾದುದಕ್ಕೆ 1000ರೂಪಾಯಿ ಎಂದೇ ಇಟ್ಟುಕೊಳ್ಳಿ. ಇಂದಿನ ಬೇಸಿಗೆಯಲ್ಲಿ ಈ ಬೆಲೆ ಹೆಚ್ಚು ಅನಿಸುವುದಿಲ್ಲ. ಆದರೆ ಒಂದು ಕೆ.ಜಿ ಮಾವಿಗೆ 2.7ಲಕ್ಷ ಅಂದ್ರೆ ನೀವು ನಂಬುತ್ತೀರಾ? ಇದನ್ನು ಕೇಳಿ ನಿಮಗೆ ನಮ್ಮ ಮೇಲೆ ಕೋಪ ಬರಬಹುದು.. ಎಂತಾ ಇದು ಅಧಿಕಪ್ರಸಂಗ, ತಮಾಷೆ ಮಾಡಲು ಇಷ್ಟೆಲ್ಲಾ ರೇಟ್ ಹೇಳೋದಾ? ಎಂದು ಬೈಯ್ಯುತ್ತಿರಬಹುದು. ಆದರೆ ಇದು ಸತ್ಯ, ಸತ್ಯ, ಸತ್ಯ.. !! ಈ ಸ್ಟೋರಿ ಒಮ್ಮೆ ಕಂಪ್ಲೀಟ್ ನೋಡಿ.
ಇದನ್ನೂ ಓದಿ: Puttur: ದೇವರಗದ್ದೆಯಲ್ಲಿದ್ದ ಹೋರಿ ನಾಪತ್ತೆ -ಬಲ್ನಾಡಿನ ಉಳ್ಳಾಲ್ತಿಯ ಮೊರೆ ಹೋದ ಭಕ್ತರು
ನೀವು ಆಗೊಮ್ಮೆ ಈಗೊಮ್ಮೆ ಮೊಬೈಲ್ ನಲ್ಲೋ, ನ್ಯೂಸ್ ನಲ್ಲೋ ಕೇಳಿರಬಹುದು, ವಿದೇಶಿ ಮಾವಿನ ತಳಿಯೊಂದು ಕೆಜಿಗೆ 2 ಲಕ್ಷ ಬೆಲೆಯಲ್ಲಿ ಮಾರಾಟವಾಗಿದೆ ಎಂದು. ಆದರೀಗ ನಾವು ಹೇಳ ಹೊರಟ ಸ್ಟೋರಿ ವಿದೇಶದ್ದಲ್ಲ. ನಮ್ಮ ದೇಶದ್ದೇ. ಅದೂ ಕೂಡ ನಮ್ಮ ಕರ್ನಾಟಕದ ಉಡುಪಿಯ ರೈತರು ಬೆಳೆದ ಮಾವಿನ ಹಣ್ಣಿನ ಕಥೆ, ಅದರ ಬೆಲೆಯ ಕುರಿತು. ಹೌದು, ತಾರಸಿ ಕೃಷಿ ಪ್ರಯೋಗದಲ್ಲಿ ಹೆಸರುವಾಸಿಯಾಗಿರುವ ಉಡುಪಿ ಶಂಕರಪುರದ(Udupi, Shankarapura) ಜೋಸಫ್ ಲೋಬೋ(Joseph Lobo) ಪಕ್ಕದ ಕೇರಳ ರಾಜ್ಯದಿಂದ ಪ್ರಯೋಗಾರ್ಥವಾಗಿ ವಿದೇಶಿ ತಳಿಯ ಮಾವಿನ ಗಿಡವನ್ನು ತಂದು ತಮ್ಮ ಮಹಡಿಯ ಮೇಲೆ ಈ ಗಿಡವನ್ನು ನೆಟ್ಟಿದ್ದರು. ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡ, ಈ ಬಾರಿ ಫಸಲನ್ನು ನೀಡಿದ್ದು, ಭರ್ಜರಿ ಆದಾಯ ನೀಡಿದೆ.
ಇದನ್ನೂ ಓದಿ: Mangaluru: ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಅಂದಹಾಗೆ ಲೋಬೋ ಅವರು ಮೂರುವರೆ ವರ್ಷದ ಹಿಂದೆ ಕೇರಳದ ಕಣ್ಣೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ 16,800 ರೂ. ಗೆ ಮಿಯಾಝಕಿ ತಳಿಯ ಮಾವಿನ ಗಿಡವನ್ನು ಜೋಸೆಫ್ ಅವರು ತಂದಿದ್ದರು. ಎರಡೂವರೆ ವರ್ಷದ ಹಿಂದೆ ಇದು ಹೂವು ಮಾತ್ರ ಬಿಡುತ್ತಿದ್ದ ಈ ಗಿಡದಲ್ಲಿ ಈಗ ಕೆಂಪು, ಸಾದಾ ಹಸುರು ಬಣ್ಣದ ಮಾವು ಬೆಳೆದಿದೆ. ಗಿಡದಲ್ಲಿ ಬಿಟ್ಟ ಒಂದೊಂದು ಹಣ್ಣು ಸುಮಾರು 600 ರಿಂದ 650 ಗ್ರಾಂ ಇದೆ. ಇದರ ಬೆಲೆ ಕೆಜಿಗೆ 2 ಲಕ್ಷದ 70 ಸಾವಿರ ರೂಪಾಯಿ ಇದೆ.
ಯಾವುದು ಈ ತಳಿ?
ಮಿಯಾಯೋಕಿ ಎಂಬ ಈ ಮಾವಿನ ಹಣ್ಣು ಜಪಾನಿ ತಳಿ. ಈ ಮಿಯಾಜಾಕಿ(Miyazaki Mango) ತಳಿ ಮಾವಿನಹಣ್ಣಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ 2 ಲಕ್ಷ 70 ಸಾವಿರ ಬೆಲೆ ಇದೆ. ಕೇವಲ ಒಂದು ಹಣ್ಣಿನ ಬೆಲೆ 10,000 ಎಂದರೆ ನೀವು ನಂಬಲೇಬೇಕು. ಈ ಮಾವು ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿರುತ್ತದೆ. ಮಾವು ಹಣ್ಣಾಗುವ ಹಂತ ತಲುಪಿದಾಗ ಬೆಂಕಿ ಜ್ವಾಲೆಯ ಬಣ್ಣಕ್ಕೆ ತಿರುಗುತ್ತದೆ. ನೋಡಲು ಮಲ್ಲಿಕಾ ಮಾವಿನ ಹಣ್ಣಿನ ತಳಿಯಂತೆ ಕಾಣುವ ಈ ಜಪಾನಿ ತಳಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.
ಕೃಷಿಕ ಜೋಸೆಫ್ ಲೋಬೋ ಅವರು ಕಡಿಮೆ ಜಾಗದಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಮನೆಯ ಅಕ್ಕ ಪಕ್ಕ ಜಾಗ ಇಲ್ಲದೇ ಹೋದರೂ ಮನೆಗೆ ತಾರಸಿಯಲ್ಲಿ ಗಿಡಗಳನ್ನು ನೆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಳೆದ ವರ್ಷ ಹವಾಮಾನ ವೈಪರಿತ್ಯದಿಂದ ಜೋಸೆಫ್ ಅವರ ಮಾವಿನ ಗಿಡ ಯಾವುದೇ ಫಸಲನ್ನು ಕೂಡ ನೀಡಿರಲಿಲ್ಲ. ಈ ಬಾರಿ ಸಣ್ಣ ಮಟ್ಟದ ಫಸಲು ಬಂದಿದ್ದು, ಈಗಾಗಲೇ ಆ ಹಣ್ಣುಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಿ ಲಾಭ ಪಡೆದುಕೊಂಡಿದ್ದಾರೆ.
[…] […]
[…] […]