Indian Politicians: ಸ್ವಂತ ಕಾರು ಇಲ್ಲದ ದೇಶದ ಘಟಾನುಘಟಿ ರಾಜಕಾರಣಿಗಳಿವರು !!

Indian Politicians: ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರವನ್ನು(Nomination) ಸಲ್ಲಿಸುವ ವೇಳೆ ಅಫಿಡೆವಿಟ್(Affidavit) ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸುವುದು ಸಾಮಾನ್ಯ. ತಮ್ಮ ಚರಾಸ್ತಿ ಹಾಗೂ ಸ್ಥಿರಾಸ್ತಿ ಎಷ್ಟು, ಏನಿಲ್ಲ ಸಂಪತ್ತನ್ನು ಹೊಂದಿದ್ದೇವೆ, ಯಾವೆಲ್ಲ ಬೆಲೆಬಾಳುವ ವಸ್ತುಗಳು ನಮ್ಮಲ್ಲಿವೆ ಎಂದು ಈ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ತಿಳಿಸಬೇಕು. ಇದು ನಿಯಮ ಕೂಡ. ಅಂತೆಯೇ ಈ ಸಲದ ಲೋಕಸಭಾ ಚುನಾವಣೆಯಲ್ಲಿ(Parliament Election) ದೇಶಾದ್ಯಂತ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.

ಇದನ್ನೂ ಓದಿ: Brothel House: ಅಪ್ರಾಪ್ತ ಬಾಲಕಿಯರೊಂದಿಗೆ ಬಲವಂತದ ವೇಶ್ಯಾವಾಟಿಕೆ : ಡಿಎಸ್ಪಿ ಸೇರಿ 8 ಮಂದಿ ಸರ್ಕಾರಿ ನೌಕರರ ಬಂಧನ

ಈ ಸಲದ ಲೋಕಸಭಾ ಚುನಾವಣೆಯ ವೇಳೆ ಆಸ್ತಿಯವರ ಘೋಷಿಸಿಕೊಂಡಂತ ವಿಚಾರದಲ್ಲಿ ನಾವು ಹಲವು ಅಚ್ಚರಿ ಸಂಗತಿಗಳನ್ನು ನಾವು ಕಾಣಬಹುದು. ಕೆಲವರು ಸಾವಿರ, ಎರಡು ಸಾವಿರ ಕೋಟಿಗಿಂತಲೂ ಅಧಿಕಾಸ್ತಿಯನ್ನು ಹೊಂದಿದ್ದರೆ ಮತ್ತೆ ಕೆಲವರು ನಿರಂತರವಾಗಿ ಅಧಿಕಾರದಲ್ಲಿದ್ದರೂ ಜೀವನ ನಡೆಸುವಷ್ಟು ಕೆಲವೇ ಸಾವಿರ, ಲಕ್ಷಗಳಲ್ಲಿ ಮಾತ್ರ ಹಣ ಹೊಂದಿರುವವರನ್ನೂ ಕಾಣಬಹುದು. ಅಲ್ಲದೆ ದೇಶದ ಪ್ರಧಾನಿ(PM Modi)ಯಾಗಿ, 10 ವರ್ಷಗಳ ಕಾಲ ದೇಶವನ್ನು ನಡೆಸಿದ ನರೇಂದ್ರ ಮೋದಿಯವರು ಕೇವಲ ಮೂರು ಕೋಟಿರೂಪಾಯಿ ಮಾತ್ರ ಹೊಂದಿರುವುದು ಅಚ್ಚರಿ ತರಿಸಿದೆ. ಜೊತೆಗೆ ಭಾರತೀಯರಾದ ನಮಗೆ ಹೆಮ್ಮೆ ಎನಿಸಿದೆ. ಆದರೆ ವಿಶೇಷ ಏನೆಂದರೆ ದೇಶದ ಕೆಲವು ಘಟಾನುಘಟಿ ನಾಯಕರುಗಳು, ಕೋಟ್ಯಂತರ ಆಸ್ತಿ ಹೊಂದಿರುವ ರಾಜಕಾರಣಿಗಳು ತಮ್ಮ ಬಳಿ ಒಂದೇ ಒಂದು ಸ್ವಂತ ಕಾರು ಇಟ್ಟುಕೊಂಡಿಲ್ಲ. ಹಾಗಿದ್ರೆ ಅಂತಹ ರಾಜಕಾರಣಿಗಳು ಯಾರು ?

ಇದನ್ನೂ ಓದಿ: Virat Kohli : ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ !!

• ಪ್ರಧಾನಿ ಮೋದಿ:

ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಹಂಬಲದಲ್ಲಿರುವ ಪ್ರಧಾನ ನರೇಂದ್ರ ಮೋದಿ(Narendra Modi) ಮೇ 14 ರಂದು ನಾಮಪತ್ರ ಸಲ್ಲಿಸಿದ್ದಾರೆ. ಇದರ ಪ್ರಕಾರ ಅವರ ಆಸ್ತಿ 3.02 ಕೋಟಿ ಆಗಿದ್ದು, ಯಾವುದೇ ಜಮೀನು, ಮನೆ ಹಾಗೂ ಕಾರು ಹೊಂದಿಲ್ಲ

• ಅಮಿತ್ ಶಾ:

ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amith Shah) ಅವರ ಬಳಿ 36 ಕೋಟಿ ಆಸ್ತಿ ಹೊಂದಿದ್ದು, ಪತ್ನಿ ಸೋನಲ್‌ ಶಾ ಬಳಿ 31 ಕೋಟಿ ಆಸ್ತಿ ಇದೆ. ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೂ ಇವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ.

• ರಾಜನಾಥ್ ಸಿಂಗ್:

ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌(Rajanath Singh) ಲಕ್ನೋ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರ ಸ್ಪರ್ಧೆ ಮಾಡುತ್ತಿದ್ದಾರೆ. ಒಟ್ಟು 6.36 ಕೋಟಿ ಆಸ್ತಿ ಹೊಂದಿರುವ ರಾಜನಾಥ್‌ ಸಿಂಗ್‌ ಅವರ ಬಳಿ ಸ್ವಂತ ಕಾರಿಲ್ಲ.

• ರಾಹುಲ್ ಗಾಂಧಿ:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಕೂಡ ಸ್ವಂತ ಕಾರು ಹೊಂದಿಲ್ಲ. ಕೇರಳದ ವಯನಾಡ್‌ ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಇವರು ಸ್ಪರ್ಧೆ ಮಾಡುತ್ತಿದ್ದು, 20 ಕೋಟಿ ಆಸ್ತಿ ಹೊಂದಿದ್ದಾರೆ.

• ಅಸಾದುದ್ದೀನ್‌ ಓವೈಸಿ:

ಎಐಎಂಐಎಂ ಪಕ್ಷದ ನಾಯಕ ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಬಳಿ 23 ಕೋಟಿ ಆಸ್ತಿ ಇದೆ. ಹಾಗಿದ್ದರೂ ಅವರ ಬಳಿ ಯಾವುದೇ ಕಾರಿಲ್ಲ.

• ಶಿವರಾಜ್‌ ಸಿಂಗ್‌ ಚೌಹಾಣ್‌ :

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ 15 ವರ್ಷ ಇವರು ಕೆಲಸ ಮಾಡಿರುವ ಶಿವರಾಜ್‌ ಸಿಂಗ್‌ ಚೌಹಾಣ್‌(Shivraj Singh Chowan) ಅವರ ಬಳಿಯಲ್ಲೂ ಸ್ವಂತ ಕಾರುಗಳಿಲ್ಲ. ಪತ್ನಿಯ ಹೆಸರಲ್ಲಿ ಒಂದು ಅಂಬಾಸಿಡರ್‌ ಕಾರು ಇದೆ.

• ಮನೋಹರ್‌ ಲಾಲ್‌ ಖಟ್ಟರ್‌:

ಹರ್ಯಾಣದ ಮಾಜಿ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌(Manoher Lal Kattal) ಈ ಬಾರಿ ಕರ್ನಾಲ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. 1.27 ಕೋಟಿ ಆಸ್ತಿ ಹೊಂದಿರುವ ಇವರ ಬಳಿ ಕೂಡ ಸ್ವಂತ ಕಾರು ಇಲ್ಲ.

• H D ಕುಮಾರಸ್ವಾಮಿ :

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ(H d kumarswamy) ಅವರ ಆಸ್ತಿ 217.21 ಕೋಟಿ ರೂಪಾಯಿ. ಇವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ. ಆದರೆ, ಸ್ವಂತ ಟ್ರ್ಯಾಕ್ಟರ್‌ಅನ್ನು ಇವರು ಹೊಂದಿದ್ದಾರೆ

• ಮಾಧವಿ ಲತಾ ಕೊಂಪೆಲ್ಲಾ : 

ತೆಲಂಗಾಣದ ಹೈದರಾಬಾದ್‌ನಲ್ಲಿ ಓವೈಸಿಗೆ ಎದುರಾಳಿಯಾಗಿರುವ, ವಿರುಂಚಿ ಆಸ್ಪತ್ರೆಯ ಚೇರ್ಮನ್‌, ಹಿಂದೂ ನಾಯಕಿ ಮಾಧವಿ ಲತಾ ಕೊಂಪೆಲ್ಲಾ ಆಸ್ತಿ 220 ಕೋಟಿ. ಹಾಗಿದ್ದರೂ ಇವರು ಸ್ವಂತ ಕಾರು ಹೊಂದಿಲ್ಲ.

• ಅಖಿಲೇಶ್‌ ಯಾದವ್‌: 

ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌(Akhilesh Yadav) ಅವರ ಬಳಿಯಲ್ಲೂ ಸ್ವಂತ ಕಾರುಗಳಿಲ್ಲ. ಕನೌಜ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಇವರ ಬಳಿಕ 26.34 ಕೋಟಿ ರೂಪಾಯಿ ಆಸ್ತಿ ಇದೆ. ಅವರ ಹೆಂಡತಿ ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಅವರ ಬಳಿಯೂ ಯಾವ ಕಾರು ಇಲ್ಲ.

Leave A Reply

Your email address will not be published.