Kashinath: ನಿರ್ದೇಶನ ಕಲಿಯದೇ ಕಾಶಿನಾಥ್ ಬಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದು ಹೇಗೆ ಗೊತ್ತಾ?
Kashinath: ಒಂದು ಕಾಲದಲ್ಲಿ ಕಾಶಿನಾಥ್ ಹೆಸರು ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಎಲ್ಲೆಲ್ಲೂ ಶೈನ್ ಆಗಿತ್ತು. ಸಣ್ಣ ಬಜೆಟ್ ನಲ್ಲಿ ಮನಮುಟ್ಟುವ ಕಾಶಿ ನಾಥ್ ( Kashinath) ರ ನಿರ್ದೇಶನಕ್ಕೆ ಎಲ್ಲರೂ ಫಿದಾ ಆಗಿದ್ದರು. ಒಟ್ನಲ್ಲಿ ಕಾಶಿನಾಥ್ ಕನ್ನಡ ಚಿತ್ರರಂಗದ ಅಪರೂಪದ ಅತಿಥಿಯಾಗಿದ್ದರು.
ಇದನ್ನೂ ಓದಿ: Alien: ಭೂಮಿಗೆ ಬಂದಿಳಿದ ಏಲಿಯನ್ಸ್, ಇದು 100% ನಿಜವೆಂದ ಸೈಂಟಿಸ್ಟ್ !! ವಿಡಿಯೋ ವೈರಲ್
ಹೌದು, ಕಾಶಿನಾಥ್ ಬಗ್ಗೆ ಹೇಳುವುದಾದರೆ, ಕಾಶಿ ಅವರು ಅಸೀಮಾ ಅನ್ನೋ ತಂಡ ಕಟ್ಟಿಕೊಂಡು ಒಂದು ಸಿನಿಮಾ ಕ್ಲಬ್ ಮಾಡಿಕೊಂಡಿದ್ರು. ಈ ಕ್ಲಬ್ ನಲ್ಲಿ ಹಲವಾರು ವಿದೇಶಿ ಚಿತ್ರಗಳನ್ನ ನೋಡಿ ಸಿನಿಮಾ ಬಗ್ಗೆ ತಮ್ಮದೇ ಆದ ಒಲವು ಕಂಡು, ನಂತರ ಕಾಶಿನಾಥ್ ಸ್ಲಿಪ್ ಅನ್ನೋ ಕಿರುಚಿತ್ರ ಮಾಡಿದ್ರಂತೆ. ಈ ಚಿತ್ರವನ್ನು ವಿದೇಶಿ ನಿರ್ದೇಶಕರೂ ಮೆಚ್ಚಿಕೊಂಡಿದ್ರು. ಅಲ್ಲಿಂದ ಮುಂದೆ ಕಾಶಿನಾಥ್ ಗೆ ಸಿನಿಮಾ ಮಾಡೋ ಆತ್ಮವಿಶ್ವಾಸ ಹೆಚ್ಚಿತು.
ಇದನ್ನೂ ಓದಿ: Rahul Gandhi: ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ; ರಾಗಾ ಉವಾಚ
ಸದ್ಯ ಮೊದಲ ಸಿನಿಮಾನೇ ಸಕ್ಸಸ್ ಕಂಡು, ಬಳಿಕ ಅಪರಿಚಿತ ಅನ್ನೋ ಸಸ್ಪೆನ್ಸ್ ಥ್ರಿಲ್ಲರ್ ಮೂವಿ, ಹಾಲಿವುಡ್ ರೀತಿ ಇದ್ದ ಕಾರಣ ಈ ಥ್ರಿಲ್ಲರ್ ಮೂವಿ ನೋಡಿ ಇಡೀ ದಕ್ಷಿಣ ಭಾರತವೇ ಫಿದಾ ಆಗಿತ್ತು. ನಂತರ ತೆಲುಗಿನಲ್ಲಿ ರಿಮೇಕ್ ಆದ ಸಿನಿಮಾ ಅಲ್ಲಿಯೂ ಶತದಿನ ಓಡಿತ್ತು. ಬಳಿಕ ಹಿಂದಿಗೂ ಈ ಸಿನಿಮಾ ರಿಮೇಕ್ ಆಯ್ತು. ಹಿಂದಿಯಲ್ಲಿ ಬೇಶಕ್ ಹೆಸರಿನಲ್ಲಿ ಈ ಚಿತ್ರವನ್ನ ಕಾಶೀನಾಥ್ ಡೈರೆಕ್ಟ್ ಮಾಡಿದ್ದರು.
ಕಾಶಿನಾಥ್ 1981ರಲ್ಲಿ ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿ ಬಂದಿದ್ದರು. ಮಿಥುನ್ ಚಕ್ರವರ್ತಿ, ಯೋಗಿತಾ ಬಾಲಿ ನಟನೆಯಲ್ಲಿ ಬಂದ ಬೇಶಕ್ ಸಿನಿಮಾ ಬಾಲಿವುಡ್ ಮಂದಿಯನ್ನೂ ಬೆರಗುಗೊಳಿಸಿತ್ತು.
ಇನ್ನೂ ಕಾಶಿನಾಥ್ ತಾವೇ ನಾಯಕನಾಗಿ ನಟಿಸಿ ನಿರ್ದೇಶಿಸಿಸದ ಸಿನಿಮಾ ಅನುಭವ ಕೂಡ ಹಿಂದಿಗೆ ರಿಮೇಕ್ ಆಯ್ತು. ಅದನ್ನೂ ಕೂಡ ಹಿಂದಿಯಲ್ಲಿ ಡೈರೆಕ್ಟ್ ಮಾಡಿದ್ದು ಕಾಶಿನಾಥ್ ಆಗಿದ್ದರು.
ಇನ್ನು ಕಾಶಿನಾಥ್ ರ ಅವಳೇ ನನ್ ಹೆಂಡತಿ ಸಿನಿಮಾ ಕೂಡ ಜವಾನಿ ಜಿಂದಾಬಾದ್ ಹೆಸರಿನಲ್ಲಿ ಹಿಂದಿಯಲ್ಲಿ ರಿಮೇಕ್ ಆಯ್ತು. ಅದರಲ್ಲಿ ಕಾಶಿನಾಥ್ ನಟಿಸಿದ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ದರು ಅನ್ನೋದು ಹೆಮ್ಮೆಯ ವಿಚಾರ.