Alien: ಭೂಮಿಗೆ ಬಂದಿಳಿದ ಏಲಿಯನ್ಸ್, ಇದು 100% ನಿಜವೆಂದ ಸೈಂಟಿಸ್ಟ್ !! ವಿಡಿಯೋ ವೈರಲ್

Share the Article

Alien: ‘ಏಲಿಯನ್ಸ್ ‘ ಎಂಬುದು ವಿಜ್ಞಾನ ಲೋಕದ ಅತೀ ದೊಡ್ಡ ಪ್ರಶ್ನೆ. ವಿಜ್ಞಾನ (Science) ಎಷ್ಟೇ ಮುಂದುವರಿದಿದ್ದರೂ ಏಲಿಯನ್ಸ್ (Alien) ಜಗತ್ತಿನಲ್ಲಿ ಇದೆಯೋ ಇಲ್ಲವೋ ಎಂಬ ಗೊಂದಲ ಹಲವು ವರ್ಷಗಳಿಂದ ಹೆಚ್ಚಿನವರಿಗೆ ಕಾಡುತ್ತಲೇ ಇದೆ. ಅನ್ಯಗ್ರಹ ಜೀವಿಗಳ ಅಸ್ತಿತ್ವ ಮತ್ತು ಭೂಮಿಯ (Earth) ಮೇಲಿನ ಅವುಗಳ ಉಪಸ್ಥಿತಿ ಕೆಲವೊಮ್ಮೆ ಕೆಲವು ಘಟನೆಗಳ ಮೂಲಕ ವ್ಯಕ್ತವಾಗುತ್ತದೆ. ಸದ್ಯ ಇದೀಗ ಈ ಏಲಿಯನ್ಸ್ಗಳಿಗೆ ಸಂಬಂಧಿಸಿದ ಒಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು, ಏಲಿಯನ್ಸ್ ಭೂಮಿಗೆ ಬಂದಿದೆ ಎನ್ನಲಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

https://x.com/HurricaneD6/status/1668002466129141760?t=EOJsx05iK-OtUZfEt5JJdA&s=08

ಹೌದು, ಅಮೆರಿಕದ ಲಾಸ್ ವೇಗಾಸ್‌ನ ಕುಟುಂಬವೊಂದು ಏಲಿಯನ್ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವನ್ನು ಚಿತ್ರೀಕರಿಸಿದೆ. ಇದರಲ್ಲಿ ಏಲಿಯನ್ಸ್ ಗಳು ಭೂಮಿಗೆ ಬಂದಿಳಿದ ದೃಶ್ಯ ಸೆರೆಯಾಗಿದೆ. ಕೆಲವರು ಅದನ್ನು ಸಾಮಾನ್ಯವಾಗಿ ಉಲ್ಕಾಶಿಲೆ ಎಂದು ಭಾವಿಸಿದ್ದಾರೆ. ಆದರೆ, ಇನ್ನು ಕೆಲವರು ಇದು ಏಲಿಯನ್ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಜ್ಞರ ಗುಂಪೊಂದು ಕೂಡ ಈ ವಿಡಿಯೋ ನಕಲಿ ಅಲ್ಲ ಅಸಲಿ ಅಂತಾನೂ ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ: Rahul Gandhi: ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ; ರಾಗಾ ಉವಾಚ

ಅಂದಹಾಗೆ ಕಳೆದ ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 11.50ರ ಸುಮಾರಿಗೆ ಲಾಸ್ ವೇಗಾಸ್‌ನ ಕುಟುಂಬವೊಂದಕ್ಕೆ ಆಕಾಶದಲ್ಲಿ ಹಸಿರು ದೀಪವೊಂದು ಕಾಣಿಸುತ್ತದೆ. ಅಷ್ಟರಲ್ಲೇ ಮನೆಯ ಹಿಂಬದಿಯಲ್ಲಿ ಏನೋ ಬೀಳುತ್ತಿರುವುದನ್ನು ಗೋಚರಿಸುತ್ತದೆ. ಏನೆಂದು ಪರಿಶೀಲಿಸುತ್ತಿರುವಾಗ ಬೇಲಿಗಳ ಬಳಿ ವಿಚಿತ್ರ ಆಕೃತಿಯೊಂದು ಕಾಣುತ್ತದೆ. ಉದ್ದವಾದ, ತೆಳ್ಳಗಿನ ಆಕೃತಿಯು ಬೂದು-ಹಸಿರು ಬಣ್ಣದಲ್ಲಿದ್ದು ಸುಮಾರು 8 ರಿಂದ 10 ಅಡಿ ಎತ್ತರವಿತ್ತು ಎಂದು ಅದನ್ನು ಕಂಡವರು ಹೇಳುತ್ತಾರೆ.

ಇದನ್ನೂ ಓದಿ: ATM Rules: ಯಾವುದೇ ಚಾರ್ಜ್ ಇಲ್ಲದೇ ಎಟಿಎಂನಿಂದ ಹಣ ಡ್ರಾ ಹೇಗೆ ಸಾಧ್ಯ ಗೊತ್ತಾ?

ಅಷ್ಟೇ ಅಲ್ಲದೆ ದೈತ್ಯ ಹೊಳೆಯುವ ಕಣ್ಣುಗಳಿಂದ ಆ ಆಕೃತಿಯು ತಮ್ಮನ್ನು ದಿಟ್ಟಿಸುತ್ತಿತ್ತು. ಮತ್ತು ಅದು 100% ಮನುಷ್ಯನಲ್ಲ ಎಂಬುದು ತಿಳಿಯಿತೆಂದು ವೀಡಿಯೊವನ್ನು ರೆಕಾರ್ಡ್ ಮಾಡಿದ ಕುಟುಂಬದವರು ಹೇಳುತ್ತಾರೆ. ಅಚ್ಚರಿ ಏನಂದ್ರೆ ತಜ್ಞರು ಕೂಡ ಈ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ವ್ಯಕ್ತಪಡಿಸಿದ್ದಾರೆ.

Leave A Reply