Orry: ಫಾರ್ಮ್​ಹೌಸ್​ಗೆ ಕರೆದು 25 ಲಕ್ಷ ಕೊಡ್ತಾರೆ! ಸೀಕ್ರೆಟ್ ಬಿಚ್ಚಿಟ್ರು ಫೇಮಸ್‌ ನಟ!

Share the Article

Orry: ಈತನ ಜೊತೆ ಜಸ್ಟ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳ್ತಾರಂತೆ. ಹೌದು, ಈತನ ಜೊತೆ ಫೋಟೋ ತೆಗೆದುಕೊಳ್ಳಲು ಮೊದಲು ಈತನಿಗೆ ಲಕ್ಷಾಂತರ ರೂಪಾಯಿ ನೀಡಬೇಕಂತೆ. ಆದರೂ ಕೆಲವು ಸ್ಟಾರ್‌ಗಳು ಹಣ ಪಾವತಿಸಿ ಈತನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈತ ಬೇರೆ ಯಾರೂ ಅಲ್ಲ. ಬಾಲಿವುಡ್‌ ಸ್ಟಾರ್‌ಗಳಷ್ಟೇ ಫೇಮಸ್‌ ಆಗಿರುವ ಒರಿ. ಓರಿ ಎಂದು ಕರೆಯಲ್ಪಡುವ ಈ ಯುವಕನ ಹೆಸರು ಓರ್ಹನ್ ಅವತ್ರಮಣಿ. ಸದ್ಯ ಗಂಟೆ ಗಂಟೆಗೂ ಲಕ್ಷಾಂತರ ರೂಪಾಯಿ ಗಳಿಸುವ ಒರಿ ತಮ್ಮ ಗಳಿಕೆಯ ಬಗ್ಗೆ ಇತ್ತೀಚಿಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Prajwal Revanna Video: ನನ್ನ ಯಾರೂ ಕಿಡ್ನ್ಯಾಪ್‌ ಮಾಡಿಲ್ಲ- ಸಂತ್ರಸ್ತೆ ಮಹಿಳೆ ವಿಡಿಯೋ ವೈರಲ್

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿರುವ ಒರಿ (Orry) ಸೆಲೆಬ್ರೆಟಿಗಳ ಖಾಸಗಿ ಕಾರ್ಯಕ್ರಮಗಳಿಗೆ ಭಾಗಿ ಆದರೆ ಒಂದು ಇವೆಂಟ್‌ಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ.

ಒರಿ ಪ್ರಕಾರ, ನಾನು ಒಂದು ಫೋಟೋ ಕೇಳಿದರೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ನಾನಾಗೇ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ನೋ ಚಾರ್ಜ್. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ಎಲ್ಲರೂ ಫಾರ್ಮ್ಹೌಸ್ಗೆ ಕರೆಯುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ದಿನಕ್ಕೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದು ಒರಿ ಹೇಳಿದ್ದಾರೆ.

ಇದನ್ನೂ ಓದಿ: Exam Postponed: ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

ಅಂದಹಾಗೆ ಒರಿ ತಮ್ಮದೇ ಆದ ತಂಡ ಹೊಂದಿದ್ದು, ಈವೆಂಟ್ಗಳನ್ನು ಮ್ಯಾನೇಜ್‌ಮೆಂಟ್‌ ಮೂಲಕ ಹಣ ಗಳಿಸುತ್ತೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ನ ಅನೇಕ ಸ್ಟಾರ್ ಕಿಡ್ಗಳ ಜೊತೆಗೂ ಒರಿ ಅವರಿಗೆ ಉತ್ತಮ ನಂಟು ಇರುವ ಕಾರಣ ಬಾಲಿವುಡ್‌ನ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಒರಿ ಕೂಡ ಕಾಣಿಸಿಕೊಳ್ಳುತ್ತಾರೆ.

Leave A Reply