Longest National Highway: ಕರ್ನಾಟಕದ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ನಿಮಗೆ ಗೊತ್ತಾ?
Longest National Highway: ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಲವಾರು ಇವೆ. ರಾಷ್ಟ್ರೀಯ ಹೆದ್ದಾರಿಗಳು ಸುಸಜ್ಜಿತವಾದ ಮಾರ್ಗವನ್ನು ಹೊಂದಿದ್ದು, ಪ್ರಯಾಣಿಕರಿಗೆ ತಡೆಯಿಲ್ಲದ ಪ್ರಯಾಣಕ್ಕೆ ಸಹಾಯ ಮಾಡಿಕೊಡುತ್ತದೆ. ಪ್ರತಿದಿನ ಕೋಟಿಗಟ್ಟಲೆ ಪ್ರಯಾಣಿಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ವಿವಿಧ ಸ್ಥಳಗಳನ್ನು ತಲುಪಲು ಹೆದ್ದಾರಿಯನ್ನು ಬಳಸುತ್ತಾರೆ. ಭಾರತದಲ್ಲಿ ಒಟ್ಟು 500 ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಿವೆ ಎಂದು ಅಂದಾಜಿಸಲಾಗಿದೆ. 2023 ರ ಪಟ್ಟಿಯ ಪ್ರಕಾರ, ಭಾರತವು ಒಟ್ಟು 599 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಅವುಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯವನ್ನು ಸಂಪರ್ಕಿಸುತ್ತಿವೆ. ಅವುಗಳಲ್ಲಿ ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿ ತಿಳಿಸಲಾಗಿದೆ. ಮುಖ್ಯವಾಗಿ ಕರ್ನಾಟಕ ರಾಜ್ಯವು ಒಟ್ಟು 14 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ. ಅವುಗಳ ಉದ್ದ ಸುಮಾರು 6572 ಕಿ.ಮೀ, ಹಾಗೆಯೇ 114 ರಾಜ್ಯ ಹೆದ್ದಾರಿಗಳನ್ನು ಹೊಂದಿದೆ.
ಇದನ್ನೂ ಓದಿ: Janhavi Kapoor: ಜಾನ್ವಿ ಕಪೂರ್ ಮದುವೆ ಬಗ್ಗೆ ಮತ್ತೊಮ್ಮೆ ವದಂತಿ : ಅಸಲಿಗೆ ಏನಾಯ್ತು ಗೊತ್ತಾ? : ಇಲ್ಲಿ ನೋಡಿ
ಈಗಾಗಲೇ ತಿಳಿಸಿದಂತೆ ಕರ್ನಾಟಕದಲ್ಲಿ 14 ರಾಷ್ಟ್ರೀಯ ಹೆದ್ದಾರಿಗಳಲ್ಲಿ NH13 ಕರ್ನಾಟಕ ರಾಜ್ಯದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ (Longest National Highway) ಇವೆ. ಇದರ ಉದ್ದ ಸುಮಾರು 719 ಕಿ.ಮೀ ಆಗಿದ್ದು, ಇದನ್ನು ಇಂಡಿಯನ್ ನ್ಯಾಷನಲ್ ಹೈವೇ ಅಥಾರಿಟಿ ನಿರ್ವಹಿಸುತ್ತದೆ.
ಕರ್ನಾಟಕದ ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದವು ಸುಮಾರು 4491 ಕಿ.ಮೀ ಆಗಿದ್ದು, ಚಿತ್ರದುರ್ಗ -ಚೆನ್ನಗಿರಿ-ಶಿವಮೊಗ್ಗ-ತೀರ್ಥಹಳ್ಳಿ-ಕೊಪ್ಪ-ಕರ್ಕಾಳವನ್ನು ಸಂಪರ್ಕಿಸುತ್ತದೆ.
ಕರ್ನಾಟಕದ ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಹೇಳುವುದಾದ್ರೆ, ಅದನ್ನು NH7 ಆಗಿದೆ. ಇದು ವಾರಣಾಸಿ – ನಾಗಪುರ – ಹೈದರಾಬಾದ್ – ಬೆಂಗಳೂರು – ಹೊಸೂರು – ಮಧುರೈ ಅನ್ನು ಸಂಪರ್ಕಿಸುತ್ತದೆ.
ಇನ್ನು ಭಾರತದ ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ NH548. ಇಡೀ ಭಾರತದಲ್ಲಿಯೇ ಇದು ಅತ್ಯಂತ ಚಿಕ್ಕದಾದ ಹೆದ್ದಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದು ಭಾರತದ ಅತ್ಯಂತ ಚಿಕ್ಕ ಹೆದ್ದಾರಿ ಎಂದು ಕರೆಸಿಕೊಳ್ಳುವುದಲ್ಲದೆ, ಕೇವಲ 5 ಕಿಮೀ ಉದ್ದವಿದೆ. ಮುಖ್ಯವಾಗಿ ಈ ಹೆದ್ದಾರಿ ಇರುವುದು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ. ಇದರ ಉತ್ತರದ ತುದಿಯು ಕಲಾಂಬೋಲಿ ಮತ್ತು ಸಾಕ್ಷಿನಿ ಅಂತ್ಯವು ನವಿ ಮುಂಬೈಗೆ ಸಂಪರ್ಕ ಹೊಂದಿದೆ.