JEE advanced 2024: ದಾಖಲೆಯ ನೋಂದಣಿ ಸಂಖ್ಯೆ, 1.91 ಲಕ್ಷಕ್ಕೂ ಹೆಚ್ಚು ಅರ್ಜಿ, ಎಂದೂ ಇಲ್ಲದ ಕಠಿಣ ಸ್ಪರ್ಧೆ !
JEE advanced 2024: ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದರಲ್ಲಿ ಭಾಗವಹಿಸಲು 1.91 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. 23 ಐಐಟಿಗಳು ನೀಡುವ ಸುಮಾರು 17,000 ಬಿಟೆಕ್ ಸೀಟುಗಳ ರೇಸ್ ಮೇ 26 ರಂದು ಪ್ರಾರಂಭವಾಗಲಿದೆ. ನೀಟ್ ಮುಗಿಸಿದ ನಂತರ ಮತ್ತೆ ಹುಡುಗ ಹುಡುಗಿಯರು ರಾತ್ರಿ ಹಗಲು ಏಕಮಾಡಿಕೊಂಡು ಕಬ್ಬಿಣದ ಕಡಲೆಯ ಥರದ ಮ್ಯಾತಮೆಟಿಕ್ಸ್ ಮತ್ತು ಫಿಸಿಕ್ಸ್ ಕೆಮಿಸ್ಟ್ರಿ ಪ್ರಶ್ನೆಗಳನ್ನು ಬಿಡಿಸುವುದರಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: Phone Virus: Xiaomi, Redmi, Poco ಫೋನ್‌ಗಳಲ್ಲಿ ಅಪಾಯಕಾರಿ ವೈರಸ್ ಪತ್ತೆ : ನಿಮ್ಮ ವೈಯಕ್ತಿಕ ಡೆಟಾ ಸುರಕ್ಷಿತವಲ್ಲ
JEE ಅಡ್ವಾನ್ಸ್ಡ್ 2024 ಕಳೆದ 11 ವರ್ಷಗಳಲ್ಲಿಯೇ ಅತಿ ಹೆಚ್ಚು ನೋಂದಣಿಗಳಿಗೆ ಸಾಕ್ಷಿಯಾಗಿದೆ. ಮೇ 7 ರ ಸಂಜೆಯ ವೇಳೆಗೆ 1.91 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಅತ್ಯಂತ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಾದ JEE ಅಡ್ವಾನ್ಸ್ಡ್‌ಗೆ ನೋಂದಣಿ ಪೂರ್ಣಗೊಳಿಸಿದ್ದಾರೆ. JEE ಅಡ್ವಾನ್ಸ್ಡ್ 2024 ಅರ್ಜಿ ಪ್ರಕ್ರಿಯೆಯು ಮೇ 7, 11:30 ರವರೆಗೆ ತೆರೆದಿತ್ತು. ಪ್ರವೇಶ ಕಾರ್ಡ್‌ಗಳನ್ನು ಮೇ 17, 2024 ರಂದು ವಿತರಿಸಲು ನಿರ್ಧರಿಸಲಾಗಿದೆ. ಪರೀಕ್ಷೆಯು ಮೇ 26 ರಂದು ನಡೆಯಲಿದ್ದು, ಎರಡು ಪಾಳಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ.
ಕಳೆದ ವರ್ಷ ಒಟ್ಟು 1.89 ಲಕ್ಷ ನೋಂದಣಿಯಾಗಿದ್ದು, ಈಗ ಆಯಾ ಸಂಖ್ಯೆ1.91 ಲಕ್ಷಕ್ಕೆ ಏರಿಕೆಯಾಗಿದೆ. ಇದು ಮತ್ತಷ್ಟು ಹೆಚ್ಚಳದ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಸಿಕ್ಕಿರುವ ಅಂಕಿ ಅಂಶವು ಕಳೆದ 11 ವರ್ಷಗಳ JEE ಅಡ್ವಾನ್ಸ್ಡ್ ದಾಖಲೆಗಳಲ್ಲಿಯೇ ಅತ್ಯಧಿಕವಾಗಿದೆ. 2013 ರಲ್ಲಿ 126,749 ನೋಂದಣಿಗಳು ಆಗಿದ್ದರೆ, 2014ರಲ್ಲಿ 126,995, 2015 ರಲ್ಲಿ 124,741 ಆಗಿತ್ತು.
ನಂತರ 2016ರಲ್ಲಿ 155,797; 2017ರಲ್ಲಿ 171,814, 2018ರಲ್ಲಿ 165,656 ಮತ್ತು 2019ರಲ್ಲಿ 174,432 ರ ದಾಖಲೆ ಆಗಿತ್ತು. ಜನಸಂಖ್ಯೆ ಏರುತ್ತಲೇ ಇದ್ದು ಅದಕ್ಕೆ ತಕ್ಕಂತೆ ಹೆಚ್ಹು ಹೆಚ್ಚು ನೋಂದಣಿ ಆಗುತ್ತಲೇ ಬಂತು. 2020ರಲ್ಲಿ 160,838, 2021ರಲ್ಲಿ 151,193, 2022ರಲ್ಲಿ 160,038 ಮತ್ತು 2023ರಲ್ಲಿ 189,744 ವರೆಗೆ ಏರಿತ್ತು. ಮಂಗಳವಾರ ಸಂಜೆಯವರೆಗೆ, ವರದಿಗಳ ಪ್ರಕಾರ, JEE ಅಡ್ವಾನ್ಸ್ಡ್ 2024 1.91 ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಹೊಂದಿ ಹೊಸ ದಾಖಲೆ ಬರೆದಿದೆ. ಈ ಸಲ ಕಾಂಪಿಟೇಶನ್ ಮತ್ತಶ್ಟು ಟಫ್ ಆಗಲಿದ್ದು ದೇಶದ ಅತ್ಯುನ್ನತ ಕಾಲೇಜುಗಳಲ್ಲಿ ಕಲಿಯಲು ವಿದ್ಯಾರ್ಥಿಗಳು ಇನ್ನಷ್ಟು ಕಷ್ಟ ಪಡಬೇಕಿದೆ.