Home Entertainment Jyothi Rai: ಕರಾವಳಿ ಮೂಲದ ಕನ್ನಡದ ಸ್ಟಾರ್ ನಟಿಯದ್ದು ಎನ್ನಲಾದ ಖಾಸಗಿ ವಿಡಿಯೊ ವೈರಲ್, ಸಾಮಾಜಿಕ...

Jyothi Rai: ಕರಾವಳಿ ಮೂಲದ ಕನ್ನಡದ ಸ್ಟಾರ್ ನಟಿಯದ್ದು ಎನ್ನಲಾದ ಖಾಸಗಿ ವಿಡಿಯೊ ವೈರಲ್, ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲೋಲ ಕಲ್ಲೋಲ !

Hindu neighbor gifts plot of land

Hindu neighbour gifts land to Muslim journalist

Jyothi Rai: ಸದಾ ಬೋಲ್ಡ್‌ ಫೋಟೋಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ನ್ಯೂಸ್ ಆಗುವ ಮತ್ತು ಮಾಡುವ ಕರಾವಳಿ ಮೂಲದ ಮೂಲದ ನಟಿ ಜ್ಯೋತಿ ರೈರದ್ದು ಎನ್ನಲಾದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ರಾಸಲೀಲೆ ಕೇಸಿನಲ್ಲಿ ಪ್ರಜ್ವಲ್‌ ರೇವಣ್ಣ ರಾಡಿ ಎಬ್ಬಿಸುತ್ತಿರುವಂತೆ ಈ ನಟಿಯ ವಿಚಾರ ಈಗ ಸಂಚಲನ ಮೂಡಿಸುತ್ತಿದೆ.

ಕರಾವಳಿ ಕನ್ನಡತಿಯಾಗಿರುವ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳು ಇದೀಗ ಹಲವು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ‘ನಮ್ಮ ಯುಟ್ಯೂಬ್‌ ಚಾನೆಲ್‌ಗೆ ಬೇಗ ಲೈಕ್ / ಸಬ್‌ಸ್ಕ್ರೈಬ್ ಮಾಡಿ, ನಾವು ಅಲ್ಲಿವಿಡಿಯೊ ಅಪ್‌ಲೋಡ್ ಮಾಡುತ್ತೇವೆ’ ಎಂದು ಕೆಲವರು ನಗ್ನ ವಿಡಿಯೋ ನೀಡುವುದಾಗಿ ಆಮಿಷ ಒಡ್ದುತ್ತಿದ್ದಾರೆ. ಹಾಗಂತ ತಮ್ಮ ತಮ್ಮ ಜಾಲತಾಣಗಳ ಖಾತೆಗಳಲ್ಲಿ ಬೇಕಾಬಿಟ್ಟಿ ಬರೆದುಕೊಂಡು ಹೆಚ್ಚಿನ ಸಬ್ಸ್ಕ್ರೈಬರ್ ಅಥವಾ ವಿವ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಇದೀಗ ಪ್ರಜ್ವಲ್ ರೇವಣ್ಣ ಮತ್ತು ಹೆಚ್ ಡಿ ರೇವಣ್ಣ ಪ್ರಕರಣಗಳದೇ ಸುದ್ದಿ. ಹಾಸನದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಸಾವಿರಾರು ವಿಡಿಯೊ ವೈರಲ್ ಆದ ನಂತರ ಇಡೀ ಕರ್ನಾಟಕ ರಾಜ್ಯ ತೀವ್ರ ಮುಜುಗರಕ್ಕೆ ಒಳಗಾಗಿದೆ. ಅದು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 2,900ಕ್ಕೂ ಹೆಚ್ಚು ವಿಡಿಯೋಗಳು ಇದೆ ಎನ್ನಲಾಗಿದ್ದು ಇಡೀ ದೇಶ ಮತ್ತು ಹೊರದೇಶಗಳು ಕೂಡ ಬೆಚ್ಚಿಬಿದ್ದಿವೆ. ಇದೀಗ ಕನ್ನಡತಿ, ಕನ್ನಡ ನಟಿ ಹಾಗೂ ಇದೀಗ ತಮಿಳುನಾಡಿನಲ್ಲಿ ಮದುವೆಯಾಗಿ ಸೆಟಲ್ ಆಗಿರುವ ಕರ್ನಾಟಕದಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೊಗಳು ಪ್ರಜ್ಞಾವಂತರ ಆತಂಕವನ್ನು ಹೆಚ್ಚಿಸಿವೆ.

twitter.com/EDIT_BY_ABHI ಎನ್ನುವ ಟ್ವಿಟರ್‌ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್ ಮಾಡಲಾಗಿದೆ. ಇದೇ ಟ್ವಿಟರ್ ಖಾತೆಯಲ್ಲಿಯೇ ಜ್ಯೋತಿ ಅವರು ಸೀರೆ ಉಟ್ಟುಕೊಂಡಿರುವ ಚಿತ್ರದ ಜೊತೆಗೆ ಅವರು ಆಕ್ಷೇಪಾರ್ಹ ಭಂಗಿಯಲ್ಲಿರುವ ಚಿತ್ರವನ್ನೂ ಹಂಚಿಕೊಂಡು ‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ವಾಟ್ಸಾಪ್‌ಗಳಲ್ಲಿಯೂ ಇಂಥದ್ದೇ ಸಂದೇಶಗಳು ಹರಿದಾಡುತ್ತಿವೆ. ಕೆಲವು ವೀಕ್ಷಕರಂತೂ ಈಥರ ವಿಡಿಯೋ ಹಾಕುತ್ತೇನೆ ಎಂದು ಕೇಳುತ್ತಿರುವ ಯೂಟ್ಯೂಬ್ ಗಳ ಮುಂದೆ ಜೊಲ್ಲು ಸುರಿಸಿಕೊಂಡು ನಮಗೆ ಆ ವಿಡಿಯೋ ದಯವಿಟ್ಟು ಶೇರ್ ಮಾಡಿ ಎಂದು ಅಂಗಲಾಚುತ್ತಿರುವುದು ಕಂಡುಬಂದಿದೆ.

ಈ ವಿಡಿಯೋದಲ್ಲಿ ಇರುವುದು ನಟಿ ಜ್ಯೋತಿರೈ ಅವರೇ ನಾ ಮತ್ತು ವಿಡಿಯೋದಲ್ಲಿ ಇರುವುದು ಅವರ ಗಂಡನ ಅಥವಾ ಬೇರೆಯವರ ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇಲ್ಲಿಯ ತನಕ ನಟಿ ಜ್ಯೋತಿರೈ ಯಾವುದೇ ಹೇಳಿಕೆ ನೀಡಿಲ್ಲ. ಮತ್ತಷ್ಟು ಈ ಸಂಬಂಧಿ ಮಾಹಿತಿಗಳನ್ನು ಶೀಘ್ರದಲ್ಲಿ ಅಪ್ಡೇಟ್ ಮಾಡಲಿದ್ದೇವೆ.