Kedarnath Temple: ಕೇದರನಾಥ್ ಯಾತ್ರಿಕರಿಗೆ ಶುಭ ಸುದ್ದಿ : ಕೇದಾರನಾಥ ಧಾಮ್ ಮೇ 10ರಿಂದ ಭಕ್ತರ ದರ್ಶನಕ್ಕೆ ಮುಕ್ತ
Kedarnath Temple: ಉತ್ತರಾಖಂಡದ ಕೇದಾರನಾಥ(Kedarnath Temple) ಧಾಮದಲ್ಲಿ ಭಾನುವಾರದಿಂದ ಕೇದಾರನಾಥದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ಈಗಾಗಲೇ ಮೇ 10ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಸಂಜೆ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಭೈರವನಾಥ ದೇವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರ ಉಖಿಮಠದ(ukki math) ಓಂಕಾರೇಶ್ವರ ದೇವಸ್ಥಾನದಿಂದ(omkareshvar Temple) ಪಂಚಮುಖಿ ಭೋಗಮೂರ್ತಿ ಪಲ್ಲಕಿ ಯಾತ್ರೆ ಆರಂಭವಾಯಿತು. ಇದೇ ತಿಂಗಳ 9ರಂದು ಕೇದಾರನಾಥ ಧಾಮ(Kedarnath Temple) ತಲುಪಲಿದೆ. ಈ ತಿಂಗಳ 10 ರಂದು ಬೆಳಿಗ್ಗೆ 7 ಗಂಟೆಗೆ ಕೇದಾರನಾಥ ಧಾಮದ ಬಾಗಿಲು ಭಕ್ತರಿಗೆ ಪೂಜೆಗಾಗಿ ತೆರೆಯಲಾಗುತ್ತದೆ.
ಇದನ್ನೂ ಓದಿ: NIMHANS Recruitment 2024: ಬೆಂಗಳೂರಿನಲ್ಲಿ ಕೆಲಸ ಹುಡುಕುತಿದ್ದೀರ? ತಿಂಗಳಿಗೆ 80,000 ಸಂಬಳ ಕೊಡುವ ಈ ಜಾಬ್ ಗೆ ಅಪ್ಲೈ ಮಾಡಿ
ರುದ್ರಪ್ರಯಾಗದಲ್ಲಿರುವ(Rudra Prayaga) ಕೇದಾರನಾಥ ಧಾಮದ ಬಾಗಿಲುಗಳನ್ನು ವರ್ಷದಲ್ಲಿ 6 ತಿಂಗಳು ಮುಚ್ಚಲಾಗುತ್ತದೆ. ಇನ್ನು 6 ತಿಂಗಳ ಕಾಲ ಉಖಿಮಠ, ಪ್ರತಿ ವರ್ಷ ಮಹಾಶಿವರಾತ್ರಿಯ (Mahashivratri )ದಿನದಂದು ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸುತ್ತದೆ