Parliment Election : ರಾಜ್ಯದಲ್ಲಿಂದು 2ನೇ ಹಂತದ ಮತದಾನ – ಇಲ್ಲಿದೆ 14 ಕ್ಷೇತ್ರಗಳ ಅಭ್ಯರ್ಥಿಗಳ ಡೀಟೇಲ್ಸ್ ?
Parliment Election: ರಾಜ್ಯದ 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ಏಪ್ರಿಲ್ 26ರಂದು 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಎರಡನೇ ಹಂತದ ಮತದಾನ (ಮೇ 7) ನಡೆಯಲಿದೆ. ಉಳಿದ 14 ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಿದ್ರೆ ಕಣದಲ್ಲಿ ಇರೋರು ಯಾರು? ಯಾವೆಲ್ಲಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ?
ಇದನ್ನೂ ಓದಿ: Karnataka Weather: ಕರಾವಳಿಯಲ್ಲಿ ಗುಡುಗು ಸಹಿತ ಮಳೆಯ ಸಂಭವ
ಹೌದು, ಅಂತಿಮ ಹಂತದ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕ ಸಜ್ಜಾಗಿದ್ದು, ಇಂದು ಉತ್ತರ ಕರ್ನಾಟಕದ (UttarKarnataka) 14 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರವಾಗಿ ಹಲವು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಹಾಗಿದ್ರೆ ಪ್ರಮುಖ ಅಭ್ಯರ್ಥಿಗಳ ಮಾಹಿತಿ ತಿಳಿಯೋಣ ಬನ್ನಿ.
ಇದನ್ನೂ ಓದಿ: HD Revanna: ಲೈಂಗಿಕ ದೌರ್ಜನ್ಯ ಪ್ರಕರಣ; ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ
ಎಲ್ಲೆಲ್ಲಿ ಮತದಾನ?:
ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ
*ಕಲಬುರಗಿ: ರಾಧಾಕೃಷ್ಣ (ಕಾಂಗ್ರೆಸ್) V/s ಉಮೇಶ್ ಜಾಧವ್ (ಬಿಜೆಪಿ)
* ಶಿವಮೊಗ್ಗ: ರಾಘವೇಂದ್ರ(ಬಿಜೆಪಿ) V/s ಗೀತಾ ಶಿವರಾಜ್‍ಕುಮಾರ್(ಕಾಂಗ್ರೆಸ್) V/s ಈಶ್ವರಪ್ಪ (ಬಿಜೆಪಿ ಬಂಡಾಯ)
* ಬೆಳಗಾವಿ: ಜಗದೀಶ್ ಶೆಟ್ಟರ್(ಬಿಜೆಪಿ) V/s ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)
* ಹಾವೇರಿ: ಬಸವರಾಜ ಬೊಮ್ಮಾಯಿ (ಬಿಜೆಪಿ) V/s ಆನಂದ್ ಗಡ್ಡದೇವರಮಠ (ಕಾಂಗ್ರೆಸ್)
* ಧಾರವಾಡ: ಪ್ರಲ್ಹಾದ್ ಜೋಶಿ (ಬಿಜೆಪಿ) V/s ವಿನೋದ್ ಅಸೂಟಿ (ಕಾಂಗ್ರೆಸ್)
* ಬೀದರ್: ಭಗವಂತ್ ಖೂಬಾ(ಬಿಜೆಪಿ) V/sಸಾಗರ್ ಖಂಡ್ರೆ (ಕಾಂಗ್ರೆಸ್)
* ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್(ಬಿಜೆಪಿ) V/s ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್) V/s ವಿನಯ್(ಕಾಂಗ್ರೆಸ್ ಬಂಡಾಯ)
* ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)
* ಬಾಗಲಕೋಟೆ: ಪಿಸಿ ಗದ್ದೀಗೌಡರ್(ಬಿಜೆಪಿ) V/s ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)
* ಬಳ್ಳಾರಿ: ಶ್ರೀರಾಮುಲು (ಕಾಂಗ್ರೆಸ್) V/s ಇ.ತುಕಾರಾಂ (ಕಾಂಗ್ರೆಸ್)
* ಕೊಪ್ಪಳ: ಬಸವರಾಜ್ ಕ್ಯಾವಟೋರ್ (ಬಿಜೆಪಿ) V/s ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್)
* ವಿಜಯಪುರ: ರಮೇಶ್ ಜಿಗಜಿಣಗಿ(ಬಿಜೆಪಿ) V/s ರಾಜು ಆಲಗೂರ (ಕಾಂಗ್ರೆಸ್)
* ರಾಯಚೂರು: ರಾಜಾ ಅಮರೇಶ್ವರ ನಾಯಕ್ (ಬಿಜೆಪಿ) V/s ಕುಮಾರನಾಯಕ್ (ಕಾಂಗ್ರೆಸ್)
* ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) V/s ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್)
ಪ್ರಮುಖ ಅಭ್ಯರ್ಥಿಗಳು:
14 ಕ್ಷೇತ್ರಗಳ ಪೈಕಿ ಹಾಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ್ ಖೂಬಾ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅಖಾಡದಲ್ಲಿದ್ದಾರೆ. ಮಾಜಿ ಸಚಿವರಾದ ಶ್ರೀ ರಾಮುಲು, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂಗಳಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸ್ಪರ್ಧೆಯಲ್ಲಿದ್ದಾರೆ.
ಇಂದಿನ ಚುನಾವಣೆ ವಿಶೇಷತೆಗಳು :
• ಬಿಜೆಪಿಯಲ್ಲಿ ಬಂಡೆದ್ದು, ಪಕ್ಷೇತರ ಅಭ್ಯರ್ಥಿಯಾಗಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (77) ಅತಿ ಹಿರಿಯರಾಗಿದ್ದರೆ.
• ಕಾಂಗ್ರೆಸ್ನ ಸಾಗರ್ ಖಂಡ್ರೆ (26) ಅತಿ ಕಿರಿಯ ಅಭ್ಯರ್ಥಿಯಾಗಿದ್ದಾರೆ.
• ದಾವಣಗೆರೆಯಲ್ಲಿ ಅತಿ ಹೆಚ್ಚು ಅಂದರೆ 30 ಜನರು ಕಣದಲ್ಲಿದ್ದಾರೆ.
• ರಾಯಚೂರು, ವಿಜಯಪುರದಲ್ಲಿ 8 ಮಂದಿ ಮಾತ್ರ ಸ್ಪರ್ಧೆಯಲ್ಲಿದ್ದಾರೆ.
ಮತದಾನದ ವಿವರ :
ರಾಜ್ಯದ 14 ಕ್ಷೇತ್ರಗಳಲ್ಲಿ ಸುಗಮ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ನಡೆದಿದೆ. ಇಲ್ಲಿ 2.69 ಕೋಟಿ ಮತದಾರರಿಗಾಗಿ 28,269 ಮತಗಟ್ಟೆಗಳನ್ನು ತೆರೆದಿದೆ. 1.45 ಲಕ್ಷ ಮತಗಟ್ಟೆ ಅಧಿಕಾರಿಗಳು, 35ಸಾವಿರ ಪೊಲೀಸರು, ಅರೆಸೇನಾಪಡೆಯ 65 ತುಕಡಿಗಳನ್ನು ನಿಯೋಜಿಸಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಲಿದ್ದು, ಸಂಜೆ ಆರಕ್ಕೆ ಅಂತ್ಯವಾಗಲಿದೆ.
14 ಕ್ಷೇತ್ರಗಳಲ್ಲಿ 2,59,52,958 ಅರ್ಹ ಮತದಾರರು ಇದ್ದಾರೆ. ಇದರಲ್ಲಿ 1,29,83,406 ಪುರುಷರು, 1,29,67,607 ಮಹಿಳೆಯರು, 1,945 ಇತರೆ ಮತದಾರರು ಇದ್ದಾರೆ. 85 ವರ್ಷ ಮೇಲ್ಪಟ್ಟವರು 2,29,263, ಯುವ ಮತದಾರರು 6,90,929, ಸೇವಾ ಮತದಾರರು 35,465 ರಷ್ಟಿದ್ದಾರೆ.