7th Pay Commission: ಕೇಂದ್ರ ನೌಕರರಿಗೆ ಭತ್ಯೆಗಳ ಏರಿಕೆ
7th Pay Commission: ಕೇಂದ್ರ ಸರಕಾರಿ ನೌಕರರಿಗೆ ಇನ್ನಷ್ಟು ಶುಭಸುದ್ದಿಗಳು ಇಲ್ಲಿದೆ. ಕಳೆದ ಮಾರ್ಚ್ ನಲ್ಲಿ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳದ ಬೆನ್ನಲ್ಲೇ ನೌಕರರ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ನಿವೃತ್ತಿ ಗ್ರಾಚ್ಯುಟಿ ಸಹ ಶೇ.25ರಷ್ಟು ಏರಿಕೆಯಾಗಿದೆ. ನಿವೃತ್ತಿ ಗ್ರಾಚ್ಯುಟಿ ಮೊತ್ತವು 20 ಲಕ್ಷ ರೂ.ನಿಂದ 25 ಲಕ್ಷ ರೂ. ಗೆ ಏರಿಕೆಯಾಗಲಿದೆ.
ಇದನ್ನೂ ಓದಿ: T20 World Cup: ಟಿ 20 ವಿಶ್ವಕಪ್: ಅಂಪೈರ್ ಗಳ ಪಟ್ಟಿ ಪ್ರಕಟ
ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಿದ್ದರಿಂದ ನೌಕರರು ಪಡೆಯುತ್ತಿರುವ ಒಟ್ಟು ತುಟ್ಟಿಭತ್ಯೆ ಪ್ರಮಾಣವು ಶೇ. 50 ದಾಟಿದೆ. ಈ ಹಿನ್ನೆಲೆಯಲ್ಲಿ ಇತರೆ ಭತ್ಯೆಗಳೂ ತಾವಾಗಿಯೇ ಏರಿಕೆಯಾಗಿದ್ದು, ಬೆಲೆ ಏರಿಕೆಯ ಬಿಸಿ ಕೊಂಚ ಮಟ್ಟಿಗೆ ತಗ್ಗಲಿದೆ. ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯವು ಕಳೆದ ಏಪ್ರಿಲ್ 24ರಂದು ಹೊರಡಿಸಿರುವ ಜ್ಞಾಪನದಲ್ಲಿ ಇತರೆ ಭತ್ಯೆಗಳ ಏರಿಕೆ ವಿಚಾರವನ್ನು ದೃಢಪಡಿಸಿದೆ.
ಇದನ್ನೂ ಓದಿ: APL Card: ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ; ಜೂನ್ ನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ
ಕೇಂದ್ರದ ನೌಕರರು ಮಕ್ಕಳ ಶಿಕ್ಷಣ ಭತ್ಯೆಯ ರೂಪದಲ್ಲಿ ಮಾಸಿಕ 2,812 ರೂ. ಮತ್ತು ಹಾಸ್ಟೆಲ್ ಖರ್ಚುಗಳಿಗಾಗಿ ತಿಂಗಳಿಗೆ 8,437 ರೂ. ಸಬ್ಸಿಡಿಯನ್ನು ಪಡೆಯಬಹುದಾಗಿದೆ.