Belagavi: ನೇಹಾ ಹಿರೇಮಠ್ ಅಪ್ಪ-ಅಮ್ಮನಿಂದ ಕಾಂಗ್ರೆಸ್ ಪರ ಮತಯಾಚನೆ !!
Belagavi: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ(Neha Hiremat Murder Case) ಪ್ರಕರಣ ಸದ್ಯ CID ತನಿಖೆಯ ಹಾದಿಯಲ್ಲಿದೆ. ಈ ನಡುವೆ ಎಲ್ಲಾ ಪಕ್ಷಗಳ ರಾಜ್ಯ ಹಾಗೂರಾಷ್ಟ್ರೀಯ ನಾಯಕರು ನೇಹಾ ಮನೆಗೆ ಭೇಟಿ ನೀಡಿ ತಂದೆ-ತಾಯಿಗೆ ಸಾಂತ್ವನ ಹೇಳಿದ್ದಾರೆ. ಆದರೀಗ ಅಚ್ಚರಿ ಎಂಬಂತೆ ನೇಹಾ ಅಪ್ಪ-ಅಮ್ಮ ಕಾಂಗ್ರೆಸ್(Congress) ಪರ ಮತಯಾಚನೆಗೆ ಇಳಿದಿದ್ದಾರೆ.
ಇದನ್ನೂ ಓದಿ: Prajwal Revanna: ಗನ್ ತೋರಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮೇಲೆ 3 ವರ್ಷ ಪ್ರಜ್ವಲ್ ನಿಂದ ಅತ್ಯಾಚಾರ – ದೂರು ದಾಖಲು !!
ಹೌದು, ಹುಬ್ಬಳ್ಳಿಯ ಕಾಲೇಜು(Hubballi Collage) ಕ್ಯಾಂಪಸ್ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಪೋಷಕರು ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಭೇಟಿ ನೀಡಿ ಹೆಬ್ಬಾಳ್ಕರ್ ನಮಗೆ ನೈತಿಕ ಬೆಂಬಲ ಸೂಚಿಸಿದ್ದವರು. ಹೀಗಾಗಿ ಕಣದಲ್ಲಿರುವ ಮೃಣಾಲ್ ಹೆಬ್ಬಾಳ್ಕರ್ಗೆ ಈ ಕ್ಷೇತ್ರದ ಜನರು ಬೆಂಬಲಿಸಬೇಕು ಎಂದು ಮತಯಾಚನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೇಹಾ ಅವರ ತಂದೆ ನಿರಂಜನ್(Niranjan) ಹಿರೇಮಠ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಗಳು ಹತ್ಯೆಯಾದ ನಂತರ ಬೆಂಬಲ ಸೂಚಿಸಲು ಮನೆಗೆ ಬಂದಿದ್ದು, ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಸಭೆಯಲ್ಲಿ ಮಗಳ ಹತ್ಯೆ ಬಗ್ಗೆ ಮಾತನಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ನೇಹಾ ಹತ್ಯೆಯ ವಿಷಯವನ್ನು ಪ್ರಸ್ತಾಪಿಸಲು ಮೃಣಾಲ್ ಅವರನ್ನು ಜನರು ಬೆಂಬಲಿಸಬೇಕೆಂದು ನಾನು ಬಯಸುತ್ತೇನೆ ಎಂದು ನಿರಂಜನ್ ಹೇಳಿದರು.
ಅಲ್ಲದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘಟನೆ ಬಳಿಕ ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿದರು. ಘಟನೆ ಬಗ್ಗೆ ಪಕ್ಷಾತೀತ, ಧರ್ಮಾತೀತವಾಗಿ ಖಂಡನೆ ವ್ಯಕ್ತಪಡಿಸಿದವು. ನಮಗೆ ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ಕುಟುಂಬಕ್ಕೆ ಬೆಂಬಲ ನೀಡಿದ ಎಬಿವಿಪಿ ಸೇರಿದಂತೆ ವಿದ್ಯಾರ್ಥಿ ಸಂಘಗಳು ಹಾಗೂ ರಾಜಕೀಯ ಪಕ್ಷಗಳ ಬೇಧವಿಲ್ಲದೆ ಎಲ್ಲ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.