Bangalore rain: ಬೆಂಗಳೂರಿನಲ್ಲಿ ಸಿಡಿಲಿನ ಆರ್ಭಟಕ್ಕೆ ಮಹಿಳೆ ಬಲಿ, ಮರದ ಅಡಿ ನಿಂತಿದ್ದ 20 ಕ್ಕೂ ಹೆಚ್ಚು ಮೇಕೆಗಳ ಸಾವು

Share the Article

Bangalore rain: ಬೆಂಗಳೂರಿನಲ್ಲಿ ಇಂದು ಸಿಡಿಲು ಸಮೇತ ದೊಡ್ಡ ಮಳೆ ಬಿದ್ದಿದೆ. ಈ ಸಂದರ್ಭ ಸಿಡಿಲು (Lightning) ಬಡಿದು ಮಹಿಳೆ ಹಾಗೂ 20 ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸಕೋಟೆ (Hosakote) ತಾಲೂಕಿನ ಗಣಗಲು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆ ಗ್ರಾಮದ ರತ್ಮಮ್ಮ ಸಿಡಿಲಿಗೆ ಬಲಿಯಾದ ಮಹಿಳೆ.

CBSE Result 2024: ಸಿಬಿಎಸ್ಸಿ 10ನೇ ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಸಂಭಾವ್ಯ ದಿನಾಂಕ ಪ್ರಕಟ !

ಬೆಂಗಳೂರು ಮತ್ತು ಸುತ್ತಮುತ್ತ ಇಂದು ದಿಢೀರ್ ಮಳೆ ಶುರುವಾಗಿದ್ದು, ಹೊಸಕೋಟೆ (Hosakote) ತಾಲೂಕಿನ ಗಣಗಲು ಗ್ರಾಮದಲ್ಲಿ ಬೇವಿನ ಮರದಡಿ ಮೇಕೆಗಳ ಜೊತೆ ನಿಂತಿದ್ದಾಗ ಜೋರಾಗಿ ಸಿಡಿಲು ಬಡಿದಿದೆ. ಆಗ ರತ್ನಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಅಲ್ಲಿದ್ದ ಮೇಕೆಗಳು ಕೂಡ ಸಿಡಿಲಿಗೆ ಬಲಿಯಾಗಿವೆ. ಗ್ರಾಮದಲ್ಲಿ ಗಾಳಿ ಮಳೆಯ ಆರ್ಭಟ ಜೋರಾಗಿದ್ದು ಮಳೆ ಅಲ್ಲಲ್ಲಿ ಮುಂದುವರೆದಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಪ್ಪಾ.. ಕಿಮ್ ಜಾಂಗ್ ಉನ್ ‘ಸುಖ’ಕ್ಕಾಗಿ ಪ್ರತೀ ವರ್ಷ ಬೇಕು 25 ವರ್ಜಿನ್ ಹುಡುಗಿಯರು !!

Leave A Reply