Education Board : ನೋಟ್ ಬುಕ್, ಸಮವಸ್ತ್ರ ಖರೀದಿಸಲು ಒತ್ತಾಯಿಸುವಂತಿಲ್ಲ – ಶಾಲೆಗಳಿಗೆ ಸರ್ಕಾರದ ಸೂಚನೆ !!
Education Board : ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ(Education Board ) ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಸಮವಸ್ತ್ರ, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ಖರೀದಿಸುವಂತೆ ಪೋಷಕರ ಮೇಲೆ ಯಾವುದೇ ರೀತಿ ಒತ್ತಡ ಹೇರದಂತೆ ಕಟ್ಟಪ್ಪಣೆ ನೀಡಿದ್ದಾರೆ.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು(Private Education Institution) ಪೋಷಕರಿಗೆ ಇಂತಹುದೇ ಮಾರಾಟಗಾರರಿಂದ ಸಮವಸ್ತ್ರ, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಖರೀದಿಸುವಂತೆ ಒತ್ತಾಯಿಸುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ ನಿಯಮ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಸಿಬಿಎಸ್ಇ ಮಾನ್ಯತಾ ಬೈಲಾ, ಹೈಕೋರ್ಟ್ ತೀರ್ಪು ಅನ್ವಯ ಶಾಲೆಗಳಲ್ಲಿ ಸಮವಸ್ತ್ರ ಮಾರಾಟ ಅಥವಾ ಇಂತಹುದೇ ಮಾರಾಟಗಾರರಿಂದ ಖರೀದಿಸುವಂತೆ ಒತ್ತಡ ಹೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ: Udupi: ಸೆಕೆಯ ಕಾರಣ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವು
2019ರಲ್ಲಿಯೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಮತ್ತೆ ಪರಿಷ್ಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ(BEO) ಮೂಲಕ ಶಾಲೆಗಳಿಗೆ ರವಾನಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ಒಂದು ವೇಳೆ ಅಂತಹ ಪ್ರಕರಣ ನಡೆದಲ್ಲಿ ತಪ್ಪಿತಸ್ಥ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.