CAA: ಮೇ ತಿಂಗಳಿನಿಂದ ಸಿಎಎ ಪೌರತ್ವ ಗ್ಯಾರಂಟಿ
CAA: ”ಪೌರತ್ವ ತಿದ್ದುಪಡಿ ಕಾಯಿದೆಯಡಿ ನೆರೆಯ ರಾಷ್ಟ್ರಗಳಲ್ಲಿ ಶೋಷಣೆಗೆ ಒಳಗಾದ ನಿರಾಶ್ರಿತ ಮುಸ್ಲಿಮೇತರ ಸಂಖ್ಯಾತರಿಗೆ ಮೇ ತಿಂಗಳಿನಿಂದಲೇ ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: Health Tips: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ? : ಹಾಗಾದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ
”ಪೌರತ್ವ ಬಯಸಿ ಸಿಎಎ ನಿಯಮಗಳ ಅಡಿ ಅನೇಕ ನಿರಾಶ್ರಿತ ಜನ ಅರ್ಜಿ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೂ ಮೊದಲು ಭಾರತಕ್ಕೆ ಆಗಮಿಸಿರುವ ಶೋಷಿತ ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು,” ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: Digital House Arrest: ಡಿಜಿಟಲ್ ಹೌಸ್ ಅರೆಸ್ಟ್ ಎಂದರೇನು? : ಇದನ್ನು ನಿಭಾಯಿಸುವುದು ಹೇಗೆ? : ಇಲ್ಲಿದೆ ಉತ್ತರ
2019ರಲ್ಲಿ ಸಂಸತ್ ಅಂಗೀಕರಿಸಿದ್ದ ಸಿಎಎ ಕಾಯಿದೆಯಡಿ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ಶೋಷಣೆಗೆ ಒಳಗಾಗಿರುವ ಭಾರತಕ್ಕೆ ಬಂದಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಧರ್ಮದ ನಿರಾಶ್ರಿತರಿಗೆ ದೇಶದ ಪೌರತ್ವ ಕೊಡಲು ನಿರ್ಧರಿಸಲಾಗಿದೆ. 2014ರ ಡಿ.31ಕ್ಕೂ ಮೊದಲು ಭಾರತಕ್ಕೆ ಆಗಮಿಸಿರುವ ಮಂದಿಗೆ ಮಾತ್ರ ಪೌರತ್ವ ಸಿಗಲಿದೆ.