SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ದಿನಾಂಕ ಫಿಕ್ಸ್‌

SSLC Result: ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ರಿಸಲ್ಟ್‌ ದಿನಾಂಕ ಯಾವಾಗ ಎಂಬ ಕುತೂಹಲದಿಂದ ಇದ್ದಾರೆ. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿಯೊಂದು ಇಲ್ಲಿದ್ದು, ಫಲಿತಾಂಶ ಬಿಡುಗಡೆ ಆಗಲು ದಿನಗಣನೆ ಆರಂಭವಾಗಿದೆ. ಮೇ.10 ರಂದು ಫಲಿತಾಂಶ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ:  Pregnancy Tips: ಉರಿ ಬಿಸಿಲಿಗೆ ಗರ್ಭಿಣಿಯರು ಈ ಲೈಫ್ ಸ್ಟೈಲ್ ನ್ನು ಫಾಲೋ ಮಾಡಲೇಬೇಕು, ಇಲ್ಲಿದೆ ನೋಡಿ ವೈದ್ಯರ ಸಲಹೆ

2023 & 2024ನೇ ಸಾಲಿನ SSLC ಪರೀಕ್ಷೆಯಲ್ಲಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. 2750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದಾರೆ. ಇದೀಗ, ಇವರೆಲ್ಲರ ಭವಿಷ್ಯ ನಿರ್ಧಾರವಾಗುವ ಫಲಿತಾಂಶ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಈಗ ಫಲಿತಾಂಶ ಬಿಡುಗಡೆ ಆಗುವ ಎಲ್ಲಾ ನಿರೀಕ್ಷೆಯಿದೆ. ಇನ್ನು ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಹೀಗಾಗಿ ಇವರೆಲ್ಲರ ಭವಿಷ್ಯ ಮೇ 10 ರಂದು ನಿರ್ಧಾರವಾಗಲಿದೆ. SSLC ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದು. kseab.karnataka.gov.in ಗೆ ಭೇಟಿ ನೀಡಿ ಅಲ್ಲಿ ಕೇಳಲಾದ ರಿಜಿಸ್ಟರ್‌ ನಂಬರ್/ರೋಲ್‌ ನಂಬರ್‌ ಹಾಕಿ ಫಲಿತಾಂಶ ವೀಕ್ಷಿಸಬಹುದು.

ಇದನ್ನೂ ಓದಿ:  English Learning: ಇಂಗ್ಲಿಷ್ ಆದಷ್ಟು ಬೇಗ ಕಲಿಯಬೇಕ? ಹಾಗಾದ್ರೆ ಗೂಗಲ್ ನಿಮಗೆ ಹೆಲ್ಪ್ ಮಾಡುತ್ತೆ!

Leave A Reply

Your email address will not be published.