PM Modi: ಪ್ರಧಾನಿ ಮೋದಿ ಕನ್ನಡಿಗರನ್ನು ‘ಪಾಪಿ’ಗಳು ಎಂದರೇ? ವೈರಲ್ ವಿಡಿಯೋದಲ್ಲಿ ಇರೋದೇನು?

PM Modi: ಲೋಕಸಭಾ ಚುನಾವಣೆಯ(Parliament Election) ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ರ್ನಾಟಕದ ಜನರನ್ನು ‘ಪಾಪಿಗಳು’ ಎಂದು ಕರೆದಿದ್ದಾರೆ ಎನ್ನುವ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಕುರಿತು ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ಹಾಗಾದರೆ ಮೋದಿಯವರು ಕನ್ನಡಿಗರನ್ನು, ಕರ್ನಾಟಕ(Karnataka)ದವರನ್ನು ಪಾಪಿಗಳು ಎಂದು ಕರೆದರೇ? ವೈರಲ್ ವಿಡಿಯೋ ಅಸಲಿಯತ್ತೇನು?

https://youtu.be/HNI6cX4hpbE?si=Qfa9VcR8TtCc5Xp9

ಹೌದು, ಅನೇಕರು ಪ್ರಧಾನಿ ಮೋದಿಯವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಲವೆಡೆ ಭಾರೀ ವೈರಲ್ ಕೂಡ ಆಗಿದೆ. ಈ ವಿಡಿಯೋದಲ್ಲಿ ಮೋದಿಯವರು ‘ಅವರು ಮಾಡಿರುವ ಪಾಪಗಳಿಗೆ ಶಿಕ್ಷಿಸುವಂತೆ ಜನರನ್ನು ಕೇಳುವುದನ್ನು ಕೇಳಬಹುದು’ ಎಂದು ಹೇಳಿದ್ದಾರೆ. ಇದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡ ವ್ಯಕ್ತಿಯೊಬ್ಬರು, “ನಿರೀಕ್ಷೆಯಂತೆ, ಅವರು ಈಗ ಇಡೀ ರಾಜ್ಯದ ಮೇಲೆ ದಾಳಿ ಮಾಡುತ್ತಿದ್ದಾರೆ, ಬಿಜೆಪಿಯನ್ನು ಬೆಂಬಲಿಸಿದ ಜನರನ್ನು ಸಹ ಬಿಡುತ್ತಿಲ್ಲ” ಎಂದು ಬರೆದಿದ್ದಾರೆ.

ನಿಜಾಂಶ ಏನು?

ಈ ಮಾತು ಈ ಕೆಳಕಂಡ ವಿಡಿಯೋದಲ್ಲಿರುವ 31:04 ನಿಮಿಷದಿಂದ ಆರಂಭ ಆಗುತ್ತದೆ. ಈ ವೇಳೆ ಪ್ರಧಾನಿ ಮೋದಿ ಅವರು ‘ಕಾಂಗ್ರೆಸ್ ಪಕ್ಷವು ಇಲ್ಲಿ ಕಾರ್ಮಿಕರಿಗೆ ಮಾಡಿರುವ ದ್ರೋಹ ಅತಿ ದೊಡ್ಡ ಪಾಪ’ ಎನ್ನುತ್ತಾರೆ. ‘ಇಲ್ಲಿ’ ಎಂಬ ಪದದ ಅರ್ಥ ಕರ್ನಾಟಕ. ಅಂದರೆ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದನ್ನು ಕಾಣಬಹುದು, ಕರ್ನಾಟಕದ ಜನರನ್ನು ಅಲ್ಲ ಎನ್ನುವವುದನ್ನು ಕಾಣಬಹುದಾಗಿದೆ.

Leave A Reply

Your email address will not be published.