Amith Shah: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಕೇಂದ್ರ ಸಚಿವ ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

Amith Shah: ಸಂಸದ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದೆಂದು ಹೇಳಲಾಗಿರುವ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಕುರಿತಂತೆ ಕೇಂದ್ರ ಸಚಿವ ಅಮಿತ್‌ ಶಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ವಿರುದ್ಧದ ಆರೋಪ ಆಧಾರರಹಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Parliment Election : ಬಿಜೆಪಿ ಸೇರಿದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ !!

ನಾವು ದೇಶದ ಮಾತೃಶಕ್ತಿ, ನಾರಿ ಶಕ್ತಿ ಜೊತೆ ನಿಂತಿದ್ದೇವೆ. ಭಾರತೀಯ ಜನತಾ ಪಾರ್ಟಿಯ ನಿಲುವು ಸ್ಪಷ್ಟವಾಗಿದೆ. ಪ್ರಧಾನಿ ಮೋದಿಗೆ ದೇಶದ ಜನರ ಮೇಲೆ ಬದ್ಧತೆ ಇದೆ. ಮಹಿಳೆಯರಿಗೆ ಆಗುವ ಅಪಮಾನವನ್ನು ನಮ್ಮ ಸರಕಾರ ಎಂದೂ ಸಹಿಸಲ್ಲ ಎಂದು ಗುವಾಹಟಿಯಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಇದನ್ನೂ ಓದಿ:  Bank Rules: ಗ್ರಾಹಕರೆ ಗಮನಿಸಿ – ಮೇ ತಿಂಗಳಲ್ಲಿ ಬದಲಾಗಲಿವೆ ಬ್ಯಾಂಕಿನ ಈ ನಿಯಮಗಳು !!

ನಾರಿಶಕ್ತಿ ಜೊತೆ ನಾವಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅನಗತ್ಯವಾಗಿ ಆರೋಪ ಮಾಡುತ್ತಿದೆ, ಈ ಮೂಲಕ ಪ್ರಜ್ವಲ್‌ ರೇವಣ್ಣ ವಿರುದ್ಧದ ಆರೋಪ ಆಧಾರರಹಿತವಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Leave A Reply

Your email address will not be published.