Bengaluru: ಗ್ರಾಹಕನ ಗುಪ್ತಾಂಗ ಟಚ್‌ ಮಾಡಿದ ಡೆಲಿವರ್‌ ಬಾಯ್‌

Share the Article

Bengaluru: ಫುಡ್‌ಡೆಲಿವರಿ ಬಾಯ್‌ ಓರ್ವ ಗ್ರಾಹಕರ ಜೊತೆ ಅಸಹ್ಯವಾಗಿ ನಡೆದುಕೊಂಡ ರೀತಿಯೊಂದು ವರದಿಯಾಗಿದೆ. ಇಶಾನ್‌ ಶರ್ಮಾ ಎಂಬುವವರು ತಮಗಾದ ಕಹಿ ಅನುಭವವನ್ನು ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Prajwal Revanna: 16 ರಿಂದ 50 ವರ್ಷದ ಸುಮಾರು 300 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ !! ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ಜೆಪ್ಟೋದಲ್ಲಿ ಇಶಾನ್‌ ಶರ್ಮಾ ಸುಮಾರು ವಸ್ತುಗಳನ್ನು ಆರ್ಡರ್‌ ಮಾಡಿದ್ದಾನೆ. ಸಾಹನ್‌ ಅಹ್ಮದ್‌ ಲಷ್ಕರ್‌ ಎಂಬ ಡೆಲಿವರಿ ಬಾಯ್‌ ಎ.26 ರಂದು ಇಶಾನ್‌ ಮನೆಗೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ವಸ್ತುಗಳ ಡೆಲಿವರಿ ನೀಡಿದ ಬಳಿಕ, ಅಹ್ಮದ್‌, ಇಶಾನ್‌ ಶರ್ಮಾರ ಮರ್ಮಾಂಗ ಸ್ಪರ್ಶ ಮಾಡಿದ್ದಾನೆ. ಇದೊಂದು ಆಕಸ್ಮಿಕ ಎಂದು ಇಶಾನ್‌ ಸುಮ್ಮನಾಗಿದ್ದಾನೆ. ಆದರೆ ಎರಡನೇ ಬಾರಿ ಕೂಡಾ ಮುಟ್ಟಿದಾಗ ಇದು ಉದ್ದೇಶಪೂರ್ವಕ ಎಂದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಯುವಕ ಕೂಗಾಡಿದಾಗ ಆರೋಪಿ ಪರಾರಿಯಾಗಿದ್ದಾನೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  Onion Fever: ಈರುಳ್ಳಿಯನ್ನು ಕಂಕುಳಲ್ಲಿಟ್ಟರೆ ಜ್ವರ ಬರುತ್ತಾ? : ಇದು ಎಷ್ಟರ ಮಟ್ಟಿಗೆ ಸತ್ಯ? : ಇದನ್ನು ನೀವು ತಿಳಿಯಲೇ ಬೇಕು

ಈ ಪೋಸ್ಟನ್ನು ಶರ್ಮಾ ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಸ್ಥಳೀಯ ಠಾಣೆಗೆ ದೂರು ನೀಡುವಂತೆ ಸೂಚನೆ ನೀಡಿದ್ದಾರೆ.

Leave A Reply