Surrogate Wife: ಭಾರತದ ಈ ಊರಲ್ಲಿ ಬಾಡಿಗೆಗೆ ಸಿಗುತ್ತಾರೆ ಹೆಂಡತಿಯರು – ಹಣ ಕೊಟ್ಟು ಎಲ್ಲಿಗಾದ್ರೂ ಕರ್ಕೊಂಡ್ ಹೋಗ್ಬೋದು !!
Surrogate Wife: ನೀವು ಪ್ರಿಯತಮ-ಪ್ರಿಯತಮೆಯರು ಬಾಡಿಗೆಗೆ ಸಿಗುತ್ತಾರೆ ಎಂಬ ಸುದ್ದಿಯನ್ನು ಕೇಳಿದ್ದೀರಿ. ಇದು ಇಂದು ಸಾಮಾನ್ಯ. ಆದರೆ ಮದುವೆಯಾದ (wife) ಅಥವಾ ಹೆಂಡತಿಯನ್ನು ಬಾಡಿಗೆಗೆ (Surrogate Wife) ಕೊಡುವ ಬಗ್ಗೆ ಕೇಳಿದ್ದೀರಾ? ಹೌದು, ಇಂತಹದೊಂದು ಪದ್ಧತಿ ಇದೆ. ಅದು ಭಾರತದಲ್ಲಿ ಇದೆ ಎಂಬುವುದು ಅಚ್ಚರಿಯ ವಿಚಾರವಾಗಿದೆ.
ಹೌದು, ಮಧ್ಯಪ್ರದೇಶದ(Madhyapradesh) ಶಿವಪುರಿಯಲ್ಲಿರುವ ವಿಚಿತ್ರ ಸಂಸ್ಕೃತಿಯಾಗಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಪತ್ನಿಯರನ್ನು ವಿದೇಶಿ ಪುರುಷರಿಗೆ ಬಾಡಿಗೆಗೆ ನೀಡಲಾಗುತ್ತದೆ. ಒಂದು ತಿಂಗಳು ಅಥವಾ ಒಂದು ವರ್ಷಕ್ಕೆ ಬಾಡಿಗೆ. ಶ್ರೀಮಂತರಿಗೆ ವಧು ಸಿಗದಿದ್ದರೆ ಬೇರೆಯವರ ಹೆಂಡತಿಯನ್ನು ಹೀಗೆ ಬಾಡಿಗಗೆ ಬರುತ್ತಾರೆ.ಇದಕ್ಕಾಗಿ ಸಂತೆ ನಡೆಸಲಾಗುತ್ತದೆ.
ಇದನ್ನು ಧದೀಚಾ ಪ್ರಾತ ಎಂದು ಕರೆಯಲಾಗುತ್ತದೆ. ಮಾತ್ರವಲ್ಲದೆ ಮಹಿಳೆಯರನ್ನು ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕುವ ಮೂಲಕ ಗುತ್ತಿದೆ ಆಧಾರ ಮೇಲೆ ಬಾಡಿಗೆಗೆ ಕರೆದುಕೊಂಡು ಹೋಗುತ್ತಾರೆ. 10 ರೂ, ಅಥವಾ 100 ರೂ.ವಿನ ಸ್ಟ್ಯಾಂಪ್ ಪೇಪರ್ ಬಳಸಿ ಗುತ್ತಿಗೆಗೆ ಆಧಾರದ ಮೇಲೆ ಅಗತ್ಯವಿರುವ ಪುರುಷನಿಗೆ ಮಹಿಳೆಯನ್ನು ವಿನಿಮಯ ಮಾಡಲಾಗುತ್ತದೆ.
ಒಪ್ಪಂದದ ಅವಧಿಯ ಕೊನೆಯಲ್ಲಿ, ಮೊದಲು ಬಾಡಿಗೆಗೆ ಪಡೆದವರು ಹೆಚ್ಚಿನ ಹಣ ಪಾವತಿಸಿ ಒಪ್ಪಂದವನ್ನು ನವೀಕರಿಸಬಹುದು. ಇಲ್ಲವೆ ಹಣವನ್ನು ಕೊಟ್ಟು ಒಪ್ಪಂದವನ್ನು ಅಂತ್ಯಗೊಳಿಸಬಹುದಾಗಿದೆ. ಮಹಿಳೆ ಯಾವುದೇ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸಬಹುದು. ಅದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅದರ ನಂತರ ಆಕೆಯನ್ನು ಪತಿಗೆ ಹಿಂತಿರುಗಿಸಲಾಗುತ್ತದೆ. ಆದರೆ ಇಲ್ಲಿ ಮಹಿಳೆ ಇನ್ನೊಬ್ಬ ವ್ಯಕ್ತಿಯಿಂದ ಹೆಚ್ಚಿನ ಹಣವನ್ನು ನಿರೀಕ್ಷಿಸುವುದು ಒಪ್ಪಂದದ ಉಲ್ಲಂಘನೆಯಾಗಿದೆ.
ವಿಚಿತ್ರ ಅಂದರೆ ಧದೀಚಾ ಪ್ರಾತದಂತೆ ಈ ಸಂಸ್ಕೃತಿಗಾಗಿಯೇ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಹೆಣ್ಣುಮಕ್ಕಳು ಸಂಪ್ರದದಾಯದ ಹೆಸರಿನಲ್ಲಿ ನಿಲ್ಲುವಂತೆ ಮಾಡುತ್ತಾರೆ. ನಂತರ ಪುರುಷರು ತಮ್ಮ ಆಯ್ಕೆಯ ಮಹಿಳೆಯರ ಬೆಲೆಯನ್ನು ನಿರ್ಧರಿಸುವ ಮೂಲಕ ಕರೆದುಕೊಂಡು ಹೋಗುತ್ತಾರೆ.