

Honey Trapping: ಖಾಸಗಿ ಕಂಪನಿಯ ಎಚ್ಆರ್ ಮ್ಯಾನೇಜರ್ ಒಬ್ಬರು ಸೈಬರ್ ವಂಚಕರ ಹನಿ ಟ್ರಾಪ್ಗೆ ಸಿಲುಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೋಯ್ಡಾದ ಬರೌಲಾ ಗ್ರಾಮದಲ್ಲಿ ನಡೆದಿದೆ. ಸೈಬರ್ ಕ್ರಿಮಿನಲ್ಗಳು ವಿಡಿಯೋ ಕಾಲ್ ಮೂಲಕ ಆತನ ಅಶ್ಲೀಲ ವೀಡಿಯೋ ಮಾಡಿ ಹನಿಟ್ರ್ಯಾಪ್ ಮೂಲಕ ಬ್ಲಾಕ್ಮೇಲ್ ಮಾಡುತ್ತಿದ್ದು ಇದರಿಂದ ಮನನೊಂದ ಮ್ಯಾನೇಜರ್ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೃತ ಮ್ಯಾನೇಜರ್ ತಂದೆ ಸೆಕ್ಟರ್-49 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Job Alert: ವಿಸಿಟಿಂಗ್ ಕನ್ಸಲ್ಟೆಂಟ್ ನಲ್ಲಿ ಉದ್ಯ್ಯೋಗವಿದೆ! ಈಗಲೇ ಅರ್ಜಿ ಸಲ್ಲಿಸಿ
ಮೃತ ಅಭಿಷೇಕ್ ರಾಜ್ ಗುಪ್ತಾ ತಂದೆ ಫೂಲ್ಚಂದ್ ಗುಪ್ತಾ ಬುಧವಾರ ಪೊಲೀಸರಿಗೆ ದೂರು ದಾಖಲಿಸಿದ್ದು, ತನ್ನ ಮಗ ಅಭಿಷೇಕ್ ರಾಜ್ ಗುಪ್ತಾ ನೋಯ್ಡಾದ ಬರೌಲಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನೋಯ್ಡಾದ ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕ ಹುದ್ದೆಯಲ್ಲಿದ್ದ. ಏಪ್ರಿಲ್ 23 ರಂದು ಮಗ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತೀಚೆಗೆ ಕೆಲವು ದಿನಗಳಿಂದ ಮಗನ ಮೊಬೈಲ್ಗೆ ಸಂದೇಶಗಳು ಮತ್ತು ಇಮೇಲ್ಗಳು ಬರುತ್ತಿದ್ದವು. ಕೆಲವರು ಆತನನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸಿ ಅಶ್ಲೀಲ ವಿಡಿಯೋ ಮಾಡಿದ್ದರು. ಆ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Kushalanagara: ಬೀಗರೂಟ ಸೇವಿಸಿ ವಧು-ವರ ಸೇರಿ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ!!
ಅಭಿಷೇಕ್ ರಾಜ್ ಗುಪ್ತಾ ಆತ್ಮಹತ್ಯೆಗೂ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಈ ವಿಷಯ ತಿಳಿಸಿದ್ದು, ಆತನ ತಂದೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದರು.
ಅಭಿಷೇಕ್ ರಾಜ್ ಗುಪ್ತಾ ಇತ್ತೀಚಿಗಷ್ಟೇ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಆದರೆ ಅವನ ಹೆಂಡತಿ ಇಲ್ಲಿಗೆ ಬಂದಿರಲಿಲ್ಲ. ಬರೌಲಾದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅಭಿಷೇಕ್ ರಾಜ್ ಗುಪ್ತಾ ಅಕ್ಕನ ಫೋನ್ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದ ನಂತರ ಹನಿಟ್ರ್ಯಾಪ್ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ













