Parliment Election : ಮಂಗಳೂರು ಮತಗಟ್ಟೆ – ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ !!

Parliment Election : ರಾಜ್ಯದಲ್ಲಿ ಮತದಾನಕ್ಕೆ (Election) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬೆಳಗ್ಗೆ 9 ಗಂಟೆಯ ವೇಳೆಗೆ ಕರ್ನಾಟಕದಲ್ಲಿ (Karnataka) 9.21% ಮತದಾನ ನಡೆದಿದೆ. ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಆದರೆ ಆದರೆ ಮಂಗಳೂರಿನ ಮತಗಟ್ಟೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಗೂಂಡಾಗಿರಿ ನಡೆಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:  OBC-Muslim Reservation: ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ ಕರ್ನಾಟಕದ ‘ಮುಸ್ಲಿಂ ಮೀಸಲಾತಿ’ – ಏನಿದು ‘ಒಬಿಸಿ- ಮುಸ್ಲಿಂ ಮೀಸಲಾತಿ’?

ಹೌದು, ನಗರದ ಕಂಕನಾಡಿ(Kankanadi) ಕಪಿತಾನಿಯೋ ಶಾಲಾ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಈ ಘಟನೆ ನಡೆದಿದೆ. ಕಾಂಗ್ರೆಸ್(Congress) ಅಭ್ಯರ್ಥಿ ಜೊತೆ ಜನ ಸೇರಿರೋದನ್ನು ಬಿಜೆಪಿ ಕಾರ್ಯಕರ್ತರ ಸಂದೀಪ್ ಎಕ್ಕೂರು(Sandeep Ekkaru) ಪ್ರಶ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರಿಂದ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆದಿದ್ದು, ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಇತ್ತ ಇದನ್ನು ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಡಿದ್ದಾರೆ.

ಇದನ್ನೂ ಓದಿ:  Hubballi: ಫಯಾಜ್ ಮೊದಲೇ ನನ್ನ ಮಗಳನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದ – ಮತ್ತೊಂದು ಸತ್ಯ ಬಿಚ್ಚಿಟ್ಟ ನೇಹಾ ತಂದೆ !!

ಅಂದಹಾಗೆ ಇದುವರೆಗೂ ನಡೆದ ಮತದಾನದಲ್ಲಿ ದಕ್ಷಿಣ ಕನ್ನಡದಲ್ಲಿ (Dakshina Kannada) ಅತಿ ಹೆಚ್ಚು 14.33% ದಾಖಲಾದರೆ ಚಾಮರಾಜನಗರ ಮತ್ತು ಮಂಡ್ಯದಲ್ಲಿ 7.70% ಮತದಾನ ದಾಖಲಾಗಿದೆ. ರಾಜ್ಯದ ಕೆಲವೆಡೆ ಎವಿಎಂ ದೋಷದಿಂದಾಗಿ ಕೆಲ ಸಮಸ್ಯೆಯಾಗಿತ್ತು. ನಂತರ ಇವಿಎಂ ದೋಷವನ್ನು ಸರಿಪಡಿಸಿದ್ದು ಈಗ ಮತದಾನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಪತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆ ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

Leave A Reply

Your email address will not be published.