Exicutive job: ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷ ಸಂಬಳ!

Share the Article

Exicutive job: ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 36 ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಎನ್ಸಿಎಲ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಜಿ ಪ್ರಕ್ರಿಯೆ ಏಪ್ರಿಲ್ 29ರಿಂದ ಆರಂಭವಾಗಲಿದೆ. ಮೇ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಯ ಮಾಹಿತಿ:

ಎಕ್ಸಿಕ್ಯೂಟಿವ್- ಆಪರೇಷನ್- 24

ಎಕ್ಸಿಕ್ಯೂಟಿವ್- ಮೈಂಟೆನನ್ಸ್- 12

ವಿದ್ಯಾರ್ಹತೆ:

ಎಕ್ಸಿಕ್ಯೂಟಿವ್- ಆಪರೇಷನ್- ಕೆಮಿಕಲ್/ಸಿ&ಐ/ಇ&ಐ/ಇಸಿಇ/ಎಲೆಕ್ಟ್ರಿಕಲ್/ಇಇಇ/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ಎಕ್ಸಿಕ್ಯೂಟಿವ್- ಮೈಂಟೆನನ್ಸ್- ಸಿವಿಲ್/ಕೆಮಿಕಲ್/ಸಿ&ಐ/ಇ&ಐ/ಇಸಿಇ/ಎಲೆಕ್ಟ್ರಿಕಲ್/ಇಇಇ/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ

ವಯೋಮಿತಿ:

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಮಾಸಿಕ ₹ 70,000-1,00,000

ಅರ್ಜಿ ಶುಲ್ಕ:

SC/ST/ಮಾಜಿ ಸೈನಿಕ ಅಭ್ಯರ್ಥಿಗಳು: ರೂ.354/-

UR/EWS/OBC (NCL) ಅಭ್ಯರ್ಥಿಗಳು: ರೂ.854/-

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.

https://www.nlcindia.in/new_website/index.htm ಅಪ್ಲೈ here

Leave A Reply