Bengaluru Murder Case: ಒಂಟಿ ಮಹಿಳೆ ಕೊಲೆ ಪ್ರಕರಣ; ಮಹಿಳೆಗಿತ್ತು ಅತಿಯಾದ ಕಾಮಾಸಕ್ತಿ, ಆರೋಪಿ ಬಂಧನ

Share the Article

Bengaluru Murder Case: ಅತಿಯಾದ ಮನೋಕಾಮನೆಯನ್ನು ಹೊಂದಿದ್ದ ಮಹಿಳೆಯೊಬ್ಬಳು ತನ್ನ ಮನಸ್ಸಿಗೆ ಬಂದಂತೆ ಹುಡುಗರನ್ನು ಬದಲಾಯಿಸುತ್ತಿದ್ದು, ಈಕೆ ಒಟ್ಟು 20 ಹುಡುಗರ ಸಹವಾಸವನ್ನು ಹೊಂದಿದ್ದಳು ಎನ್ನಲಾಗಿದೆ. ಆಕೆ ಇವರಿಗೆ ಇಟ್ಟ ಹೆಸರೆಲ್ಲ ಡಿಫರೆಂಟ್.‌ ಆರೆಂಜ್‌, ಆಪಲ್‌, ಬನಾನಾ ಇತ್ಯಾದಿ ಇತ್ಯಾದಿ. ಆದರೆ ಇದೇ ಆಕೆಗೆ ಸಾವಿನ ದಾರಿ ತೋರಿಸಿತು.

ಇದನ್ನೂ ಓದಿ:  TS Inter Result: ಇಂದು ಟಿಎಸ್ ಇಂಟರ್ ರಿಸಲ್ಟ್! ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಕಳೆದ ಎ.19 ರಂದು ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನ ಗಣೇಶ ನಗರದಲ್ಲಿ ಒಂಟಿ ಮಹಿಳೆಯೊಬ್ಬಳ ಬರ್ಬರ ಕೊಲೆಯಾಗಿತ್ತು. ಶೋಭಾ (48) ಎಂಬಾಕೆಯೇ ಈ ಮೃತ ಮಹಿಳೆ. ಬೆಡ್‌ರೂಮಿನಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆಯಾಗಿತ್ತು. ಕೊಲೆ ರಹಸ್ಯವನ್ನು ಭೇದಿಸಿರುವ ಕೊಡಿಗೇಹಳ್ಳಿ ಪೊಲೀಸರು ಹೇರೋಹಳ್ಳಿ ಮೂಲದ ನವೀನ್‌ ಎಂಬಾತನನ್ನು ಬಂಧಿಸಿದ್ದು, ತನಿಖೆಯ ವೇಳೆ ಮಹಿಳೆಯ ಕಾಮಕೇಳಿ ಕೇಳಿ ಪೊಲೀಸರು ದಂಗಾಗಿದ್ದಾರೆ.

ಇದನ್ನೂ ಓದಿ:  Manjummel Boys: ಮಲಯಾಳಂ ಹಿಟ್‌ ಸಿನಿಮಾ ʼಮಂಜುಮ್ಮೇಲ್‌ ಬಾಯ್ಸ್‌ʼ ಹಾಟ್‌ಸ್ಟಾರ್‌ನಲ್ಲಿ-ಅಧಿಕೃತ ಮಾಹಿತಿ ನೀಡಿದ ಒಟಿಟಿ ಸಂಸ್ಥೆ

ಒಂಟಿಯಾಗಿ ಕೊಡಿಗೆಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ಶೋಭಾ, ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾ ಮಾಡಿಕೊಟ್ಟಿದ್ದರು. ಈಕೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್‌ ಪರಿಚಯವಾಗಿ, ಚಾಟ್‌ ಮಾಡುತ್ತಾ ನಂತರ ಇವರಿಬ್ಬರ ಆತ್ಮೀಯತೆ ಬೆಳೆಯಿತು. ನವೀನ್‌ಗೆ ಮೊದ ಮೊದಲಿಗೆ ಶೋಭಾಳ ಸಂಗ ಬಹಳ ಖುಷಿ ಕೊಟ್ಟಿತ್ತು. ಆದರೆ ಆಕೆಯ ಕಾಮದ ವಿಕೃತತೆ ಹೆಚ್ಚುತ್ತಿದ್ದಂತೆ ನವೀನ್‌ ಗೆ ಸಾಕಾಗುತ್ತಿತ್ತು.

ಕೊಲೆ ನಡೆದ ದಿನ ಶೋಭಾ ಮನೆಗೆ ನವೀನ್‌ ಬಂದಿದ್ದು, ಇಬ್ಬರೂ ದೈಹಿಕ ಸಂಪರ್ಕ ಹೊಂದಿದ್ದು, ಆದರೆ ಶೋಭಾ ಮತ್ತೆ ಮತ್ತೆ ನವೀನ್‌ ಬಳಿ ಅತಿಯಾದ ಸೆಕ್ಸ್‌ಗೆ ಒತ್ತಾಯ ಮಾಡಿದ್ದಳು. ಇದರಿಂದ ಬೇಸತ್ತ ನವೀನ್‌ ಸಿಟ್ಟುಗೊಂಡು ಆಕೆಯ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದ.

48 ರ ಶೋಭಾಗೆ ಯುವಕರೆಂದರೆ ಹುಚ್ಚು ಅಂತೆ. ಈಕೆ ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹೆಸರು ಇಟ್ಟಿದ್ದಳು. ಆಪಲ್, ಆರೆಂಜ್‌, ಬನಾನಾ ಹೆಸರಿನಲ್ಲಿ ಹುಡುಗರ ಹೆಸರು ಸೇವ್‌ ಮಾಡುತ್ತಿದ್ದಳು. ಶೋಭಾ ಕಾಲ್‌ಗರ್ಲ್‌ ಆಪ್‌ಗಳಲ್ಲಿಯೂ ಆಕ್ಟಿವ್‌ ಆಗಿದ್ದು, ಸುಮಾರು 20 ಕ್ಕೂ ಹೆಚ್ಚು ಹುಡುಗರ ಸಂಗ ಬೆಳೆಸಿಕೊಂಡಿದ್ದರು ಎಂದು ವರದಿಯಾಗಿದೆ.

ಈಕೆ ಹುಡುಗರನ್ನು ಕರೆದರೆ, ಒಂದು ವೇಳೆ ಇವರು ಆಕೆಯ ಮನೆಗೆ ಹೋಗದೇ ಇದ್ದರೆ ಸೀದಾ ಆ ಹುಡುಗರ ಮನೆಗೇ ಹೋಗುತ್ತಿದ್ದು, ಅಲ್ಲಿಂದ ಕಾರಿನಲ್ಲಿ ಜೋರಾಗಿ ಹಾರ್ನ್‌ ಹಾಕುತ್ತಿದ್ದಳು. ಇದಕ್ಕೂ ಕ್ಯಾರ್‌ ಮಾಡದೇ ಹೋದರೆ, ಮನೆಯವರಿಗೆ ಖಾಸಗಿ ಫೋಟೋ ತೋರಿಸುವುದಾಗಿ ಬೆದರಿಕೆ ಬೇರೆ ಹಾಕುತ್ತಿದ್ದಳು. ಬೇರೆಯವರನ್ನು ಮದುವೆಯಾಗಲು ಆ ಹುಡುಗರು ಸಜ್ಜಾದರೆ , ಹೇಗಾದರೂ ಮಾಡಿ ಅವರ ಮದುವೆಯನ್ನು ತಪ್ಪಿಸುತ್ತಿದ್ದಳು. ಹೀಗೆ ಈಕೆ ಮಾಡಿ ಒಟ್ಟಾರೆ ನಾಲ್ವರ ಮದುವೆಯನ್ನು ನಿಲ್ಲಿಸಿದ್ದಾಳೆ.

ಆರೋಪಿ ನವೀನ್‌ಗೆ ಕೂಡಾ ಈಕೆ ಕಾಟ ಕೊಟ್ಟಿದ್ದಳು. ಮನೆಗೆ ಕರೆದಾಗ ಬಂದಿಲ್ಲ ಎಂದರೆ ಬೆದರಿಕೆ ಹಾಕುತ್ತಿದ್ದಳು. ಈಕೆಗೆ ಹೆದರಿ ನವೀನ್‌ ಹೋಗುತ್ತಿದ್ದ. ನವೀನ್‌ ಎಡಗೈಗೆ ಗಾಯವಾಗಿತ್ತು. ಆ ಗಾಯದ ಮೇಲೆ ಕುಳಿತು ನೀನು ಮದುವೆ ಆಗಬಾರದು, ಹೀಗೆ ನನ್ನ ಜೊತೆ ಇರಬೇಕು ಎಂದು ಹೇಳಿ ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌ ಶೋಭಾಳ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿರುವ ಕುರಿತು ವರದಿಯಾಗಿದೆ.

ಕೊಡಿಗೇಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Leave A Reply